ದರ್ಶನ್ ಬಗ್ಗೆ ರಕ್ಷಕ್ ಬುಲೆಟ್‌ "ಆನೆ ಮಾತು" ಫುಲ್‌ ವೈರಲ್!

ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ತೂಗುದೀಪ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ ಹಲವು ನಟ ಹಾಗೂ ನಟಿಯರು ಪ್ರತಿಕ್ರಿಯಿಸಿದ್ದಾರೆ. ಇದೀಗ ರಕ್ಷಕ್ ಬುಲೆಟ್‌ ಸಹ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ನಟ ದರ್ಶನ್ ಅವರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದ ಹಾಗೂ ಗೌರವ ಭಾವ ತೋರುತ್ತಿದ್ದವರಲ್ಲಿ ರಕ್ಷಕ್‌ ಬುಲೆಟ್‌ ಸಹ ಒಬ್ಬರು. ಆದರೆ, ಕೆಲವೊಮ್ಮೆ ಎಲ್ಲೆ ಮೀರಿದ ಮಾತು ರಕ್ಷಕ್‌ಗೆ ತಿರುಗುಬಾಣವಾಗಿದ್ದು ಇದೆ. ಇದೀಗ ದರ್ಶನ್‌ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ರಕ್ಷಕ್‌ ದರ್ಶನ್ ಅವರನ್ನು ಆನೆಗೆ ಹೋಲಿಕೆ ಮಾಡಿ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ.

Rakshak Bullet about actor Darshan has gone viral

ದರ್ಶನ್ ತೂಗುದೀಪ್ ಅವರಿಗೆ ತೀವ್ರ ಬೆನ್ನಿನ ನೋವು ಹಾಗೂ ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಅವರಿಗೆ ಆರು ತಿಂಗಳುಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಈ ಅವಧಿಯಲ್ಲಿ ಅವರಿಗೆ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಮಾತ್ರ ಅವಕಾಶ ಇರಲಿದೆ. ಮಧ್ಯಂತರ ಜಾಮೀನು ನೀಡುವಾಗ ಕೋರ್ಟ್‌ 8 ಪ್ರಮುಖ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಪಾಲನೆ ಮಾಡಬೇಕಾಗಿದೆ.

ಕೋರ್ಟ್‌ ವಿಧಿಸಿದ ಯಾವುದೇ ಷರತ್ತುಗಳು ಉಲ್ಲಂಘನೆಯಾದರೂ, ಅವರ ಮಧ್ಯಂತರ ಜಾಮೀನಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, ಅವರ ಮನೆಯ ಮುಂದೆ ಹೆಚ್ಚು ಅಭಿಮಾನಿಗಳು ಸೇರಿದ್ದಾಗ ದರ್ಶನ್‌ ಅವರ ಮಗ ಸಹ ಮನವಿ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ. ನಟ ದರ್ಶನ್‌ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ, ಹಲವರು ಅವರನ್ನು ನೇರವಾಗಿ ನೋಡಲು ಹೋಗುತ್ತಿಲ್ಲ. ಅದು ಅವರ ಆರೋಗ್ಯ ದೃಷ್ಟಿಯಿಂದ ಹಾಗೂ ಅವರ ಕುಟುಂಬದೊಂದಿಗೆ ಕಾಲ ಕಳೆಯಲಿ ಎನ್ನುವ ಕಾರಣವೂ ಇದೆ.

ಹಲವು ಸ್ಯಾಂಡಲ್‌ವುಡ್‌ ನಟ, ನಟಿಯರು ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ದಾಸನ ಬಗ್ಗೆ ಇರುವ ಅಭಿಮಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರಕ್ಷಕ್‌ ಬುಲೆಟ್‌ ಸಹ ಒಬ್ಬರು. ರಕ್ಷಕ್‌ ದರ್ಶನ್ ಅವರನ್ನು ಪರೋಕ್ಷವಾಗಿ ಆನೆಗೆ ಹೋಲಿಕೆ ಮಾಡಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

Rakshak Bullet about actor Darshan has gone viral

ದರ್ಶನ್ ಬಗ್ಗೆ ರಕ್ಷಕ್ ಬುಲೆಟ್‌ ಹೇಳಿದ್ದೇನು ?

ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬರುತ್ತಿದ್ದಂತೆಯೇ ಇನ್ಸ್ಟಾಗ್ರಾಮ್ ನಟ ರಕ್ಷಕ್‌ ಬುಲೆಟ್‌ ಅವರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ "ಫಾರೆಸ್ಟ್‌ನಲ್ಲಿ ಆನೆ ತಪ್ಪಿಸಿಕೊಂಡಿದೆ ಅಂತ ಸಾಕಷ್ಟು ಜನ ಮಾತಾಡ್ತಿದ್ದಾರೆ. ಆದರೆ, ಅವರಿಗೇನು ಗೊತ್ತು ಫಾರೆಸ್ಟ್‌ ಅವರೇ ಆನೆನ ಬಿಟ್ಟಿದ್ದು ಅಂತ" ಎಂದು ಹೇಳಿದ್ದಾರೆ.

ದರ್ಶನ್‌ ಅವರು ಮಧ್ಯಂತರ ಜಾಮೀನಿನ ಮೇಲೆ ಬರುತ್ತಿದ್ದಂತೆಯೇ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಡಿಯೋದಲ್ಲಿ ಎಲ್ಲೂ ರಕ್ಷಕ್‌ ದರ್ಶನ್‌ ಅವರ ಹೆಸರು ಹೇಳಿಲ್ಲ. ಆದರೆ, ಅವರಿಗೆ ಹೋಲಿಕೆ ಮಾಡಲಾಗಿದೆ ಅಂತ ಫ್ಯಾನ್ಸ್‌ ಹೇಳ್ತಾ ಇದ್ದಾರೆ. ಈ ವಿಡಿಯೋ 37.8k ಶೇರ್‌ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+