Rakesh Poojary: ತನ್ನ & ತಂಗಿ ಅದ್ಧೂರಿ ಮದುವೆ ಕನಸು ಕಂಡಿದ್ದ ರಾಕೇಶ್ ಪೂಜಾರಿ, ಗೆಳೆಯರ ಬಳಿ ಹೇಳಿಕೊಂಡಿದ್ದೇನು!
ಕಿರುತೆರೆಯ ಮೂಲಕ ಈಗಷ್ಟೇ ಬದುಕು ಕಟ್ಟಿಕೊಳ್ಳುತ್ತಿದ್ದ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಧ್ಯಮ ವರ್ಗದಿಂದ ಬಂದ ರಾಕೇಶ್ ಬಡತನದಿಂದಲೇ ಜೀವನ ಕಟ್ಟಿಕೊಂಡಿದ್ದರು. ತನ್ನ ಹಾಗೂ ತನ್ನ ತಂಗಿಯ ಮದುವೆಯ ಬಗ್ಗೆ ಹಲವು ಕನಸುಗಳನ್ನು ರಾಕೇಶ್ ಕಟ್ಟಿಕೊಂಡಿದ್ದರು. ಆದರೆ, ಇನ್ನೇನು ಯಶಸ್ಸಿನ ಹಾದಿಯಲ್ಲಿ ಇರುವಾಗಲೇ ರಾಕೇಶ್ ಕೊನೆಯುಸಿರೆಳೆದಿದ್ದಾರೆ. ತನ್ನ ಹಾಗೂ ತನ್ನ ತಂಗಿಯ ಮದುವೆಯ ಬಗ್ಗೆ ರಾಕೇಶ್ ಕಟ್ಟಿಕೊಂಡಿದ್ದ ಕನುಸಗಳೇನು ಹಾಗೂ ಅವರ ಕಿರುತೆರೆ ಪಯಣ ಹೇಗಿತ್ತು ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ರಾಕೇಶ್ ಕನ್ನಡ ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಹುಡುಗ. ಆತನ ಯಶಸ್ಸನ್ನು ಕನ್ನಡಿಗರು ತಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿದ್ದರು. ರಾಕೇಶ್ ಪೂಜಾರಿ ಇಡೀ ಮನೆಗೆ ಆಧಾರ ಸ್ತಂಭವಾಗಿದ್ದರು. ಒಬ್ಬರೇ ಮನೆಗೆ ಆಧಾರಸ್ತಂಭವಾಗಿ ಆರ್ಥಿಕವಾಗಿ ಶಕ್ತಿಯಾಗಿದ್ದರು. ರಾಕೇಶ್ ಅವರು ಅವರ ಹಾಗೂ ಅವರ ತಂಗಿಯ ಮದುವೆ ಬಗ್ಗೆ ಬಹು ದೊಡ್ಡ ಕನಸು ಕಂಡಿದ್ದರು. ರಾಕೇಶ್ ಪೂಜಾರಿಯವರಿಗೆ ಮೊದಲು ಹಾಗೂ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದ್ದೇ "ಕಾಮಿಡಿ ಕಿಲಾಡಿಗಳು ಸೀಸನ್ 3" ವಿನ್ನರ್ ಮೂಲಕ. ಆದರೆ, ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಅವರು ನೋವಿನಿಂದಲೇ ಜೀವನ ಕಟ್ಟಿಕೊಂಡಿದ್ದರು. ಕಾಮಿಡಿ ಕಿಲಾಡಿನಲ್ಲಿ ವಿನ್ನರ್ ಆಗಬೇಕು ಎನ್ನುವುದು ರಾಕೇಶ್ ಅವರು ಹಗಲಿರುಳು ಎನ್ನದೆ ಕಷ್ಟಪಟ್ಟಿದ್ದರು.

ಅಲ್ಲದೇ ದುಡ್ಡು ಕೂಡಿಸಿಟ್ಟು ಅದ್ಧೂರಿಯಾಗಿ ಮದುವೆ ಮಾಡುವುದಕ್ಕೆ ಅವರು ಸಿದ್ಧತೆ ನಡೆಸಿದ್ದರು ಅಂತಾರೆ ಅವರ ಆತ್ಮೀಯರು. ತಂಗಿ ಮದುವೆ ಮಾಡುವ ಜವಾಬ್ದಾರಿ ಅವರ ಮೇಲಿತ್ತು. ತಂಗಿ ಮದುವೆ ಆದ ಮೇಲೆ ನಾನು ಮದುವೆ ಆಗ್ತೀನಿ. ತಂಗಿ ಮದುವೆ ಮಾಡಿಸಿದರೆ, ದೊಡ್ಡ ಜವಾಬ್ದಾರಿ ಇಳಿಯಲಿದೆ. ಆದರೆ ಆ ಕನಸುಗಳಲ್ಲವೂ ಈಗ ನುಚ್ಚು ನೂರಾಗಿದೆ. ಆದರೆ ಅವರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.
ಸಣ್ಣ ಸಣ್ಣ ಪಾತ್ರಗಳಿಂದಲೇ ಮೂಡಿದ ಪ್ರತಿಭೆ: ರಾಕೇಶ್ ಪೂಜಾರಿ ಸಣ್ಣ ಸಣ್ಣ ಪಾತ್ರಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದರು. ಕನ್ನಡಿಗರಿಗೆ ಕಿರುತೆರೆಯ ಮೂಲಕ ಮಿಂಚಿದ್ದರು. ತುಳು ಹಾಗೂ ಕನ್ನಡ ನಾಟಕ ಮತ್ತು ರಿಯಾಲಿಟಿ ಶೋಗಳ ಮೂಲಕ ಅವರು ಮಿಂಚಿದ್ದಾರೆ. ರಾಕೇಶ್ ಅವರು ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಎನ್ನುವ ಪ್ರಮುಖ ನಾಟಕಗಳಲ್ಲಿ ನಟಿಸಿದ್ದರು. ತುಳುವಿನಲ್ಲೂ ಪೆಟ್ಕಮ್ಮಿ ಹಾಗೂ ಪಮ್ಮನ್ನೆ ದಿ ಗ್ರೇಟ್ ಎನ್ನುವುದು ಸೇರಿದಂತೆ ಪ್ರಮುಖ ನಾಟಕಗಳನ್ನು ಮಾಡಿದ್ದಾರೆ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ಕಂಬನಿ ಮಿಡಿದ ಸ್ನೇಹಿತರಿ & ಅಭಿಮಾನಿಗಳು: ರಾಕೇಶ್ ಅವರ ನಿಧನದಿಂದ ಅವರ ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳು ಭಾರೀ ಶಾಕ್‌ಗೆ ಒಳಗಾಗಿದ್ದಾರೆ. ಅವರು ಎಲ್ಲರೊಂದಿಗೂ ನಗುತ್ತಿದ್ದರು ಹಾಗೂ ನಗಿಸುತ್ತಿದ್ದರು. ಆದರೆ ಅವರ ಸಾವು ಅವರ ಆಪ್ತ ವಲಯದಲ್ಲಿ ಭಾರೀ ನೋವನ್ನುಂಟು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಸಂಬಂಧ ನೋವು ತೋಡಿಕೊಂಡಿದ್ದಾರೆ.












Click it and Unblock the Notifications