Coolie: ರಜನಿ ಸಿನಿಮಾ 'ಕೂಲಿ' ಪ್ರೇಕ್ಷಕರ ಜೇಬಿಗೆ ಕತ್ತರಿ! ಒಂದು ಟಿಕೆಟ್ ಬೆಲೆ ₹2000: 05 ಲಕ್ಷ ಟಿಕೆಟ್ ಮಾರಾಟ
ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಟಿಸಿರುವ 'ಕೂಲಿ' ಸಿನಿಮಾಗೆ ಎ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ರೋಮಾಂಚನಕಾರಿ ಕ್ಲೈಮ್ಯಾಕ್ಸ್ ಹೊಂದಿದೆ ಎನ್ನಲಾಗುತ್ತಿರುವ ಈ ಮಲ್ಟಿ ಸ್ಟಾರರ್ ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಸೃಷ್ಟಿಯಾಗಿವೆ. ಇದೇ ಆಗಸ್ಟ್ 14ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ವಿಪರ್ಯಾಸವೆಂದರೆ ಸಿನಿ ಪ್ರೇಕ್ಷಕರಿಗೆ ಈ ಸನಿಮಾ ಆರ್ಥಿಕ ಹೊರೆ ಉಂಟು ಮಾಡಲಿದೆ. ಏಕೆಂದರೆ ಟಿಕೆಟ್ ದರ 200 ರೂಪಾಯಿ ಅಲ್ಲ. 2000 ರೂಪಾಯಿ ಗೆ ಹೆಚ್ಚಿಸಲಾಗಿದೆ.
ನಟ ರಜನಿಕಾಂತ್ ಸಿನಿಮಾ ಅಂದ್ರೆನೇ ಹಾಗೆ ಯಾವಾಗಲೂ ಸಖತ್ ಕ್ರೇಜ್ ಸೃಷ್ಟಿಸುತ್ತವೆ. ಈ ಬಾರಿ ಅದು ದುಪ್ಪಟ್ಟಾಗಿದೆ. ಏಕೆಂದರೆ ಈ 'ಕೂಲಿ' ಸಿನಿಮಾದಲ್ಲಿ ರಜನಿಕಾಂತ್ ವಿರುದ್ಧ ನೆಗಟಿವ್ ಶೇಡ್‌ನಲ್ಲಿ ತಲುಗಿನ ಸ್ಟಾರ್ ನಟ ನಾಗಾರ್ಜುನ್ ಅಕ್ಕಿನೇನಿ ಅಬ್ಬರಿಸಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್‌ನ ಅಮೀರ್ ಖಾನ್ ಸೇರಿದಂತೆ ಬಹುತಾರಾಗಣವೇ ಇದರಲ್ಲಿದೆ. ಲೋಕೇಶ್ ಕನಗರಾಜ್ ಅವರ ನಿರ್ದೇಶನವಿದ್ದು ಇದು ಸಹ ಸಿನಿಮಾದ ಕ್ರೇಜ್ ಹೆಚ್ಚಾಗುವಂತೆ ಮಾಡಿದೆ. ಸಿನಿಮಾ ಯಾವಾಗ ರಲೀಸ್ ಆಗುತ್ತೋ ಎಂದು ಕಾಯುತ್ತಿದ್ದ ರಜನಿ ಅಭಿಮಾನಿಗಳಿಗೆ ಟಿಕೆಟ್ ದರ ಹೆಚ್ಚಳ ಆಘಾತ ನೀಡಿದೆ.

ಕೂಲಿ ಟಿಕೆಟ್ ದರ ಗಗನಕ್ಕೆ! 5ಲಕ್ಷ ಟಿಕೆಟ್ ಸೇಲ್
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿಗೆ ಮಿತಿ ನಿಗದಿ ಮಾಡಿದ ಸರ್ಕಾರ ಕರಡು ನಿಯಮ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿದೆ. ಈ ಮಧ್ಯೆ ರಿಲೀಸ್ ಆಗಲಿರುವ 'ಕೂಲಿ' ಸಿನಿಮಾ ಟಿಕೆಟ್ 2000 ರೂಪಾಯಿ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಟಿಕೆಟ್ ಮಾರಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದು ಬೆಳಗ್ಗೆ 06 ಗಂಟೆಯಿಂದಲೇ ಚಿತ್ರ ಪ್ರದರ್ಶನಗಳು ಶುರುವಾಗಲಿವೆ. ನೂರಾರು ಥಿಯೇಟರ್‌ನಲ್ಲಿ ಧೂಳೆಬ್ಬಿಸಲು 'ಕೂಲಿ' ರೆಡಿಯಾಗಿದೆ. ಆದರೆ 200 ರೂ.ಟಿಕೆಟ್ ನಿಗದಿ ಮಾಡುವಂತೆ ಒತ್ತಾಯಿಸಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷರ ಒಡೆತನದ ಥಿಯೇಟರ್‌ನಲ್ಲೆ ಟಿಕೆಟ್ ದರ 800 ರೂಪಾಯಿ ಹೆಚ್ಚಾಗಿದೆ.
ಬೆಂಗಳೂರಿನ ಎಂ.ಜಿ ರಸ್ತೆಯ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿ 2000 ರೂಪಾಯಿ ಹಾಗೂ 1500 ರೂಪಾಯಿ ಬೆಲೆಯ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಇದೇ ರೀತಿ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಾಗಿದೆ. ಮಾಲ್‌ಗಳಲ್ಲಿ ಕೇಳೋದೆ ಬೇಡ ಎಂಬಂತಹ ಸ್ಥಿತಿ ಇದೆ. ಕನ್ನಡ ನೆಲದಲ್ಲಿ ಪರಭಾಷಿಗರ ಸಿನಿಮಾಗಳು ಹೆಚ್ಚು ಥಿಯೇಟರ್ ಪಡೆಯುವುದು ಮಾತ್ರವಲ್ಲದೇ ಸುಲಿಗೆ ಮಾಡುತ್ತಿವೆ. ಅದಕ್ಕೆ ಬೆಂಬಲ ಕೊಡುವವರು ಇಲ್ಲಿಯವರೇ ಎಂಬುದು ಕಹಿ ಸತ್ಯ.

ಎ.ನರಸಿಂಹಲು ಅವರ ಥಿಯೇಟರ್‌ನಲ್ಲೂ ಬೆಲೆ ಹೆಚ್ಚು
ಕರ್ನಾಟಕದಲ್ಲಿ ಥಿಯೇಟರ್ ಟಿಕೆಟ್ ದರ 200 ರೂಪಾಯಿ ನಿಗದಿ ಮಾಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎ.ನರಸಿಂಹಲು ಅವರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಅವರ ಒಡೆತನದ ವೈಭವಿ ವೈಷ್ಣವಿ ಚಿತ್ರಮಂದಿರದಲ್ಲೇ 800 ರೂಪಾಯಿ ಟಿಕೆಟ್ ದರ ಇರುವುದು ಅಚ್ಚರಿ ಮೂಡಿಸಿದೆ. ಹೇಳುವುದು ಮಾಡುವುದು ಮತ್ತೊಂದು ಎನ್ನುವಂತಾಗಿದೆ.
ಬೆಂಗಳೂರು ಸೇರಿ ಹಲವೆಡೆ ಟಿಕೆಟ್ ದರ ದುಬಾರಿ
'ಕೂಲಿ' ಸಿನಿಮಾ ಟಿಕೆಟ್ ದರ ಏರಿಕೆ ಬೆಂಗಳೂರಿಗೆ ಮಾತ್ರ ಸಿಮೀತವಾಗಿಲ್ಲ. ರಾಜ್ಯದ ಬೇರೆ ಬೇರೆ ಮಹಾನಗರಗಳು ಹಾಗೂ ಇತರ ಥಿಯೇಟರ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಮೊದಲ ದಿನದ ಶೋಗಳ ಟಿಕೆಟ್ ಬೆಲೆ 1000 ರೂಪಾಯಿಗೆ ಈಗಾಗಲೇ ಮಾರಾಟವಾಗಿವೆ. ರಿಲೀಸ್ ದಿನ ಅಂದರೆ ಮೊದಲ ದಿನದ 05ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿವೆ. ಇನ್ನೂ ಸಿನಿಮಾ ರಿಲೀಸ್‌ಗೂ ಮೊದಲೇ ಸರಿಸುಮಾರು ಸಂಗೀತ ಹಕ್ಕು, ಸ್ಯಾಟ್‌ಲೈಟ್ ಹಕ್ಕು ಸೇರಿ 250 ಕೋಟಿ ರೂಪಾಯಿ ದಾಟಿದೆ. ಪ್ರತಿ ಸಿನಿಮಾಗೆ ಒಂದೇ ರೂಪದ ಟಿಕೆಟ್ ಇರಬೇಕೆಂಬ ಆಗ್ರಹದ ಮಧ್ಯ ಈ ರೀತಿ ಮನಬಂದಂತೆ ದರ ನಿಗದಿ ಮಾಡಿರುವ ನಿರ್ಧಾರಕ್ಕೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications