Coolie Ticket: 'ಕೂಲಿ' ಸಿನಿಮಾ ಟಿಕೆಟ್‌ ದರ ಬ್ಲಾಕ್‌ನಲ್ಲೇ ₹4500, ಬೆಂಗಳೂರಿನಲ್ಲಿ ಎಷ್ಟಿದೆ?

ನಟ ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ "ಕೂಲಿ" (Coolie) ಸಿನಿಮಾ ಆಗಸ್ಟ್‌ 14ರ ಗುರುವಾರ (ನಾಳೆ) ರಿಲೀಸ್‌ ಆಗುತ್ತಿದೆ. ಬಹುತಾರಾಗಣದ ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಪ್ರೀಬುಕ್ಕಿಂಗ್‌ನಲ್ಲಿ ದಾಖಲೆ ಬರೆದಿದೆ. ನಟ ಉಪೇಂದ್ರ, ಪೂಜಾ ಹೆಗ್ಡೆ, ರಚಿತಾ ರಾಮ್‌ ಸೇರಿ ಕನ್ನಡ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಹಲವು ಸ್ಟಾರ್‌ಗಳ ಸಮಾಗಮವಿರುವ ಈ ಸಿನಿಮಾ ಟಿಕೆಟ್‌ ದರ ಕೂಡ ದಾಖಲೆ ಬರೆಯುತ್ತಿದೆ. ಅಬ್ಬಬ್ಬಾ ಎಂದರೆ 200 ರೂ.ನಿಂದ 300 ರೂ. ಇರುತ್ತಿದ್ದ ಟಿಕೆಟ್‌, ಬ್ಲಾಕ್‌ನಲ್ಲೇ ಬರೋಬ್ಬರಿ 4,500 ರೂಪಾಯಿಗೆ ಮಾರಾಟವಾಗಿದೆ. ಬೆಂಗಳೂರಿನಲ್ಲೂ ಕೂಲಿ ಸಿನಿಮಾಗೆ ಕ್ರೇಜ್‌ ಹೆಚ್ಚಾಗಿದ್ದು, ಟಿಕೆಟ್‌ ದರ ನೋಡಿ ಪ್ರೇಕ್ಷಕ ಪ್ರಭುಗಳು ದಂಗಾಗಿದ್ದಾರೆ.

ಕರ್ನಾಟಕ ಸರ್ಕಾರವು ಇತ್ತೀಚೆಗಷ್ಟೇ ರಾಜ್ಯದಲ್ಲಿ ಎಲ್ಲ ಭಾಷೆಗಳ ಸಿನಿಮಾ ಟಿಕೆಟ್‌ ದರ 200 ರೂಪಾಯಿ ಮೀರಬಾರದು. ಇದು ಎಲ್ಲ ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೂ ಅನ್ವಯ ಎಂದು ಖಡಕ್‌ ಆಗಿ ಹೇಳಿತ್ತು. ಆದರೆ ಕೂಲಿ ಸಿನಿಮಾದ ಟಿಕೆಟ್‌ ದರಗಳನ್ನು ನೋಡಿದರೆ ರಾಜ್ಯ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿನ ಬೆಲೆ ಇಲ್ಲ ಎನ್ನುವಂತಾಗಿದೆ. ಈಗಾಗಲೇ ನಾಳೆ ಎಲ್ಲ ಪ್ರದರ್ಶನಗಳಿಗೆ ಟಿಕೆಟ್‌ ಬುಕಿಂಗ್‌ ಆಗಿದ್ದು, ಟಿಕೆಟ್‌ ದರಗಳು ಬೆಂಗಳೂರಿನಲ್ಲೂ ದುಬಾರಿಯೇ ಇದೆ.

Rajinikanth Coolie Movie Tickets Selling For 4500 In Black What Is The Price In Bengaluru

ಸೂಪರ್‌ ಸ್ಟಾರ್‌ ರಜನಿಕಾಂತ್‌ ಸಿನಿಮಾ ಅಂದ್ರೆ ಕ್ರೇಜ್‌ ಇದ್ದೇ ಇರುತ್ತೆ. ಇನ್ನು ಕರ್ನಾಟಕದಲ್ಲೂ ರಜನಿ ಫ್ಯಾನ್ಸ್‌ ಸಂಖ್ಯೆ ಕಡಿಮೆ ಇಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ರಜನಿ ಅವರ ಸಿನಿಮಾಗಳೆಲ್ಲವೂ ಉತ್ತಮ ಪ್ರದರ್ಶನ ಕಾಣುತ್ತವೆ. ಹೀಗಾಗಿ ಕೂಲಿ ಸಿನಿಮಾದ ಟಿಕೆಟ್‌ ದರವನ್ನು ಮನಬಂದಂತೆ ನಿಗದಿ ಮಾಡಲಾಗಿದೆ. ಈ ಮೂಲಕ ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಭಿಮಾನಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಲ್ಲೂ ಮನಬಂದಂತೆ ದರ

ಬೆಂಗಳೂರಿನಲ್ಲಿ ಕೂಲಿ ಸಿನಿಮಾದ ಟಿಕೆಟ್‌ ದರ ಗರಿಷ್ಠ 2000 ಸಾವಿರ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ. ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವು 250 ರೂ, 300 ರೂ, 400ರೂ, 800ರೂ, 1,100 ರೂಪಾಯಿ ದಾಟಿದೆ. ಬಹುತೇಕ ಮೊದಲ ದಿನದ ಎಲ್ಲ ಪ್ರದರ್ಶನಗಳು ಬುಕಿಂಗ್‌ ಆಗಿವೆ. ಇನ್ನು ರಾಜ್ಯದ ಎಲ್ಲ ಸಿಂಗಲ್‌ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವನ್ನು ಗರಿಷ್ಠ ₹200ಕ್ಕೆ ನಿಗದಿಗೊಳಿಸಿ ಸರ್ಕಾರ ಕರಡು ಆದೇಶ ಹೊರಡಿದ್ದು, ಇದಕ್ಕೆ ಕ್ಯಾರೇ ಎನ್ನದೆ ಟಿಕೆಟ್‌ ದರ ಏರಿಕೆ ಮಾಡಲಾಗಿದೆ. ತಮಿಳು ಚಿತ್ರರಂಗದ ತವರು ಚೆನ್ನೈನಲ್ಲಿ ಬ್ಲಾಕ್‌ನಲ್ಲೇ ಕೂಲಿ ಟಿಕೆಟ್‌ 4,500 ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

Rajinikanth Coolie Movie Tickets Selling For 4500 In Black What Is The Price In Bengaluru

ಫಿಲ್ಮ್‌ ಚೇಂಬರ್‌ ಅಧ್ಯಕ್ಷರ ಥಿಯೇಟರ್‌ನಲ್ಲೂ ದುಬಾರಿ

ಬೆಳಿಗ್ಗೆ 6.30ರಿಂದಲೇ ಕೂಲಿ ಸಿನಿಮಾದ ಶೋಗಳು ಆರಂಭವಾಗುತ್ತಿದ್ದು, ಟಿಕೆಟ್‌ ದರಗಳು 400ರಿಂದ 1000 ರೂಪಾಯಿವರೆಗೆ ಇದೆ. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರ ಮಾಲೀಕತ್ವದ ಥಿಯೇಟರ್‌ನಲ್ಲೇ ಮೊದಲ ಶೋನ ಟಿಕೆಟ್‌ 800 ನಿಗದಿ ಮಾಡಲಾಗಿದೆ. ಈಗಾಗಲೇ ಬಹುತೇಕ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ದು, ಕನ್ನಡದಲ್ಲಿ ಡಬ್‌ ಆಗಿರುವ ಸಿನಿಮಾ ಕೆಲವೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+