Rachita Ram: ನನ್ನ ಆಸೆ ಕೊನೆಗೂ ಈಡೇರಿತು: ನವರಾತ್ರಿಯಂದೇ ಸಿಹಿಸುದ್ದಿ ಕೊಟ್ಟ ರಚಿತಾ ರಾಮ್
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇತ್ತೀಚೆಗೆ "ಕೂಲಿ" ಸಿನಿಮಾದಲ್ಲಿ ನಟಿಸಿದ ಮೇಲೆ ಸಿಕ್ಕಾಪಟ್ಟೆ ಹೈಪ್‌ನಲ್ಲಿದ್ದಾರೆ. ಈ ಸಿನಿಮಾದಲ್ಲಿ ಕಲ್ಯಾಣಿ ಪಾತ್ರದಲ್ಲಿ ರಚಿತಾ ನಟಿಸಿದ್ದರು. ನೆಗೆಟಿವ್ ಶೇಡ್‌ನಲ್ಲಿ ರಚಿತಾರನ್ನ ಕಂಡು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಡಿಂಪಲ್ ಕ್ವೀನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇದರ ಜೊತೆಗೆ ಸಂಭ್ರಮದಿಂದ ನವರಾತ್ರಿ ಆಚರಣೆಯಲ್ಲೂ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ ಸಿಹಿಸುದ್ದಿಯೊಂದನ್ನು ನಟಿ ಹೇಳಿಕೊಂಡಿದ್ದು, ನನ್ನ ಬಹಳ ದಿನಗಳ ಆಸೆ ಈಡೇರಿದೆ ಎಂದು ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡಿರುವ ರಚಿತಾ ರಾಮ್ ಎಲ್ಲರಿಗೂ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ರಚಿತಾ ರಾಮ್ ಅವರಿಗೆ ಬಹಳ ದಿನಗಳಿಂದಲೂ ಒಂದು ಆಸೆ ಇತ್ತಂತೆ. ಅದಕ್ಕೆ ನವರಾತ್ರಿಯಂದ ಕಾಲ ಕೂಡಿ ಬಂದಿದೆ. ಈ ಸಂತೋಷದ ವಿಚಾರ ಏನೆಂದು ನಟಿ ಕುತೂಹಲಕಾರಿಯಾಗಿ ಬಹಿರಂಗಪಡಿಸಿದ್ದಾರೆ. ಅದೇನು ಗೊತ್ತಾ?

ಏನದು ರಚಿತಾ ರಾಮ್ ಆಸೆ?
ಸೋಷಿಯಲ್ ಮೀಡಿಯಾದಲ್ಲಿ ಫೋಟೋದೊಂದಿಗೆ ಬರೆದುಕೊಂಡಿರುವ ರಚಿತಾ ರಾಮ್, "ನನಗೆ ಮೂಗು ಚುಚ್ಚಿಸಿಕೊಳ್ಳಬೇಕು ಎನ್ನುವ ಆಸೆ ಬಹಳ ದಿನಗಳಿಂದ ಇತ್ತು. ಈ ವಿಶೇಷ ದಿನದಂದು ಅದು ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ರಚಿತಾ ರಾಮ್ ತಿಳಿಸಿದ್ದಾರೆ. ಮೂಗುತಿಯಲ್ಲಿ ರಚಿತಾ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣುತ್ತಿದ್ದಾರೆ.
ಮದುವೆ ಸುಳಿವು ಕೊಟ್ರಾ ಡಿಂಪಲ್?
ಮೂಗುತಿಯಲ್ಲಿ ರಚಿತಾ ರಾಮ್ ಅವರ ಲುಕ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ನಿಮಗೆ ಡಿಂಪಲ್ ಹಾಗೂ ಮೂಗುತಿ ಡಬಲ್ ಧಮಾಕಾ ಎನ್ನುತ್ತಿದ್ದಾರೆ. ಕೆಲವರು ಮದುವೆಗೆ ರೇಡಿಯಾಗುತ್ತಿದ್ದೀರ ಅಂತ ಗೊತ್ತಾಯಿತು. ಆದಷ್ಟು ಬೇಗ ಶುಭ ಸುದ್ದಿ ಕೊಡುತ್ತೀರಾ ಅಂತ ಗೊತ್ತು ಎಂದು ಮದುವೆ ವಿಚಾರ ಪ್ರಸ್ತಾಪಿಸಿ ಕಾಮೆಂಟ್ ಮಾಡಿದ್ದಾರೆ.
ರಚಿತಾ ರಾಮ್ ಅವರ ಮೂಗುತಿ ಫೋಟೋ ವೈರಲ್ ಆಗಿದ್ದು, ಕೆಲವರು ಮದುವೆಯಾಗುವ ಕಾರಣಕ್ಕೆ ರಚಿತಾ ರಾಮ್ ಅವರು ಮೂಗುತಿ ಧರಿಸಿದ್ದಾರೆ ಎಂದೆಲ್ಲ ಮಾತುಗಳನ್ನಾಡುತ್ತಿದ್ದಾರೆ. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತವಾಗಿ ಮದುವೆ ಆಗ್ತೀನಿ ಎಂದು ರಚಿತಾ ಹಲವು ಬಾರಿ ಹೇಳಿದ್ದರು. ಹೀಗಾಗಿ ಸದ್ಯದಲ್ಲೇ ರಚಿತಾ ರಾಮ್ ಅವರು ಮದುವೆ ಬಗ್ಗೆ ಸಿಹಿಸುದ್ದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಚಿತಾ ರಾಮ್ ಅವರು ಮೂಗುತಿ ಧರಿಸುವ ಮೂಲಕ ಸಂಪ್ರದಾಯ ಪಾಲಿಸಿದ್ದಾರೆ. ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುವ ವಾಡಿಕೆಯೂ ಇದೆ. ಹೀಗಾಗಿ ರಚಿತಾ ಅವರು ಏನೋ ದೊಡ್ಡ ಸುದ್ದಿ ಕೊಡಲು ತಯಾರಿ ನಡೆಸಿದ್ದಾರೆ. ಹೀಗಾಗಿ ಫೋಟೋ ಹಂಚಿಕೊಂಡಿದ್ದಾರೆ ಎಂದು ಫೋಟೋ ಹಂಚಿಕೊಂಡಿದ್ದಾರೆ. ಡಿಂಪಲ್ ಹುಡುಗ ಯಾರು ಎಂದು ನೋಡಲು ತುಂಬಾ ಕುತೂಹಲದಿಂದ ಕಾದಿದ್ದೇವೆ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.












Click it and Unblock the Notifications