Rachita Ram: ರಚಿತಾ ರಾಮ್‌ ಮದುವೆ ಯಾವಾಗ? ಹುಟ್ಟುಹಬ್ಬದಂದೇ ರಿವೀಲ್‌ ಮಾಡಿದ ಡಿಂಪಲ್‌ ಕ್ವೀನ್

ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಚ್ಚು, ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ತಮ್ಮ ಫ್ಯಾನ್ಸ್‌ಗೆ ಡಬಲ್‌ ಧಮಾಕಾ ನೀಡಿದ್ದಾರೆ. ನವರಾತ್ರಿ ವೇಳೆ ಮೂಗುತಿ ಚುಚ್ಚಿಸಿಕೊಂಡಿದ್ದ ರಚಿತಾ ರಾಮ್‌ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ತಮ್ಮ ಹುಟ್ಟುಹಬ್ಬದಂದೇ ಮದುವೆ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದು, ತಮ್ಮ ಭಾವಿ ಪತಿಯ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.

ರಚಿತಾ ರಾಮ್‌ ಅವರು ಸದ್ಯ ಸ್ಯಾಂಡಲ್‌ವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ರಜನಿಕಾಂತ್‌ ನಟನೆಯ ಕೂಲಿ ಸಿನಿಮಾದಲ್ಲಿ ರಚಿತಾ ನೆಗೆಟಿವ್‌ ಪಾತ್ರದ ಮೂಲಕ ಹವಾ ಸೃಷ್ಟಿಸಿದ್ದರು. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಇದರೊಂದಿಗೆ ತಮ್ಮ ಮದುವೆ ವಿಚಾರವನ್ನು ಡಿಂಪಲ್‌ ಕ್ವೀನ್‌ ಪ್ರಸ್ತಾಪಿಸಿದ್ದಾರೆ.

Rachita Ram Marriage Update Who is the Groom Birthday Revelation

'ಸಿಹಿಸುದ್ದಿ ಕೊಡ್ತೀನಿ'

ಇಲ್ಲಿವರೆಗೆ ಮದುವೆ ಯಾವಾಗ? ಎಂಬ ಪ್ರಶ್ನೆಗೆ ರಚಿತಾ ರಾಮ್‌ ನಗುತ್ತಿದ್ದರು. ನೋಡೋಣ, ಆದಾಗ ಹೇಳ್ತೀನಿ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ತಮ್ಮ ಮದುವೆ ವಿಚಾರದ ಬಗ್ಗೆ ರಚಿತಾ ರಾಮ್‌ ನೇರವಾಗಿ ಮಾತನಾಡಿದ್ದಾರೆ. 'ನಾನು ಖಂಡಿತವಾಗಿಯೂ ಮದುವೆ ಆಗಲೇಬೇಕು ಅಂತ ಡಿಸೈಡ್‌ ಮಾಡಿದ್ದೀನಿ ಎಂದಿದ್ದಾರೆ ಡಿಂಪಲ್.‌ ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆದಷ್ಟು ಬೇಗ ಸಿಹಿಸುದ್ದಿ ಕೊಡ್ತೀನಿ ಎಂದಿದ್ದಾರೆ. ಮನೆಯವರು ಹುಡುಗನನ್ನ ಹುಡುಕಲು ಶುರು ಮಾಡಿದ್ದಾರೆ. ನಂದು 100 ಪರ್ಸೆಂಟ್‌ ಅರೇಂಜ್‌ ಮ್ಯಾರೇಜ್‌' ಎಂದೂ ರಚಿತಾ ರಾಮ್‌ ಕ್ಲಾರಿಟಿ ಕೊಟ್ಟಿದ್ದಾರೆ.

'ಹುಡುಗ ಸಿಕ್ಕ ಕೂಡಲೇ ನಾನೇ ಮೊದಲು ನಿಮಗೆಲ್ಲ ರಿವೀಲ್‌ ಮಾಡ್ತೀನಿ. ಅದು ನನ್ನ ಮದುವೆ. ಈ ವರ್ಷ ಮುಗಿಯಲು ಇನ್ನೆರಡು ತಿಂಗಳಷ್ಟೇ ಇದೆ. ಈ ವರ್ಷದಲ್ಲೇ ಮದುವೆ ಆಗಲ್ಲ, ಮುಂದೆ ಹೇಳ್ತೀನಿ. ಮದುವೆ ಯೋಚನೆ ಬಂದಿದೆ. ಅಪ್ಪ-ಅಮ್ಮನಿಗೂ ಹೇಳಿದ್ದೀನಿ. ನೋಡೋಕೆ ಶುರು ಮಾಡಿದ್ದಾರೆ. ಹುಡುಗ ಹೇಗಿರಬೇಕು ಅನ್ನೋದು ಆ ಭಗವಂತನಿಗೆ ಬಿಟ್ಟಿದ್ದು, ಯಾರನ್ನ ಕರೆದುಕೊಂಡು ಬಂದು ಇವನನ್ನ ಮದುವೆಯಾಗು ಅಂತ ನನಗೆ ಹೇಳುತ್ತಾನೋ, ಆ ಹಿಂಟ್‌ ಸಿಕ್ಕಾಗ ಮದುವೆ ಆಗೇ ಆಗ್ತೀನಿ' ಎಂದಿದ್ದಾರೆ.

'ಮೂಗುಬೊಟ್ಟು ಚುಚ್ಚಿಸಿಕೊಂಡ ಬಗ್ಗೆಯೂ ಮಾತನಾಡಿರುವ ರಚಿತಾ, ನನಗೆ ಮೂಗುಬೊಟ್ಟು ಚುಚ್ಚಿಸಿಕೊಳ್ಳಬೇಕು ಎಂಬ ಆಸೆ ತುಂಬಾ ದಿನದಿಂದ ಇತ್ತು. ಹಾಗಾಗಿ ನವರಾತ್ರಿ ಇದ್ದಿದ್ದರಿಂದ ಮೂಗುತಿ ಚುಚ್ಚಿಸಿಕೊಂಡೆ. ರಾಜಕೀಯಕ್ಕೆ ನಾನು ಬರೋದಿಲ್ಲ, ಆ ಯೋಚನೆಯೂ ನನಗಿಲ್ಲ. ಅದು ನನ್ನ ಆಯ್ಕೆಯೂ ಅಲ್ಲ' ಎಂದೂ ರಚಿತಾ ರಾಮ್‌ ಹೇಳಿದ್ದಾರೆ.

'ವಿಲನ್‌ ರೋಲ್‌ ಮಾಡಲ್ಲ'

'ಕನ್ನಡದಲ್ಲೂ ವಿಲನ್‌ ಪಾತ್ರಗಳನ್ನು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರಚಿತಾ, ನಮ್ಮೂರಿನಲ್ಲಿ ನನ್ನ ರಾಣಿ ತರ ಸಾಕಿದ್ದಾರೆ. ಇಲ್ಲಿ ವಿಲನ್‌ ಆಗಿ ಚಾನ್ಸೇ ಇಲ್ಲ. ನಮ್ಮ ಸಿನಿಮಾಗಳಲ್ಲಿ ನಾನೇ ಯಾಕೆ ವಿಲನ್‌ ಆಗಲಿ? ಕೂಲಿ ನಂತರ ಬೇರೆ ಚಿತ್ರರಂಗಗಳಿಂದ ವಿಲನ್‌ ರೋಲ್‌ಗಳು ಹೆಚ್ಚಾಗಿ ಬರುತ್ತಿವೆ' ಎಂದು ರಚಿತಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+