Pushpa-2: ಪುಷ್ಪ-2 ಹಾಟ್ ಸಾಂಗ್ ವೈರಲ್, ರಶ್ಮಿಕಾ & ಅಲ್ಲು ಅರ್ಜನ್ ಪ್ಯಾಪ್ಯಾ ಡುಂಡುಂ: ಛೀ.. ಥೂ.. ಅಂತಿದ್ದಾರೆ...

ಪ್ಯಾನ್ ಇಂಡಿಯಾ.. ಪ್ಯಾನ್ ಇಂಡಿಯಾ... ಅಂತಾ ಬೊಬ್ಬೆ ಹೊಡೆಯುವ ಜಮಾನ ಇದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಸಿನಿಮಾಗಳು ಕೂಡ ಭಾರತದ ಪ್ರಮುಖ ಭಾಷೆಗಳಿಗೆ ಡಬ್ಬಿಂಗ್ ಮಾಡಿ 'ಪ್ಯಾನ್ ಇಂಡಿಯಾ' ಸಿನಿಮಾದ ರೇಂಜ್‌ಗೆ ರಿಲೀಸ್ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, 'ಪುಷ್ಪ-2' ಕೂಡ 'ಪ್ಯಾನ್ ಇಂಡಿಯಾ' ಸಿನಿಮಾ ಆಗಿ ರಿಲೀಸ್ ಆಗಲು ಸಿದ್ಧವಾಗಿದೆ. ಇಂತಹ ಸಮಯದಲ್ಲೇ, ಪುಷ್ಪ-2 ಹಾಟ್ ಸಾಂಗ್ ವೈರಲ್ ಆಗಿ ರಶ್ಮಿಕಾ & ಅಲ್ಲು ಅರ್ಜನ್ ಪ್ಯಾಪ್ಯಾ ಡುಂಡುಂ ಅಂತಿದ್ದಾರೆ. ಆದರೆ ಇದೇ ಸಮಯದಲ್ಲೇ, ಛೀ.. ಥೂ.. ಅಂತಿದ್ದಾರೆ...

'ಪುಷ್ಪ-2' ಸಿನಿಮಾ ಬಗ್ಗೆ ಚರ್ಚೆ ಜೋರಾಗಿದ್ದು, 'ಪುಷ್ಪ-2' ಸಿನಿಮಾ ಅಷ್ಟು ದುಡ್ಡನ್ನ ಮಾಡುತ್ತೆ & ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತಾ ಚರ್ಚೆಗಳು ನಡೆಯುತ್ತಿವೆ. ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ, ಬಹು ನಿರೀಕ್ಷಿತ ಸಿನಿಮಾಗೆ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. 'ಪುಷ್ಪ-1' ಮೂಲಕ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, ಹತ್ತಾರು ದಾಖಲೆ ಬರೆದಿದ್ದ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಮತ್ತೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಪುಷ್ಪ-2 ಹಾಟ್ ಸಾಂಗ್ ವೈರಲ್ ಆಗಿದ್ದು ಛೀ.. ಥೂ.. ಅಂತಾ...

Pushpa-2 Song Is Viral And This Is How Internet Reacts Over It

ಪುಷ್ಪ-2 'ಪೀಲಿಂಗ್ಸ್' ಹಾಟ್.. ಹಾಟ್..

ಹೌದು, 'ಪುಷ್ಪ-2' ರಿಲೀಸ್‌ಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ಅದ್ಧೂರಿಯಾಗಿ ಶೂಟಿಂಗ್ ಮುಗಿದಿದ್ದು ಸ್ಟೈಲಿಶ್ ಸ್ಟಾರ್ & ಐಕಾನ್ ಸ್ಟಾರ್ ಬಿರುದಾಂಕಿತ ಅಲ್ಲು ಅರ್ಜುನ್ ಅಭಿಮಾನಿ ಬಳಗ ಸಿನಿಮಾ ರಿಲೀಸ್‌ಗೆ ಕಾಯುತ್ತಿದೆ.

ಈ ಸಮಯದಲ್ಲಿ ಪುಷ್ಪ-2 ಸಿನಿಮಾದ ಸಾಂಗ್ 'ಪೀಲಿಂಗ್ಸ್' ಹಾಟ್.. ಹಾಟ್.. ಆಗಿದೆ ಅಂತಾ ಅಲ್ಲು ಅರ್ಜುನ್ ಅಭಿಮಾನಿಗಳು ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಹಾಡಿನಲ್ಲಿ ಮೈ ಚಳಿ ಬಿಟ್ಟು ಕುಣಿದಾಡಿದ್ದಾರೆ. ಹೀಗಿದ್ದಾಗಲೇ, ಪುಷ್ಪ-2 'ಪೀಲಿಂಗ್ಸ್' ಹಾಟ್.. ಹಾಟ್.. ಸಾಂಗ್ ಬಗ್ಗೆ ಕನ್ನಡಿಗರು ಏನು ಹೇಳುತ್ತಿದ್ದಾರೆ ಗೊತ್ತೆ?

ಕಿರಿಕ್ ಬೆಡಗಿ ರಶ್ಮಿಕಾಗೆ ಶಾಕ್!

ರಶ್ಮಿಕಾ ಮಂದಣ್ಣ & ಕನ್ನಡ ಸಿನಿಮಾ ಪ್ರೇಕ್ಷಕರ ನಡುವೆ ಕಿರಿಕ್ ಇವತ್ತು ಅಥವಾ ನಿನ್ನೆಯ ಕಥೆ ಅಲ್ಲ. ಯಾವಾಗ ರಕ್ಷಿತ್ ಶೆಟ್ಟಿ & ರಶ್ಮಿಕಾ ಮಂದಣ್ಣ ನಡುವೆ ಮುನಿಸು ಶುರುವಾಯ್ತೋ ಆಗಲೇ, ರಶ್ಮಿಕಾ ಮಂದಣ್ಣ & ಕನ್ನಡ ಸಿನಿಮಾ ಪ್ರೇಕ್ಷಕರ ನಡುವೆ ಜಗಳ ಆರಂಭ ಆಗಿತ್ತು. ರಶ್ಮಿಕಾ ಮಂದಣ್ಣ ತಮಗೆ ಕನ್ನಡ ಸರಿಯಾಗಿ ಬರಲ್ಲ ಎಂಬ ಮಾತು ಹೇಳಿದ ನಂತರದಲ್ಲಿ ಈ ಕಿಚ್ಚು ಮತ್ತಷ್ಟು ಹೊತ್ತಿ ಉರಿಯುತ್ತಿದೆ. ಈ ಸಿಟ್ಟನ್ನು ಈಗ ಪುಷ್ಪ-2 ಸಿನಿಮಾ ಸಾಂಗ್ 'ಪೀಲಿಂಗ್ಸ್' ಮೇಲೆ ತೀರಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ಛೀ.. ಥೂ.. ಅಂತಾ ಕಮೆಂಟ್!

ಪುಷ್ಪ-2 ಸಿನಿಮಾ ಸಾಂಗ್ 'ಪೀಲಿಂಗ್ಸ್' ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಸ್ಟೆಪ್ಸ್ ಅಂದ್ರೆ ಡಾನ್ಸ್ ಮಾಡಿರುವ ಭಂಗಿ ಹಾಗೂ ಹಾಕಿರುವ ಕಾಸ್ಟ್ಯೂಮ್ಸ್ ಬಗ್ಗೆ ನೆಟ್ಟಿಗರು ರೊಚ್ಚಿಗೆದ್ದು ಇದೀಗ ಮಾತನಾಡುತ್ತಿದ್ದಾರೆ. ಪುಷ್ಪ-2 ಸಿನಿಮಾ ಸಾಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲ ಸಿನಿಮಾ ಪ್ರಿಯರು, ಛೀ.. ಥೂ.. ಅಂತಾ ಕಮೆಂಟ್ ಹಾಕುತ್ತಾ ಇಷ್ಟೊಂದು ಮುಂದುವರಿದು ಡಾನ್ಸ್ ಮಾಡಲೇಬಾರದಿತ್ತು ಅಂತಿದ್ದಾರೆ! ಹೀಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಅಭಿಮಾನಿಗಳ ನಡುವೆ ದೊಡ್ಡ ಕಿರಿಕ್ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+