Pushpa-2: ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಬಹುದೊಡ್ಡ ದುರಂತ

Pushpa-2: ಅಲ್ಲು ಅರ್ಜುನ್‌ ನಟನೆಯ ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ಬುಧವಾರ (ಡಿಸೆಂಬರ್ 4) ತಡರಾತ್ರಿ ತೆರೆ ಕಂಡಿದೆ. ಆದರೆ, ಚಿತ್ರಕ್ಕೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಬೆಂಗಳೂರು ಸೇರಿ ಹಲವು ಥಿಯೇಟರ್‌ಗಳಲ್ಲಿ ಬೆಳಗ್ಗಿನ ಶೋ ಅನ್ನು ರದ್ದು ಮಾಡಲಾಗಿದೆ. ಇದರ ನಡುವೆಯೇ ಟಾಲಿವುಡ್‌ ತವರಾದ ಹೈದರಾಬಾದ್‌ನಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಹಾಗಾದರೆ ಏನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಪುಷ್ಪ 2 ಸಿನಿಮಾವು ಡಿಸೆಂಬರ್‌ 5ರ ಗುರುವಾರ ವಿಶ್ವದಾದ್ಯಂತ ತೆರೆ ಕಂಡಿದೆ. ಅದಕ್ಕೂ ಮುನ್ನ ಬುಧವಾರ ರಾತ್ರಿ ಪ್ರೀಮಿಯರ್‌ ಶೋ ನೋಡಲು ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್‌ಟಿಸಿ ಕ್ರಾಸ್‌ ರಸ್ತೆಯಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10:30ರ ಸುಮಾರಿಗೆ ಹೊರಗಡೆ ಬರುವಾಗ ಈ ದುರಂತ ನಡೆದಿದೆ.

Pushpa-2 Premiere Show Mother Death Son Seriously Injured due to Stampede

ಇನ್ನು ಮೃತ ಮಹಿಳೆಯನ್ನು ರೇವತಿ (39) ಎಂದು ಗುರುತಿಸಲಾಗಿದೆ. ಅವರ ಮಗ (09) ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇದೀಗ ಆತನ ಸ್ಥಿತಿ ಗಂಭೀರವಾದ ಹಿನ್ನೆಲೆ ತಡರಾತ್ರಿಯೇ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ

ಸಿನಿಮಾ ನೋಡಲು ಕೆಲ ಸ್ಟಾರ್‌ಗಳು ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ಸಿನಿಮಾ ನೋಡಿ ಚಿತ್ರಮಂದಿರದಿಂದ ಜನರು ಹೊರಬರುತ್ತಿದ್ದಾಗ ತಳ್ಳಾಟ ನಡೆದಿದೆ. ಅಭಿಮಾನಿಗಳು ಈ ವೇಳೆ ಸೆಲೆಬ್ರೆಟಿಗಳನ್ನು ಭೇಟಿಯಾಗಲು ಒಳಗೆ ನುಗ್ಗಿದ್ದಾರೆ. ಆಗ ರೇವತಿ ಕೆಳಕ್ಕೆ ಬಿದ್ದಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್‌ ವರದಿ ಮಾಡಿದೆ.

ನೆರೆದ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿದೆ. ಇನ್ನು ಇದರಿಂದ ಅಸ್ವಸ್ಥನಾಗಿದ್ದ ಬಾಲಕನನ್ನು ಸ್ಥಳದಲ್ಲಿದ್ದ ಪೊಲೀಸರು ಸಿಪಿಆರ್ ಮೂಲಕ ಪ್ರಜ್ಞೆ ಬರುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಬಳಿಕ ಅವರನ್ನು ಬೇಗಂಪೇಟೆಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಥಿಯೇಟರ್‌ಗೆ ಹೋಗುವ ರಸ್ತೆಗಳು ಮಧ್ಯರಾತ್ರಿಯವರೆಗೂ ಸಾವಿರ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದವು. ಆದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಸಹ ಆಗಿದೆ. ಕಾಲ್ತುಳಿತ ಸಂಭವಿಸಿದಾಗ ಅಲ್ಲು ಅರ್ಜುನ್ ಥಿಯೇಟರ್‌ವೊಳಗೆ ಸಿನಿಮಾ ವೀಕ್ಷಿಸುತ್ತಿದ್ದರು ಎಂದು ಹಿಂದೂಸ್ಥಾನ್ ಟೈಮ್ಸ್‌ ವರದಿ ಹೇಳಿದೆ.‌

ಸುಕುಮಾರ್ ನಿರ್ದೇಶನದ ಪುಷ್ಪಾ 2 ದಿ ರೂಲ್‌ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆ ಮಾಡಿದ್ದಾರೆ. ಈ ಸಿನಿಮಾ ಥಿಯೇಟರ್‌ನಲ್ಲಿ ವಿಶ್ವದ್ಯಂತ ತೆರೆ ಕಂಡಿದ್ದು, ಈ ಬಗ್ಗೆ ವೀಕ್ಷಕರು ಪ್ರತಿಕ್ರಿಯೆಗಳನ್ನು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+