Pushpa-2 Update: 7 ಮಹಾನಗರಗಳಲ್ಲಿ 'ಪುಷ್ಪಾ-2' ಹವಾ! ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧ

Pushpa-2 Trailer Event Updates: ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಬಹುನಿರೀಕ್ಷೆ ಸಿನಿಮಾ ಅಂದರೆ ಅದು ಅಲ್ಲು ಅರ್ಜುನ್ ನಟನೆಯ 'ಪುಷ್ಪಾ-2'. ಈ ಪ್ಯಾನ್ ಇಂಡಿಯಾ ಸಿನಿಮಾ ಡಿಸೆಂಬರ್ 06ರಂದು ಬಿಡುಗಡೆ ಆಗಲಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ. ಸಿನಿಮಾ ಪ್ರಮೋಷನ್‌ಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ.

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಪುಷ್ಪ 2' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಟ್ರೈಲರ್ ಬಿಡುಗಡೆ ಯಾವಾಗ ಎಂಬ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳಲಿದೆ. ಈ ಕುರಿತು ಚಿತ್ರತಂಡ ಪ್ರಮೋಷನ್‌ಗಾಗಿ ಮ್ಯಾಸಿವ್ ಇವೆಂಟ್ ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ಅದರ ವಿಡಿಯೋವನ್ನು 'ಮೈತ್ರಿ ಮೋವಿ ಮೇಕರ್ಸ್' ನಿರ್ದೇಶಕ 'ಸುಕುಮಾರ್ ರೈಟಿಂಗ್ ಹಾಗೂ ನಟ 'ಅಲ್ಲು ಅರ್ಜುನ್' ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಮಾಹಿತಿ ನೀಡಲಾಗಿದೆ.

Pushpa 2 Massive Promotional Event in South India Trailer will Launch in Patna Soon

ದಕ್ಷಿಣ ಭಾರತದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ

ಸಿನಿಮಾ ಬಿಡುಗಡೆಗೆ 25 ದಿನಗಳು ಬಾಕಿ ಇದ್ದು, ಅದರ ಪ್ರಮೋಷನ್‌ಗಾಗಿ 07 ಪ್ರಮುಖ ಮಹಾನಗರಗಳಾದ ಬೆಂಗಳೂರು, ಹೈದರಾಬಾದ್, ಚೆನ್ನೈ, ಪಾಟ್ನಾ, ಕೊಲ್ಕತ್ತಾ, ಕೊಚ್ಚಿ ಮತ್ತು ಮುಂಬೈನಲ್ಲಿ ಮಹಾಗನರದಲ್ಲಿ ಬೃಹತ್ ಇವೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರತಂಡವು ಅಧಿಕೃತ ಅಪ್ಡೇಟ್ ಕೊಟ್ಟಿದೆ.

ಟ್ರೈಲರ್ ಬಿಡುಗಡೆಗೆ ವೇದಿಕೆ ರೆಡಿ

'ಪುಷ್ಪ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ವಿವಿಧ ಭಾಷೆಗಳಲ್ಲಿ ತೆರಗೆ ಬರಲಿದೆ. ಅಂದು ವಿವಿಧೆಡೆ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯಾ ಭಾಷೆ ಟ್ರೈಲರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಧಿಕೃತ ಮಾಹಿತಿ ಪ್ರಕಾರ ಪಾಟ್ನಾ ದಲ್ಲಿ ನಡೆಯಲಿರುವ ಬೃಹತ್ ವೇದಿಕೆ ಮೇಲೆ ಚಿತ್ರತಂಡ 'ಬಿಗ್‌ ಟ್ರೈಲರ್' ಬಿಡುಗಡೆ ಮಾಡುವುದಾಗಿ ತಿಳಿಸಿದೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಅಭಿಮಾನಿಗಳಿಗೆ ಫ್ಯಾನ್ಸ್‌ಗೆ ಹಬ್ಬದ ವಾತಾವರಣ ಅಂದು ನಿರ್ಮಾಣವಾಗಲಿದೆ.

ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡವು ಈ ಹಿಂದೆ ಟೀಸರ್, ಹಾಡೊಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ನಟ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಾ ಬಣ್ಣ ಹಚ್ಚಿಸಿದ್ದಾರೆ. ಬಹುತಾರಾಗಣ ಇರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್ ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದೆ. RRR, KGF 2 ಬಳಿಕ ದಕ್ಷಿಣ ಭಾರತದಿಂದ ಮತ್ತೊಂದು ದೊಡ್ಡ ಚಿತ್ರ ದೇಶಾದ್ಯಂತ ಪ್ರದರ್ಶನಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+