Puneeth Rajkumar: ಮಾರ್ಚ್‌ 15 ರಿಂದ ದೊಡ್ಡ ಪರದೆಯಲ್ಲಿ ಅಪ್ಪು ದರ್ಶನ: ಅಭಿಮಾನಿಗಳ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ 2 ವರ್ಷ ತುಂಬಿದೆ. ಆದರೆ ಇಂದಿಗೂ ಅವರಿಲ್ಲ ಎಂದು ಕನ್ನಡ ಸಿನಿಮಾ ಅಭಿಮಾನಿಗಳು ಒಪ್ಪಲು ಆಗಿಲ್ಲ. ತಮ್ಮ ಸಿನಿಮಾ, ಮಾನವೀಯತೆಯಿಂದ ಇಂದಿಗೂ ಜನಮಾನಸದಲ್ಲಿ ಅವರು ಅಜರಾಮರವಾಗಿದ್ದಾರೆ.

ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬ, ಆದರೆ ಈ ಬಾರಿ ಅಭಿಮಾನಿಗಳು ಅವರ ಹುಟ್ಟುಹಬ್ಬದಂದು ಮತ್ತೆ ಅಪ್ಪುವನ್ನು ಕಣ್ತುಂಬಿಕೊಳ್ಳಬಹುದು. ಹೌದು, ಪುನೀತ್‌ ರಾಜ್‌ಕುಮಾರ್ ಸಿನಿಮಾಗಳಲ್ಲೇ ಅತಿ ದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾದ ಜಾಕಿ ಮತ್ತೆ ಬಿಡುಗಡೆಯಾಗಲು ಸಜ್ಜಾಗಿದೆ.

 Puneeth Rajkumars Jackie to Re-Release on March 15 : Appu Fans Ready To Celebrate

ಸೂರಿ ನಿರ್ದೇಶನದ ಪುನೀತ್, ಭಾವನಾ ಅಭಿನಯದ ಜಾಕಿ 2010 ರಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಗಳಿಕೆ ವಿಚಾರದಲ್ಲಿ ಕೂಡ ಜಾಕಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಈಗ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಕೆಆರ್ ಜಿ ಸ್ಟುಡಿಯೋಸ್ ಮತ್ತೆ ಜಾಕಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ. ಸಿನಿಮಾ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, 4K ವರ್ಷನ್‌ನಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಅಪ್ಪುವನ್ನು ದೊಡ್ಡ ಮಟ್ಟದಲ್ಲಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಶ್ವಿನಿ ಪುನೀತ್ ಮಾಹಿತಿ

ಜಾಕಿ ಸಿನಿಮಾ ಮರು ಬಿಡುಗಡೆ ವಿಚಾರವನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಸಂಭ್ರಮಿಸಿದ್ದು ಮಾರ್ಚ್ 15ರಂದು ನಮಗೆ ಅಪ್ಪು ಹಬ್ಬ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪುನೀತ್ ಅಭಿನಯದ ಅಪ್ಪು ಸಿನಿಮಾ ಕೂಡ 4k ವರ್ಷನ್‌ನಲ್ಲಿ ಮರು ಬಿಡುಗಡೆ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ಅಭಿಮಾನಿಗಳಿಂದಲೇ ಪ್ರಮೋಷನ್

ಜಾಕಿ ಮರುಬಿಡುಗಡೆಯಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳ ಸಂತಸ ಹೆಚ್ಚಿದೆ. ಅಭಿಮಾನಿಗಳೇ ಸಿನಿಮಾ ಪ್ರಚಾರವನ್ನು ಆರಂಭಿಸಿದ್ದಾರೆ. ಮರು ಬಿಡುಗಡೆಯಾಗುತ್ತಿದ್ದರು ದೊಡ್ಡ ಮಟ್ಟದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಲು ಕೆಆರ್ ಜಿ ಸ್ಟುಡಿಯೋಸ್ ನಿರ್ಧರಿಸಿದೆ.

ಪುನೀತ್ ರಾಜ್‌ಕುಮಾರ್ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಜಾಕಿ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಗುವ ಸಾಧ್ಯತೆ ಇದೆ.

ಮೂರು ದೊಡ್ಮನೆ ಸಿನಿಮಾ ತೆರೆಗೆ

ಕನ್ನಡ ಚಿತ್ರರಂಗದ ದೊಡ್ಮನೆ ಅಭಿಮಾನಿಗಳಿಗೆ ಮಾರ್ಚ್ ವಿಶೇಷವಾಗಿರಲಿದೆ. ಶಿವರಾಜ್‌ ಕುಮಾರ್ ಅವರ ಅಭಿನಯದ ಕರಟಕ ದಮನಕ ಮಾರ್ಚ್ 8ರಂದು ಬಿಡುಗಡೆಯಾಗಲಿದೆ. ಮಾರ್ಚ್ 15 ರಂದು ಅಪ್ಪು ಅಭಿನಯದ ಜಾಕಿ ಮರುಬಿಡುಗಡೆಯಾಗುತ್ತಿದ್ದು, ಮಾರ್ಚ್ 28ರಂದು ಬಹುನಿರೀಕ್ಷಿತ ಯುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+