ಪುನೀತ್ ರಾಜ್‌ಕುಮಾರ್ ಬಾಲ ನಟನಾಗಿ ಮಿಂಚಿದ ಸಿನಿಮಾಗಳಿವು!
ನಮ್ಮನ್ನು ಅಪ್ಪು ಅಗಲಿ ಎರಡು ವರ್ಷ ಉರುಳಿದರೂ ನೋವು ಮರೆಯಾಗಿಲ್ಲ. ಹೀಗಾಗಿಯೇ ಅಭಿಮಾನಿಗಳು ಅಪ್ಪು ಸಮಾಧಿ ಎದುರಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಮಾಜ ಮುಖಿ ಕೆಲಸ ನೆನೆಯುತ್ತಿದ್ದು. ಅಲ್ದೆ ಅಪ್ಪು ಕೈಯಿಂದ ಸಹಾಯ ಪಡೆದವರಿಗೆ, ಅವರು ಇಲ್ಲವೆಂಬ ನೋವು ಸಾಕಷ್ಟು ಕಾಡುತ್ತಿದೆ. ಹೀಗಿದ್ದರೂ ಪ್ರತಿ ಅಭಿಮಾನಿ ಹೃದಯದಲ್ಲಿ ಅಪ್ಪು ನೆಲೆಸಿದ್ದಾರೆ. ಹಾಗೇ ಅವರು ಬಿಟ್ಟು ಹೋದ, ಬಾಲ್ಯದ ಸಿನಿಮಾಗಳು ಇಂದಿಗೂ ಮಕ್ಕಳನ್ನ & ಕನ್ನಡಿಗರನ್ನ ಸೆಳೆಯುತ್ತಿವೆ.
ಕನ್ನಡಿಗರು ಮಾತ್ರವಲ್ಲ ದೇಶದ ಮೂಲೆ ಮೂಲೆ ಇದೀಗ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಅಭಿಮಾನಿಗಳಿಂದ ಆವೃತವಾಗಿದೆ. ಕರ್ನಾಟಕ ರತ್ನ ಅಪ್ಪು, ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿ 2 ವರ್ಷ ತುಂಬಿದೆ. ಇಂದಿಗೂ ಪುನೀತ್ ಅವರ ಸಮಾಧಿ ಬಳಿ, ಜನಸಾಗರವೇ ಹರಿದು ಬಂದು ಪೂಜೆ ಸಲ್ಲಿಸುತ್ತದೆ. ದೇಶದ ಗಣ್ಯಾತಿಗಣ್ಯರು ಪುನೀತ್ ಅವರ ನೆನಪನ್ನು ಈಗ ಕೂಡ ಮಾಡಿಕೊಳ್ಳುತ್ತಾರೆ. ಹೀಗಿದ್ದಾಗ ಅಪ್ಪು ಫ್ಯಾನ್ಸ್‌ಗೆ ತಮ್ಮ ನೆಚ್ಚಿನ ನಟನ ಸಿನಿಮಾನ ಮರೆಯೋದಕ್ಕೆ ಆಗುತ್ತಾ? ಹಾಗಾದರೆ, ಬಾಲ ನಟನಾಗಿ ಅಪ್ಪು ನಟಿಸಿದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪವರ್ ಸ್ಟಾರ್ ಪುನೀತ್ ಪವರ್!
ಅಂದಹಾಗೆ ದೊಡ್ಮನೆಯ ಕಿರಿ ಮಗ ಪುನೀತ್ ರಾಜ್‌ಕುಮಾರ್ ತಮ್ಮ ನೈಜ ಅಭಿನಯದಿಂದಾಗಿ ಕನ್ನಡಿಗರ ಮನಸ್ಸು ಕದ್ದರು. ಅದರಲ್ಲೂ ಪುನೀತ್ ಅವರ ಬಾಲ ನಟನೆ ಬಗ್ಗೆ ಇಂದಿಗೂ ಅದೇ ರೀತಿಯ ಹೆಮ್ಮೆ ಇದೆ. ಕನ್ನಡ ಸಿನಿಮಾ ರಂಗದಲ್ಲಿ ಇಂತಹ ಒಬ್ಬ ಬಾಲ ನಟ ಮತ್ತೆ ಬರಲೇ ಇಲ್ಲ ಎನ್ನಬಹುದು. ಹೀಗೆ ಒಂದು ಕಾಲದಲ್ಲಿ ನಟ ಪುನೀತ್ ರಾಜ್‌ಕುಮಾರ್ ಇಡೀ ಸಿನಿಮಾ ರಂಗವನ್ನು ಆವರಿಸಿಕೊಂಡಿದ್ದರು. ಹಾಗಾದರೆ ಬಾಲ ನಟನಾಗಿ ಪುನೀತ್ ಅವರು ಅಭಿನಯಿಸಿರುವ ಸಿನಿಮಾಗಳು ಯಾವುವು?
| ಸಿನಿಮಾ | ವರ್ಷ |
| ಪ್ರೇಮದ ಕಾಣಿಕೆ | 1976 |
| ಸನಾದಿ ಅಪ್ಪಣ್ಣ | 1977 |
| ತಾಯಿಗೆ ತಕ್ಕ ಮಗ | 1978 |
| ವಸಂತ ಗೀತ | 1980 |
| ಭೂಮಿಗೆ ಬಂದ ಭಗವಂತ | 1981 |
| ಭಾಗ್ಯವಂತ | 1981 |
| ಹೊಸ ಬೆಳಕು | 1982 |
| ಚಲಿಸುವ ಮೋಡಗಳು | 1982 |
| ಭಕ್ತ ಪ್ರಹ್ಲಾದ | 1983 |
| ಎರಡು ನಕ್ಷತ್ರಗಳು | 1983 |
| ಯಾರಿವನು | 1984 |
| ಬೆಟ್ಟದ ಹೂವು | 1985 |
| ಶಿವ ಮೆಚ್ಚಿದ ಕಣ್ಣಪ್ಪ | 1988 |
| ಪರಶುರಾಮ್ | 1989 |
ಅಪ್ಪು.. ಅಪ್ಪು.. ಅಪ್ಪು.. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಕನ್ನಡಿಗರ ನೆಲಕ್ಕೆ ಮಾತ್ರವಲ್ಲ, ಜಗತ್ತಿಗೇ ಹಬ್ಬಿ ಹೋಗಿದೆ. ಅದ್ರಲ್ಲೂ ಕಳೆದ 2 ವರ್ಷಗಳಲ್ಲಿ, ಕನ್ನಡಿಗರ ಗುಣ & ಕೀರ್ತಿ ಸಿರಿ ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದ್ದು. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ರೂ ಪುನೀತ್ ಅವ್ರು ಕೋಟಿ ಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ ಎನ್ನಬಹುದು.

ಹಳೆಯ ಸಿನಿಮಾಗಳೇ ಬಂಗಾರ!
ಒಟ್ನಲ್ಲಿ ಪವರ್ ಸ್ಟಾರ್ ಪುನೀತ್ ಅವರು ಇಂದು ನಮ್ಮ ಜೊತೆ ಇಲ್ಲ, ಆದರೂ ಅವರು ನಮ್ಮ ಎದೆಯಲ್ಲಿ ಅಜರಾಮರ ಅಂತಿದ್ದಾರೆ ಅವರ ಫ್ಯಾನ್ಸ್. ಅದ್ರಲ್ಲಿ ಇಡೀ ಭಾರತಕ್ಕು & ಭಾರತೀಯ ಸಮಾಜಕ್ಕೂ ಅಪ್ಪು ಅವರು ಮಾದರಿ ಆಗಿದ್ದಾರೆ. ಹಾಗೆಯೇ ಅವರ ಸಮಾಜ ಸೇವೆ ಮುಂದಿನ ಪೀಳಿಗೆಗೆ ಕೂಡ ಮಾದರಿ ಆಗಿದೆ. ಇದರ ಜೊತೆಗೆ ಅಪ್ಪು ಬಿಟ್ಟು ಹೋದ ಹಳೆಯ ಸಿನಿಮಾ ಇಂದಿಗೂ ರಾರಾಜಿಸುತ್ತಿವೆ. ಹಾಗೇ ಮಕ್ಕಳ ಮನಸ್ಸಿಗೂ ಅಪ್ಪು ಅವರ ಸಿನಿಮಾಗಳು ಭಾರಿ ಹತ್ತಿರ ಆಗಿವೆ. ಹೀಗಾಗಿ ಅವರ ಅಭಿಮಾನಿಗಳು ಪುನೀತ್ ಅವರ ಬಾಲ ನಟನೆ ನೆನೆಯುತ್ತ ಸಂಭ್ರಮಿಸುತ್ತಿದ್ದಾರೆ. ಇದು ನೋವಿನಲ್ಲಿ ಒಂದಷ್ಟು ರಿಲೀಫ್ ನೀಡಿದಂತಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications