ಸುದೀಪ್, ಶ್ರೀಮುರಳಿ ಸಿಗೋದೇ ಇಲ್ಲ, ನಿಮ್ಮಂತ 10 ಹೀರೋಗಳನ್ನ ಹುಟ್ಟಾಕ್ತೀನಿ: ಖ್ಯಾತ ನಿರ್ಮಾಪಕ
ನಟ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್, ಶ್ರೀಮುರಳಿ ಸೇರಿದಂತೆ ಸ್ಯಾಂಡಲ್‌ವುಡ್ ಹೀರೋಗಳ ವಿರುದ್ಧ ಖ್ಯಾತ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗರಂ ಆಗಿದ್ದಾರೆ. ಕಾಟನ್‌ಪೇಟೆ ಗೇಟ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಅವರು ಸ್ಟಾರ್ ನಟರ ವಿರುದ್ಧ ತೊಡೆತಟ್ಟಿದ್ದಾರೆ. 'ನಿಮ್ಮಂತಹ 10 ಹೀರೋಗಳನ್ನ ನಾನೇ ಹುಟ್ಟಾಕ್ತೀನಿ ಎಂದು ಸವಾಲ್ ಕೂಡ ಹಾಕಿದ್ದಾರೆ. ರಾಜ್‌ಕುಮಾರ್ ಅವರು ಹೋದ ಮೇಲೆ ಹೇಳೋರು ಕೇಳೋರು ಯಾರೂ ಇಲ್ಲ ಅನ್ಕೊಂಡಿದ್ದೀರಾ? ನೀವಾಗಿ ನೀವು ಬುದ್ದಿ ಕಲಿತುಕೊಂಡರೆ ನೀವು ಉಳಿದುಕೊಳ್ತೀರಿ. ಇಲ್ಲದಿದ್ರೆ ಕರ್ನಾಟಕದಾದ್ಯಂತ ದಂತೆ ಏಳುತ್ತೇವೆ' ಎಂದು ನಿರ್ಮಾಪಕ ವಾರ್ನಿಂಗ್ ಕೊಟ್ಟಿದ್ದಾರೆ.
ವೇದಿಕೆಯಲ್ಲೇ ಆಕ್ರೋಶ ಹೊರಹಾಕಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್, 'ಮೂವತ್ತು ವರ್ಷದಿಂದ ಕನ್ನಡ ಸಿನಿಮಾಗಾಗಿ ಶ್ರಮ ಪಡುತ್ತಿದ್ದೀವಿ, ಬಂದು ಸಹಾಯ ಮಾಡ್ರಿ ಎಂದಿದ್ದಾರೆ. ಅಲ್ಲೆಲ್ಲೋ ಆಂಧ್ರಗೆ, ತಮಿಳುನಾಡಿಗೆ ಹೋಗಿ ಡೇಟ್ ಕೊಡ್ತೀರಿ. ನಾವೇನು ಅನ್ನ ತಿನ್ನೋದು ಬೇಡ್ವಾ? ನಮ್ಮ ಕನ್ನಡಿಗರು ಅನ್ನ ತಿನ್ನೋದು ಬೇಡ್ವಾ? ಕನ್ನಡ ಡೈರೆಕ್ಟರ್‌ಗಳಿಗೆ ಕೆಲಸ ಇಲ್ಲ. ದೇವಸ್ಥಾನಗಳಿಗೆ ಹೋಗ್ತಿದ್ದಾರೆ. ಬೇರೆ ಎಲ್ಲೂ ಈ ರೀತಿ ಅನ್ಯಾಯ ನಡೆಯುತ್ತಿಲ್ಲ' ಎಂದು ಬೇಸರ ಹೊರಹಾಕಿದ್ದಾರೆ.

ಥಿಯೇಟರ್‌ಗಳ ಬಳಿ ನೊಣ ಇರುತ್ತೆ
'ಕನ್ನಡದ ಸ್ಟಾರ್ ನಟರಿಗೆ ಇದು ವಾರ್ನಿಂಗ್ ಅಂತಲೇ ತಿಳಿದುಕೊಳ್ಳಿ. ನೀವು ಕೂಡಲೇ ಎಚ್ಚೆತ್ತುಕೊಂಡು ಕನ್ನಡ ನಿರ್ಮಾಪಕರಿಗೆ ಕೆಲಸ ಕೊಡಬೇಕು. ಇಲ್ಲದಿದ್ರೆ ನಾವೇನು ಮಾಡಬೇಕೋ ಮಾಡ್ತೀವಿ ಎಂದಿದ್ದಾರೆ. ಏನ್ ಹೀರೋಗಳ ಚೇಲಾಗಳು ಸಾವಿರ, ಎರಡು ಸಾವಿರ ಎಣ್ಣೆ ಕೊಟ್ಟುಬಿಟ್ಟು, ನಮ್ ಭಕ್ತ, ನಿಮ್ ಭಕ್ತ ಅಂತಾರೆ. ಅಲ್ಲಿ ಥೀಯೇಟರ್ ಹತ್ರ ನೋಡಿದ್ರೆ ಏನೂ ಇಲ್ಲ, ಜನ ಇರಲ್ಲ, ನೊಣ ಇರುತ್ತೆ. ಅಷ್ಟು ಕೋಟಿ ಕೊಡು, ಇಷ್ಟು ಕೋಟಿ ಕೊಡು ಅಂತಾರೆ. ಏನ್ ಹಣ ಪ್ರಿಂಟ್ ಮಾಡ್ತಿದ್ದೀವಾ?' ಎಂದು ಗುಡುಗಿದ್ದಾರೆ.
ಬೆಂಗಳೂರಲ್ಲೇ ಸಿನಿಮಾ ನೋಡಲ್ಲ, ಪ್ಯಾನ್ ಇಂಡಿಯಾ ಅಂತೆ!
'ನಾವು ಕೂಡ ರಾಜಮೌಳಿ ಸೇರಿ ಎಂತೆಂಥಾ ಡೈರೆಕ್ಟರ್‌ಗಳನ್ನ ನೋಡಿದ್ದೀವಿ. ಬಾಹುಬಲಿ ಸಿನಿಮಾನ 20 ಕೋಟಿ ಕೊಟ್ಟು ತಗೊಂಡು ಬಂದ ಮಗಾ ನಾನು.. ಡೈರೆಕ್ಟರ್‌ಗಳು, ಟೆಕ್ನಿಷಿಯನ್‌ಗಳು ಮನೇಲಿ ಊಟಕ್ಕೆ ಕಾಸಿಲ್ಲದೆ ಅಲೆಯುತ್ತಿದ್ದಾರೆ. ಅವರ ಕಷ್ಟ ನೋಡೋಕೆ ಆಗ್ತಿಲ್ಲ. ಪ್ಯಾನ್ ಇಂಡಿಯಾ ಅಂತೆ, ಮೊದಲು ಕನ್ನಡದಲ್ಲಿ ಸಿನಿಮಾ ಮಾಡಿ, ಆ ಮೇಲೆ ಅದೇ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ, ಲಂಡನ್‌ಗೂ ಹೋಗುತ್ತೆ. ಮೊದಲು ಕರ್ನಾಟಕದ ಜನ ಸಿನಿಮಾ ಒಪ್ಪಿಕೊಳ್ಳಬೇಕು' ಎಂದಿದ್ದಾರೆ.
'ಮೊನ್ನೆ ಒಬ್ಬ ಹೀರೋ ಕೇಳ್ತಾರೆ 120 ಕೋಟಿ ಅಂತೆ, ನಾನು ಅದರಲ್ಲಿ ನೂರಾರು ಸಿನಿಮಾ ಮಾಡಿಬಿಡ್ತಿದ್ದೆ. ಇವತ್ತು ನಿರ್ಮಾಪಕರು ಗಾಂಧಿನಗರಕ್ಕೆ ಬರುತ್ತಿಲ್ಲ. ನಮ್ಮ ಬೆಂಗಳೂರಲ್ಲೇ ಸಿನಿಮಾ ನೋಡಲ್ಲ, ಪ್ಯಾನ್ ಇಂಡಿಯಾ ಅಂತೆ. ಅಲ್ಲಿ ಆಂಧ್ರದಲ್ಲಿ ಯಾರ ಮುಖನೂ ನೋಡಲ್ಲ. ಸಿನಿಮಾ, ಕಥೆ ಚೆನ್ನಾಗಿದ್ರೆ ಮಾತ್ರ ನೋಡ್ತಾರೆ. ಸುಮ್ಮನೆ ಮೊದಲೇ ಪ್ಯಾನ್ ಇಂಡಿಯಾ ಅಂತ ಹಾಕಿಬಿಡ್ತಾರೆ' ಎಂದು ಗರಂ ಆಗಿದ್ದಾರೆ.
ಕಡಲೆಪುರಿ ಕಾಸಲ್ಲಿ ಮಾಡಿದ ಸಿನಿಮಾಗಳು ಹಿಟ್ ಆಯ್ತು
'ಶಿವಣ್ಣನಿಗೆ ಐದು ಸಿನಿಮಾ ಮಾಡಿದ್ದೀನಿ, ಅದರಲ್ಲಿ ನಾಲ್ಕು ಸಿನಿಮಾ ಹಿಟ್. ಅದೆಲ್ಲ ಕಡಲೆಪುರಿ ಕಾಸಲ್ಲಿ ಮಾಡಿರೋ ಸಿನಿಮಾಗಳು. ಅದೆಲ್ಲವೂ ನೂರು ದಿನ ಓಡಿದ್ದವು. ರಾಜ್ಯದ ಏಳು ಕೋಟಿ ಜನರಲ್ಲಿ ಶೇ 30ರಷ್ಟು ಮಂದಿ ಸಿನಿಮಾ ನೋಡುವವರು ಇದ್ದಾರೆ. ಇಲ್ಲ ಸಿನಿಮಾ ಮಾಡಬೇಕು, ಇಲ್ಲ ಟಿವಿಗಳಲ್ಲಿ ಹೋಗಿ ಕೂತ್ಕೋಬೇಕು. ಮೊದಲು ರಾಜ್‌ಕುಮಾರ್ ಅವರನ್ನ ನೋಡಬೇಕು ಜನ ಒದ್ದಾಡುತ್ತಿದ್ರು. ಈಗ ಆ ಗರ್ವ ಎಲ್ಲ ಬೇಡ ಸ್ವಾಮಿ. ನೀವೇನಾದ್ರೂ ಟಿವಿಗಳಲ್ಲಿ ಹೋಗಿ ಕುಳಿತುಕೊಂಡರೆ ನಿಮ್ಮ ಮನೆ ಹತ್ರ ಬಂದು ಗಲಾಟೆ ಮಾಡ್ತೀನಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಸುದೀಪ್ ಸಿಗೋದೇ ಇಲ್ಲ, ಶ್ರೀಮುರಳಿನೂ ಸಿಗಲ್ಲ. ಅದಕ್ಕೆ ಇಂತಹ ಹೊಸ ಹುಡುಗರನ್ನ ಚಿತ್ರರಂಗದಲ್ಲಿ ಬೆಳೆಸುತ್ತೀನಿ. ಇಂತಹ ಹತ್ತು ನಟರನ್ನು ಹುಟ್ಟಾಕಿ ನಿಮಗೆ ಕನಕಪುರ ಶ್ರೀನಿವಾಸ್ ಯಾರೂ ಅಂತ ತೋರಿಸ್ತೀನಿ' ಎಂದು ತೊಡೆ ತಟ್ಟಿದ್ದಾರೆ.
-
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ.












Click it and Unblock the Notifications