ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ಸಿನಿಮಾ 500 ಕೋಟಿ ಕ್ಲಬ್‌ಗೆ!
ಒಬ್ಬ ಅತ್ಯುತ್ತಮ ನಿರ್ದೇಶಕ, ಹೇಗೆ ಅದ್ಭುತ ಸಿನಿಮಾಗಳನ್ನು ಸೃಷ್ಟಿಸಬಲ್ಲ? ಅನ್ನೋದಕ್ಕೆ ಕನ್ನಡದ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಅದ್ಭುತ ಉದಾಹರಣೆ. 'ಉಗ್ರಂ' ಮೂಲಕ ಸಿನಿಮಾ ಜರ್ನಿ ಶುರು ಮಾಡಿದ್ದ ಈ ಖ್ಯಾತ ಡೈರೆಕ್ಟರ್ ಈಗ 'ಪ್ಯಾನ್ ಇಂಡಿಯಾ' ಸ್ಟಾರ್. ಯಾವುದೇ ಹೀರೋಗೂ ಕಮ್ಮಿ ಇಲ್ಲದಂತೆ ಬೆಳೆದು ನಿಂತ ಈ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್-1' ಮತ್ತು 'ಕೆಜಿಎಫ್-2' ರೀತಿಯೇ ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಜೊತೆಗೆ ಸೇರಿ 'ಸಲಾರ್' ಎಂಬ ಅದ್ಭುತವನ್ನೂ ತೆರೆಗೆ ತಂದಿದ್ದಾರೆ.
ಡಾರ್ಲಿಂಗ್ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಜಗತ್ತಿನಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಎಲ್ಲೆಲ್ಲೂ ಅಬ್ಬರಿಸಿ ಬಾಕ್ಸ್ ಆಫಿಸಲ್ಲಿ ಹೊಸ ಅಲೆ ಎಬ್ಬಿಸಿದೆ 'ಸಲಾರ್'. ರಿಲೀಸ್ ಆದ 8 ದಿನಗಳಲ್ಲಿ ಡಾರ್ಲಿಂಗ್ ಪ್ರಭಾಸ್ ಅವರ ಸಿನಿಮಾ ಹಿಂದಿನ ದಾಖಲೆಗಳನ್ನ ಮುರಿದು ಮುನ್ನುಗ್ಗುತ್ತಿದೆ. ಕ್ರಿಸ್‌ಮಸ್ ರಜೆಯ ಸಮಯದಲ್ಲಿ ಹೀಗೆ ಅದ್ಧೂರಿಯಾಗಿ ತೆರೆಗೆ ಬಂದ 'ಸಲಾರ್' ಸಿನಿಮಾ ಭರ್ಜರಿ ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ಪ್ರಶಾಂತ್ ನೀಲ್ ಕೂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗಾದರೆ ಏನದು ನೀಲ್ ಈಗ ಸೃಷ್ಟಿಸಿರುವ ದಾಖಲೆ?

ಪ್ರಶಾಂತ್ ನೀಲ್ + ಪ್ರಭಾಸ್ = ರೆಕಾರ್ಡ್!
ಹೌದು, ಇದೀಗ ಪ್ರಶಾಂತ್ ನೀಲ್ ಅವರ ಮತ್ತೊಂದು ಸಿನಿಮಾ 500 ಕೋಟಿ ಕ್ಲಬ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಈ ಹಿಂದೆ 'ಕೆಜಿಎಫ್ ಚಾಪ್ಟರ್-2' ಇದೇ ರೀತಿ ಹೊಸ ದಾಖಲೆ ಬರೆದು ಬರೋಬ್ಬರಿ 1000 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಟ್ಟಿತ್ತು. ಈಗ 'ಸಲಾರ್' ಕೂಡ ಅದೇ ರೀತಿಯ ಸಾಧನೆ ಮಾಡ್ತಿದೆ. ಸಲಾರ್ ಸಿನಿಮಾ ಭರ್ಜರಿಯಾಗಿ 500 ಕೋಟಿ ಕ್ಲಬ್ ಸೇರಿ ದಕ್ಷಿಣ ಭಾರತದ ಸಿನಿಮಾಗಳ ಶಕ್ತಿಯನ್ನ ಪ್ರದರ್ಶನ ಮಾಡಿದೆ. ಅಲ್ಲದೆ ಇನ್ನೂ ಮುಂದೆ, ಸಾಲು ಸಾಲು ರಜೆಗಳು ಬರುವ ಹಿನ್ನೆಲೆ ಸಲಾರ್ ಸಿನಿಮಾ 1000 ಕೋಟಿ ರೂಪಾಯಿ ಕ್ಲಬ್ ಸೇರುತ್ತಾ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.
ಭಾರತದಲ್ಲೂ ಅತ್ಯುತ್ತಮ ಸಾಧನೆ
ಜಗತ್ತಿನಾದ್ಯಂತ ಸಲಾರ್ ಸಿನಿಮಾ ಸುಮಾರು 500 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದ್ದರೆ ಭಾರತದಲ್ಲೇ ಸುಮಾರು 300 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಕನ್ನಡಿಗರ ತೆಲುಗು ಸಿನಿಮಾ, ಭರ್ಜರಿಯಾಗಿ ಗಳಿಕೆ ಮಾಡುತ್ತಿದೆ. ಗಲ್ಲಾಪೆಟ್ಟಿಗೆ ಅಖಾಡದಲ್ಲಿ ಸಲಾರ್ ಸದ್ದು ಬಲು ಜೋರಾಗಿದೆ. ಮತ್ತೊಂದು ಕಡೆ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ನಟ ಪ್ರಭಾಸ್ ಅವರಿಗೂ ಈ ಸಿನಿಮಾ ದೊಡ್ಡ ಬ್ರೇಕ್ ನೀಡಿದೆ. ಹೀಗೆ ಸಲಾರ್ ಗೆಲುವಿನ ಬೆನ್ನಲ್ಲೇ ನಟ ಪ್ರಭಾಸ್ ಅವರು ಮುಂದಿನ ಸಿನಿಮಾಗೆ ಕೂಡ ಸಜ್ಜಾಗಿದ್ದಾರೆ.

ಕನ್ನಡಿಗರಿಂದ 'ಸಲಾರ್' ನಿರ್ಮಾಣ
ಸಲಾರ್ ನಿರ್ಮಾಣ ಮಾಡಿರುವುದು ಕನ್ನಡಿಗರು. ಕನ್ನಡ ಸಿನಿ ರಂಗದಲ್ಲಿ ಮಿಂಚು ಹರಿಸಿದ್ದ, ಹೊಂಬಾಳೆ ಸಲಾರ್ ಸಿನಿಮಾ ನಿರ್ಮಾಣ ಮಾಡಿದೆ. ಹೀಗಾಗಿ ಕನ್ನಡಿಗರಿಗೆ ಮೊದಲನೇ ಆದ್ಯತೆ ನೀಡಲಾಗಿದೆ. ರವಿ ಬಸ್ರೂರು 'ಕೆಜಿಎಫ್' ರೀತಿ ಮತ್ತೆ ಸಲಾರ್ ಮೂಲಕ ಸಂಗೀತದ ಕಮಾಲ್ ಮಾಡಿದ್ದಾರೆ. 'ಕೆಜಿಎಫ್' ಸರಣಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಭುವನ್ ಗೌಡ ಮಿಂಚಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ನಟರು & ನಟಿಯರ ದಂಡೇ 'ಸಲಾರ್' ಸಿನಿಮಾಗೆ ಕೆಲಸ ಮಾಡಿ ಪ್ರಭಾಸ್‌ಗೆ ಸಾಥ್ ಕೊಟ್ಟಿದೆ.
ಒಟ್ನಲ್ಲಿ ಕನ್ನಡ ಸಿನಿಮಾಗಳ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದ ಪ್ರಶಾಂತ್ ನೀಲ್ ಅವರು ಇದೀಗ ತೆಲುಗು ಸಿನಿಮಾ ಮೂಲಕವೂ ಹವಾ ಎಬ್ಬಿಸಿದ್ದಾರೆ. ಸಲಾರ್ ಸಿನಿಮಾದ ಅಬ್ಬರಕ್ಕೆ ಹಳೆಯ ದಾಖಲೆಗಳು ಕಾಣೆಯಾಗಿವೆ. ಇನ್ನು ಹೊಸ ವರ್ಷಕ್ಕೆ ಮತ್ತಷ್ಟು ದಾಖಲೆ ನಿರ್ಮಿಸಲು ಈ ಮೂಲಕ ಸಲಾರ್ ಸಜ್ಜಾಗಿದೆ.












Click it and Unblock the Notifications