20 ದಿನ 750 ಕೋಟಿ ರೂಪಾಯಿ ಕಡೆಗೆ ಡಾರ್ಲಿಂಗ್ ಪ್ರಭಾಸ್ ಸಿನಿಮಾ ‘ಸಲಾರ್’ ಪಯಣ!
ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ತೆಲುಗು ಭಾಷೆಯಲ್ಲಿ ನಿರ್ಮಾಣ ಆದ್ರೂ ಇದನ್ನ ನಿರ್ಮಿಸಿದ್ದು ಕನ್ನಡಿಗರು. ಡಾರ್ಲಿಂಗ್ ಪ್ರಭಾಸ್ & ಪೃತ್ವಿರಾಜ್ ಸುಕುಮಾರನ್ ಬಿಟ್ಟು ಬಹುತೇಕ ನಟರು & ನಟಿಯರು ಕನ್ನಡಿದವರು. ಹಾಗೇ ಸಲಾರ್‌ಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗ ಕೂಡ ಕನ್ನಡಿಗರಿಂದ ತುಂಬಿದೆ. ಹೀಗಿದ್ದಾಗ ಕನ್ನಡಿಗರ ಈ ತೆಲುಗು ಸಿನಿಮಾ ಕಳೆದ 20 ದಿನದಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ?
'ಕೆಜಿಎಫ್' ಸಿನಿಮಾಗೆ ಕೆಲಸ ಮಾಡಿ ಪಳಗಿದ್ದ ತಂಡವನ್ನೇ ಕಟ್ಟಿಕೊಂಡು, ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. 'ಸಲಾರ್-2' ಶೂಟಿಂಗ್‌ಗೆ ಕೂಡ, ಈಗ ಅಬ್ಬರದ ತಯಾರಿ ಸಾಗಿದೆ. ಅದ್ರಲ್ಲೂ ಬಾಕ್ಸ್ ಆಫಿಸ್ ಅಖಾಡದಲ್ಲಿ 'ಸಲಾರ್-1' ಇದೀಗ ನೂರಾರು ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹೀಗೆ ಸಲಾರ್ ಕಲೆಕ್ಷನ್ ನೋಡಿರುವ ಬಾಲಿವುಡ್ ಮಂದಿ ಕೂಡ ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ ದಕ್ಷಿಣ ಭಾರತೀಯರ ಈ ಸಿನಿಮಾ ಬಿಡುಗಡೆ ಆದ 20 ದಿನದಲ್ಲಿ ಗಳಿಕೆ ಮಾಡಿದ್ದು ಎಷ್ಟು ನೂರು ಕೋಟಿ?

ಸಲಾರ್ ಬಾಕ್ಸ್ ಆಫಿಸ್ ಲೆಕ್ಕ ಇಲ್ಲಿದೆ
ಪ್ರಭಾಸ್ ಸಿನಿಮಾ ಅಬ್ಬರಕ್ಕೆ ಅಡೆತಡೆ ಇಲ್ಲ ಎನ್ನುವಂತಾಗಿದೆ. ಸಲಾರ್ ಸಿನಿಮಾ 750 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ದಟ್ಟವಾಗಿವೆ. ಹೀಗಿದ್ದಾಗ ವಿದೇಶಿ ಭಾಷೆಗಳಿಗೂ ಸಲಾರ್ ಡಬ್ಬಿಂಗ್ ಆಗಿ ರಿಲೀಸ್ ಆಗಲು ತಯಾರಿ ಆರಂಭಿಸಿದೆ. ಈಗಾಗಲೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಸಲಾರ್ ಈಗ ಈ ವಿದೇಶಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ಹೀಗಿದ್ದಾಗಲೇ ತನ್ನ ಬಾಕ್ಸ್ ಆಫಿಸ್ ಗಳಿಕೆಯನ್ನ ಹತ್ತಿರ ಹತ್ತಿರ 750 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ. 705 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಸಲಾರ್ ಈವರೆಗೂ ಗಳಿಸಿದೆ ಎನ್ನಲಾಗಿದೆ.
ಯುರೋಪ್‌ನಲ್ಲಿ ಅಬ್ಬರಿಸಲು ಸಲಾರ್ ಸಿದ್ಧ
ಸಲಾರ್ ಫಸ್ಟ್ ಲುಕ್ ಮೂಲಕ ಫ್ಯಾನ್ಸ್ ಡಿಸೈಡ್ ಆಗಿದ್ರು. ಈ ಸಿನಿಮಾ ನೆಕ್ಸ್ಟ್ ಲೆವೆಲ್ ಪಕ್ಕಾ ಅನ್ನೋದು ಫ್ಯಾನ್ಸ್‌ಗೆ ಗೊತ್ತಾಗಿತ್ತು. ಆ ಎಲ್ಲಾ ಆಸೆ ಈಗ ಈಡೇರಿದ್ದು, ಅದ್ರಲ್ಲೂ ಪ್ರಭಾಸ್ ಅಭಿಮಾನಿಗಳಿಗೆ 'ಸಲಾರ್' ಒಂದು ಜಾಕ್‌ಪಾಟ್ ಇದ್ದಂತೆ ಎಂಬ ಮಾತುಗಳು ಕೇಳಿಬರ್ತಿವೆ. ಯಾಕಂದ್ರೆ ಪ್ರಭಾಸ್ ಅವರಿಗೆ ಬಾಹುಬಲಿ ಬಳಿಕ ದೊಡ್ಡ ಬ್ರೇಕ್ ಕೊಟ್ಟಿದೆ ಸಲಾರ್ ಸಿನಿಮಾ. ಹೀಗಿದ್ದಾಗಲೇ ಯುರೋಪ್‌ನ ಭಾಷೆಗೂ ಸಲಾರ್ ಚಿತ್ರ ಡಬ್ ಆಗಿ ರಿಲೀಸ್ ಆಗುತ್ತಿದೆ.

ಸ್ಪ್ಯಾನಿಷ್ ಭಾಷೆಗೂ ಸಲಾರ್ ಎಂಟ್ರಿ
ಜಾಗತಿಕ ಸಿನಿಮಾ ಜಗತ್ತು ಒಂದಾಗುತ್ತಿದ್ದು, ಜಾಗತಿಕ ಸಿನಿಮಾ ರಂಗ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಲು ಸಿದ್ಧವಾಗುತ್ತಿದೆ. ಅದೇ ರೀತಿ 'ಸಲಾರ್' ಸಿನಿಮಾ ಕೂಡ ಹಲವು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಈಗ ವಿದೇಶಿ ಭಾಷೆಯಲ್ಲಿ ಕೂಡ ಈ ಸಿನಿಮಾ ಅಬ್ಬರಿಸಲು ಮುಂದಾಗಿದೆ. ಸ್ಪ್ಯಾನಿಷ್ ಭಾಷೆಗೆ ಡಬ್ ಆಗಿರುವ 'ಸಲಾರ್' 2024ರ ಮಾರ್ಚ್ 7ಕ್ಕೆ ಭಾರಿ ಅಬ್ಬರದೊಂದಿಗೆ ರಿಲೀಸ್ ಆಗಲಿದೆ. ಈ ನಡುವೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ತನ್ನ ಗಳಿಕೆಯನ್ನ ಕೂಡ ಸಲಾರ್ ಹೆಚ್ಚು ಮಾಡಿಕೊಳ್ಳುತ್ತಿದೆ.
ಒಟ್ನಲ್ಲಿ ಕನ್ನಡಿಗರ ತೆಲುಗು ಸಿನಿಮಾ ಅಂತ ಐಕಾನ್ ಆಗಿರುವ ಸಲಾರ್ ಇದೀಗ ತನ್ನ ಅಬ್ಬರನ ಯುರೋಪ್‌ಗೆ ವಿಸ್ತರಣೆ ಮಾಡಿದೆ. ಈ ಮೂಲಕ ಅಭಿಮಾನಿಗಳು ಈ ಸಿನಿಮಾವನ್ನು ತಮ್ಮ ಇಷ್ಟದ ಭಾಷೆಯಲ್ಲಿ ಕೂಡ ಕಣ್ತುಂಬಿಕೊಳ್ಳಬಹುದು. ಆದ್ರೆ ಅವರ ಆಸೆ ಈಡೇರಲು ಒಂದಷ್ಟು ದಿನ ಕಾಯಬೇಕಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಕೂಡ ಸಲಾರ್ ಚಿತ್ರ ಅಬ್ಬರಿಸುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಫ್ಯಾನ್ಸ್ ಕುತೂಹಲ & ಆಶ್ಚರ್ಯದಿಂದ ಕಾಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸಲಾರ್ ಸಿನಿಮಾ 1000 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.












Click it and Unblock the Notifications