ಡಾರ್ಲಿಂಗ್ ಪ್ರಭಾಸ್ ‘ಸಲಾರ್-2’ಗೆ ಅದ್ಧೂರಿ ಸಿದ್ಧತೆ?
'ಸಲಾರ್' ರಿಲೀಸ್ ಆಗಿ 1 ತಿಂಗಳು ಕಳೆದಿದ್ದು, ಈ ಸಿನಿಮಾ ಹತ್ತಾರು ದಾಖಲೆ ಸೃಷ್ಟಿ ಮಾಡಿದೆ. ನೋಡ ನೋಡುತ್ತಲೇ ಕನ್ನಡಿಗರ ಈ ಸಿನಿಮಾ 700 ಕೋಟಿ ರೂಪಾಯಿ ಗಡಿ ದಾಟಿ ಹೊಸ ಇತಿಹಾಸ ಬರೆದಿದೆ. ಹಾಗೇ ಓಟಿಟಿ ಅಖಾಡದಲ್ಲಿ ರಿಲೀಸ್ ಆಗಿರುವ 'ಸಲಾರ್' ನೋಡೋಕೆ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಹೀಗಿದ್ದಾಗಲೇ 'ಸಲಾರ್-2' ಬಗ್ಗೆ ಬಿಗ್ ಅಪ್‌ಡೇಟ್ ಈಗ ಓಡಾಡುತ್ತಿದೆ.
ಹೌದು, ದಕ್ಷಿಣ ಭಾರತದ ಸಿನಿಮಾ ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತದೆ. ಅದರಲ್ಲೂ ನಟ ಡಾರ್ಲಿಂಗ್ ಪ್ರಭಾಸ್ ಸಿನಿಮಾಗೆ ಅಮೆರಿಕದಿಂದ ಹಿಡಿದು ಅಫ್ಘಾನಿಸ್ತಾನ ತನಕ ದೊಡ್ಡ ಫ್ಯಾನ್ಸ್ ಇದ್ದಾರೆ. ಹೀಗಾಗಿ ಸೌತ್ ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಬಿರುಗಾಳಿ ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಈಗ 'ಸಲಾರ್' ಕೂಡ ದೊಡ್ಡ ಸದ್ದು ಮಾಡಿ 700 ಕೋಟಿ ರೂಪಾಯಿಗೂ ಹೆಚ್ಚು, ಹಣವನ್ನು ಗಳಿಸಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ 'ಸಲಾರ್-2' ರಿಲೀಸ್ ಬಗ್ಗೆ ಮಾಹಿತಿ ಓಡಾಡುತ್ತಿದ್ದು ಹಲ್‌ಚಲ್ ಎಬ್ಬಿಸಿದೆ.

'ಸಲಾರ್-2' ಬಗ್ಗೆ ಬಿಗ್ ಅಪ್‌ಡೇಟ್
ಸಲಾರ್ ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಿದ್ರೂ ನಿರ್ಮಿಸಿರುವುದು ಕನ್ನಡಿಗರು. ಡಾರ್ಲಿಂಗ್ ಪ್ರಭಾಸ್ & ಪೃತ್ವಿರಾಜ್ ಸುಕುಮಾರನ್ ಬಿಟ್ಟು ಬಹುತೇಕ ನಟರು & ನಟಿಯರು ಕನ್ನಡಿದವರು. ಸಲಾರ್ ಸಿನಿಮಾಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗ ಕೂಡ ಕನ್ನಡಿಗರಿಂದ ತುಂಬಿದೆ. ಕೆಜಿಎಫ್ ಸಿನಿಮಾಗೆ ಕೆಲಸ ಮಾಡಿ ಪಳಗಿದ್ದ ತಂಡವನ್ನೇ ಕಟ್ಟಿಕೊಂಡು, ಪ್ರಶಾಂತ್ ನೀಲ್ ಅವರು ಈಗ 'ಸಲಾರ್' ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಇದೇ ಸಮಯದಲ್ಲಿ ಅಭಿಮಾನಿಗಳ ಕಣ್ಣು, 'ಸಲಾರ್-2' ಮೇಲೆ ಬಿದ್ದಿದೆ.
ಡಾರ್ಲಿಂಗ್ ಅಬ್ಬರ ಮತ್ತೆ ಶುರು!
2025ಕ್ಕೆ 'ಸಲಾರ್-2' ಸಿನಿಮಾ ರಿಲೀಸ್ ಆಗೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಅಲ್ಲದೆ ಇನ್ನೇನು ಕೆಲ ದಿನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು 'ಸಲಾರ್-2'ಗೆ ಬೇಕಾದ ತಯಾರಿ ಆರಂಭ ಮಾಡಲಿದ್ದಾರೆ ಎನ್ನಲಾಗಿದೆ ಈಗಿರುವ ಮಾಹಿತಿ ಪ್ರಕಾರ 'ಸಲಾರ್-2'ಗೆ ಬೇಕಾಗಿರುವ ಕಥೆ ಜೊತೆಗೆ ಸ್ಕ್ರಿಪ್ಟ್ ಕೂಡ ಸಿದ್ಧ ಆಗಿದೆ ಎನ್ನಲಾಗಿದೆ. ಹೀಗಾಗಿ ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಸಲಾರ್-2 ಶೂಟಿಂಗ್ ಆರಂಭಿಸಲು ಬೇಕಿರುವ ತಯಾರಿ ನಡೆಸಲಿದ್ದಾರೆ ಅಂತ ಹೇಳಲಾಗಿದೆ. ನಟ ಡಾರ್ಲಿಂಗ್ ಪ್ರಭಾಸ್ ಸಿನಿಮಾ ತಂಡಕ್ಕೆ ಆದಷ್ಟು ಬೇಗ ಸಾಥ್ ನೀಡಲಿದ್ದು, 2025ಕ್ಕೆ 'ಸಲಾರ್-2' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಶುರು ಮಾಡುತ್ತೆ ಎನ್ನಲಾಗಿದೆ.
ಕೋಟಿ ಕೋಟಿ ದುಡಿದ ಸಲಾರ್
ಪ್ರಭಾಸ್ ಸಿನಿಮಾ ಅಬ್ಬರಕ್ಕೆ ಅಡೆತಡೆ ಇಲ್ಲ ಎನ್ನುವಂತಾಗಿದೆ. ಸಲಾರ್ ಸಿನಿಮಾ 750 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ದಟ್ಟವಾಗಿವೆ. ಹೀಗಿದ್ದಾಗಲೆ ವಿದೇಶಿ ಭಾಷೆಗಳಿಗೂ ಸಲಾರ್ ಡಬ್ಬಿಂಗ್ ಆಗಿ ರಿಲೀಸ್ ಆಗಲು ತಯಾರಿ ಆರಂಭಿಸಿದೆ. ಈಗಾಗಲೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಸಲಾರ್ ಈಗ ಈ ವಿದೇಶಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ಇದೇ ಸಮಯದಲ್ಲಿ ಮುಂದಿನ ಭಾಗದ ಬಗ್ಗೆಯೂ ದೊಡ್ಡದಾದ ಸುದ್ದಿ ಹೊರಬಿದ್ದಿದೆ.

ಭಾರತೀಯ ಸಿನಿಮಾ ರಂಗವು ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ಸಿನಿಮಾಗಳಿಗೆ ಅಭಿಮಾನಿಗಳು ಇದ್ದಾರೆ. 'ಸಲಾರ್' ಸಿನಿಮಾದ ಮೂಲಕ ಪ್ರಭಾಸ್ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದೆ. ಬಾಹುಬಲಿ-1 & ಬಾಹುಬಲಿ-2 ಹಿಟ್ ಆದ ಬಳಿಕ ರಾಧೆ ಶ್ಯಾಮ್ & ಆದಿಪುರುಷ್ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಹೀಗಾಗಿ ಅವರಿಗೆ ಬ್ರೇಕ್ ಬೇಕಿತ್ತು. ಆದರೆ ಈ ಆಸೆ ಈಗ ಈಡೇರಿದೆ, ಪ್ರಭಾಸ್‌ಗೆ ದೊಡ್ಡ ಬ್ರೇಕ್ ನೀಡಿದೆ ಸಲಾರ್. ಒಟ್ಟಾರೆ ಹೇಳೋದಾದರೆ ಈ ಸಿನಿಮಾ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸೋದು ಪಕ್ಕಾ ಹೀಗಾಗಿ ಆದಷ್ಟು ಬೇಗ ಸಲಾರ್-2 ರಿಲೀಸ್ ಮಾಡಲಿ ಅನ್ನೋದು ಅಭಿಮಾನಿಗಳ ಆಶಯ ಕೂಡ.












Click it and Unblock the Notifications