ಪ್ಯಾನ್ ಇಂಡಿಯಾ ನಿರ್ದೇಶಕರಿಗೆ 'ರಶ್ಮಿಕಾ, ಕಿಯಾರಾ' ಟಾಪ್ ಆಯ್ಕೆ; ಇವರಿಬ್ಬರಿಗೆ ಯಾಕಿಷ್ಟು ಬೇಡಿಕೆ?
ನವದೆಹಲಿ, ಮೇ 28: ದೇಶದ ವಿವಿಧ ಭಾಷೆಯ ಚಿತ್ರರಂಗಳಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮುಂದುವರಿದಿದೆ. ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ದೇಶಕರಿಗೆ ಈ ಇಬ್ಬರು ನಟಿಯರೇ ಟಾಪ್ ಆಯ್ಕೆ ಆಗಿದ್ದಾರೆ. ಒಂದರ ಹಿಂದೆ ಒಂದು ಸಿನಿಮಾಗಳಿಗೆ ಈ ನಟಿಯರು ಸಹಿ ಹಾಕುತ್ತಿದ್ದಾರೆ.
ದಕ್ಷಿಣ ಭಾರತ ಮತ್ತು ಬಾಲಿವುಡ್ ಚಲನಚಿತ್ರ ನಿರ್ದೇಶಕರು ಪ್ಯಾನ್-ಇಂಡಿಯನ್ ಪ್ರಾಜೆಕ್ಟ್‌ಗಳಲ್ಲಿ ಪ್ರಮುಖ ನಟಿಯರ ಪೈಕಿ ಕೆಲವು ಆಯ್ಕೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟಿ 'ದೀಪಿಕಾ ಪಡುಕೋಣೆ' ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ದೀರ್ಘ ಅವಧಿಗೆ ಹೆರಿಗೆ ರಜೆಯಲ್ಲಿದ್ದಾರೆ.

ಇನ್ನು ನಟಿ ಆಲಿಯಾ ಭಟ್ ಅವರು ಎಲ್ಲ ಚಿತ್ರಗಳನ್ನು ಒಪ್ಪಿಕೊಳ್ಳದೇ ಆಯ್ದ ಕಥೆ ಆಧಾರದಲ್ಲಿ ಒಂದಷ್ಟು ಚಿತ್ರಗಳಿಗೆ ಸಹಿ ಹಾಕಿದ್ದು, ಅವರು ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ನಿರ್ದೇಶಕರಿಗೆ ಸದ್ಯ ಕೆಲವು ನಟಿಮಣಿಯರ ಆಯ್ಕೆಯ ಅವಕಾಶ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
'ರಶ್ಮಿಕಾ, ಕಿಯಾರಾ' ನಿರ್ದೇಶಕರ ಫೇವರೇಟ್?
ಕರ್ನಾಟಕ ಮೂಲದ ಬಹುಭಾಷಾ ನಟಿ 'ರಶ್ಮಿಕಾ ಮಂದಣ್ಣ' ಈಗಾಗಲೇ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ವರ್ಷದ ಸ್ಟೈಲಿಶ್ ಆಕ್ಟ್ರೆಸ್ ಆಗಿರುವ ಬಾಲಿವುಡ್ ಬ್ಯೂಟಿ 'ಕಿಯಾರಾ ಅಡ್ವಾಣಿ' ಅವರು ದೊಡ್ಡ ದೊಡ್ಡ ಸಿನಿಮಾಗಳಿಗೆ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಈ ಇಬ್ಬರು ನಟಿಮಣಿಯರನ್ನು ಸಾಲು ಸಾಲು ಸಿನಿಮಾಗಳಿಗೆ ಪ್ಯಾನ್ ಇಂಡಿಯಾ ನಿರ್ದೇಶಕರು ಆಯ್ಕೆ ಮಾಡುತ್ತಿದ್ದಾರೆ.
ಈ ಇಬ್ಬರು ನಟಿಯರ ಆಯ್ಕೆ ಅನಿವಾರ್ಯವೇ?
ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ತಮ್ಮ ನಟನೆಯಿಂದ ಅಪಾರ ಸಂಖ್ಯೆಯಲ್ಲಿ ಜನಮನ್ನಣೆ, ಅಭಿಮಾನಿ ಬಳಗ ಹೊಂದಿರುವ ನಟಿಯರಿಗೆ ಬೇಡಿಕೆ ಹೆಚ್ಚಾಗಿದೆ. ಇಂತಹ ನಟಿಯರು ಹಲವರಿದ್ದರು. ಅವರಲ್ಲಿ ಕೆಲವರು ವೈಯಕ್ತಿಕ ಕಾರಣಗಳಿಂದ ರಜೆ, ತಾತ್ಕಾಲಿಕವಾಗಿ ಚಿತ್ರರಂಗದ ದೂರ ಇದ್ದಾರೆ. ಈ ಕಾರಣ ಇರುವ ಕೆಲವು ಪ್ಯಾನ್ ಇಂಡಿಯಾ ಸ್ಟಾರ್ ನಟಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ನಿರ್ದೇಶಕರಿಗೆ ಸೃಷ್ಟಿಯಾಗಿದೆ ಎಂದನಿಸುತ್ತದೆ.

ನಟಿಯರಾದ ರಶ್ಮಿಕಾ ಮಂದಣ್ಣಾ ಹಾಗೂ ಕಿಯಾರಾ ಅಡ್ವಾನಿ ಈ ಇಬ್ಬರೂ ನಟಿಯರು ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹಲವಾರು ಪ್ರಮುಖ ಚಿತ್ರಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನಟಿ ಕಿಯಾರಾ ಅಡ್ವಾಣಿ ಮುಂದಿನ ಸಿನಿಮಾ
ನಟಿ ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ "ಯುದ್ಧ 2" ಮತ್ತು "ಡಾನ್ 3" ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ತೆಲುಗಿನಲ್ಲಿ "ಗೇಮ್ ಚೇಂಜರ್" ನಲ್ಲಿ ಅವರು ನಟಿಸುತ್ತಿದ್ದಾರೆ. ಅಲ್ಲದೇ ಕನ್ನಡದ ರಾಕಿಂಗ್ ಸ್ಟಾರ್ ಕೆಜಿಎಫ್ ಖ್ಯಾತಿಯ 'ಯಶ್' ಅವರ ಹೊಸ ಚಿತ್ರ "ಟಾಕ್ಸಿಕ್" ಗೂ ಕಿಯಾರಾ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ಅವರು ಜ್ಯೂನಿಯರ್ ಎನ್‌ಟಿಆರ್ -ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ದೊಡ್ಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದಿನ್ನು ಮಾತುಕತೆ ಹಂತದಲ್ಲಿದ್ದಾರೆ.
ನಟಿ ರಶ್ಮಿಕಾ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯೂಸಿ
ಇತ್ತ ನಟಿ ರಶ್ಮಿಕಾ ಮಂದಣ್ಣ ಸದ್ಯ "ಪುಷ್ಪ 2" ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಮತ್ತೊಂದು ಪ್ಯಾನ್-ಇಂಡಿಯನ್ ಸಿನಿಮಾ ನಟ ದನುಷ್ ಅಭಿನಯದ "ಕುಬೇರ" ಚಿತ್ರೀಕರಣದಲ್ಲಿಅವರು ಪಾಲ್ಗೊಂಡಿದ್ದಾರೆ. ರಶ್ಮಿಕಾ ಅವರು ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಮುಂದಿನ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ "ಸಿಕಂದರ್" ಗೂ ಆಯ್ಕೆ ಆಗಿದ್ದಾರೆ.
ಟಾಪ್ ನಟಿಯರ ಸಾಲಿನಲ್ಲಿ ಜಾನ್ವಿ ಕಪೂರ್
ಇದರೊಂದಿಗೆ ನಟಿ ಜಾನ್ವಿ ಕಪೂರ್ ಅವರು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಜ್ಯೂ. ಎನಟಿಆರ್ ಅಭಿನಯದ ''ದೇವರ'' ಸಿನಿಮಾದಲ್ಲಿ ಬಣ್ಣ ಹಚ್ಚಿಸಿದ್ದಾರೆ. ಪುಷ್ಪ-2 ಸಿನಿಮಾ ನಿರ್ದೇಶಕ ಸುಕುಮಾರ್ ನಿರ್ದೇಶದನ ಮುಂದಿನ ಚಿತ್ರಕ್ಕೂ ಜಾನ್ವಿ ಅವರು ಆಯ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ನಿರ್ದೇಶಕರ ನೆಚ್ಚಿನ ಆಯ್ಕೆಯ ನಟಿಯರ ಸಾಲಿನಲ್ಲಿ ಇವರಿಗೂ ಒಬ್ಬರಾಗಬಹುದು.
ಹೀಗೆ ಈ ನಟಿಯರ ಮುಂದೆ ಸಾಲು ಸಾಲು ಸಿನಿಮಾಗಳು ಇವೆ. ಮುಂದೆ ಬರಲಿರುವ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೆಚ್ಚಾಗಿ ನಿರ್ದೇಶಕರು ಈ ಕೆಲವು ನಟಿಯರನ್ನು ಆಯ್ಕೆ ಮಾಡಿದ್ದಾರೆ. ಇವರಿಗೆ ಈ ಆಯ್ಕೆ ಅನಿವಾರ್ಯ ಎನ್ನಲಾಗುತ್ತಿದೆ.












Click it and Unblock the Notifications