OTT releases this week: ಈ ವಾರ ಒಟಿಟಿಗೆ ಬರ್ತಿವೆ ಸಕತ್ ಸಿನಿಮಾ, ವೆಬ್ ಸೀರಿಸ್‌ಗಳು
ಹೊರಗೆ ಸುಡು ಸುಡುವ ಬಿಸಿಲು... ಸಂಜೆ ಆದರೆ ಮಳೆ ಶುರು... ಹೊರಗಡೆ ಟ್ರಪ್ ಹೋಗೊಕೆ ಹವಾಮಾನ ಸರಿಯಿಲ್ಲ... ಹಾಗಾಗಿ ಮನೆಯಲ್ಲಿಯೇ ಕುಳಿತು ಆರಾಮಾವಾಗಿರಲು ಬಯಸುವುದಾದರೆ ಸಾಕು.... ನಿಮಗಾಗಿ ಈ ವಾರ ಒಟಿಟಿಗೆ ಸಕತ್ ಆಗಿರುವ ಸಿನಿಮಾ ಮತ್ತು ವೆಬ್ ಸೀರಿಸ್‌ಗಳು ಬರುತ್ತಿದ್ದು, ವೀಕೆಂಡ್ ಏಂಜಾಯ್ ಮಾಡಬಹುದು.
ಹಲವಾರು ರೋಮಾಂಚಕಾರಿ ಮತ್ತು ಥಿಯೇಟರ್‌ನಲ್ಲಿ ಸಕತ್ ಕಮಾಲ್ ಮಾಡಿದ ಸಿನಿಮಾಗಳು ಮತ್ತು ಬಹು ನಿರೀಕ್ಷಿತ ವೆಬ್ ಸರಣಿಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಡುತ್ತಿವೆ. ಶೈತಾನ್‌ನಿಂದ ಹೀರಾಮಂಡಿವರೆಗೂ ಹಲವು ಸಿನಿಮಾಗಳು ಬರುತ್ತಿವೆ.ಹೀಗಾಗಿ, ಈ ವಾರಾಂತ್ಯದಲ್ಲಿ ಎಲ್ಲೂ ಹೋಗದೆ ಮನೆಯಲ್ಲಿಯೇ ಕುಳಿತು ಆರಾಮವಾಗಿ ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ನೋಡಬಹುದು. ಟಾಪ್ ಲಿಸ್ಟ್‌ನಲ್ಲಿರುವ ಸಿನಿಮಾ, ವೆಬದ ಸೀರಿಸ್ ಪಟ್ಟಿ ಇಲ್ಲಿದೆ.

ಶೈತಾನ್ - ನೆಟ್‌ಫ್ಲಿಕ್ಸ್
ಥಿಯೇಟರ್‌ಗಳಲ್ಲಿ ಕಮಾಲ್ ಮಾಡಿದ್ದ 'ಶೈತಾನ್' ಮೇ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಹಿಟ್ ಆಗಿದ್ದ ಪಡೆದ ಗುಜರಾತಿ ಚಲನಚಿತ್ರ 'ವಾಶ್'ನ ಹಿಂದಿ ರಿಮೇಕ್ ಆಗಿದೆ. ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ, ಜಾಂಕಿ ಬೋಡಿವಾಲಾ ಮತ್ತು ಅಂಗದ್ ರಾಜ್ ನಟಿಸಿರುವ ಈ ಚಿತ್ರವನ್ನು 65 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಚಿತ್ರವನ್ನು ಜಿಯೋ ಸ್ಟುಡಿಯೋಸ್, ಅಜಯ್ ದೇವಗನ್ ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ಇಂಟರ್ನ್ಯಾಷನಲ್ ಮೂಲಕ ಪ್ರಸ್ತುತಪಡಿಸಲಾಗಿದೆ. ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.
ಹೀರಾಮಂಡಿ: ದಿ ಡೈಮಂಡ್ ಬಜಾರ್ - ನೆಟ್‌ಫ್ಲಿಕ್ಸ್
ಸಂಜಯ್ ಲೀಲಾ ಬನ್ಸಾಲಿಯವರ 8 ಎಪಿಸೋಡ್‌ಗಳ ವೆಬ್ ಸರಣಿಯು ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. 1940 ರ ಭಾರತೀಯ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ವೆಬ್ ಸೀರಿಸ್‌ನಲ್ಲಿದೆ. ಇದರಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್, ಶರ್ಮಿನ್ ಸೆಗಲ್ ಮತ್ತು ತಹಾ ಶಾ ಬಾದುಸ್ಶಾ ನಟಿಸಿದ್ದಾರೆ.
ಮಂಜುಮ್ಮೆಲ್ ಬಾಯ್ಸ್ - ಡಿಸ್ನಿ ಹಾಟ್‌ಸ್ಟಾರ್
ಈ ವರ್ಷದ ಫೆಬ್ರವರಿಯಲ್ಲಿ ಥಿಯೇಟರ್‌ಗಳಿಗೆ ಬಂದ ಹಿಟ್ ಮಲಯಾಳಂ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್' ಈಗ ಮೇ 5 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಚಿದಂಬರಂ ನಿರ್ದೇಶನದ ಈ ಚಿತ್ರದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್ ಮತ್ತು ಗಣಪತಿ ಮುಂತಾದವರು ನಟಿಸಿದ್ದಾರೆ.
ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, 2006 ರಲ್ಲಿ ಗುನಾ ಗುಹೆಗಳಲ್ಲಿ ತಮ್ಮ ರಜೆಯ ಸಮಯ ಕಳೆಯಲು ಹೋಗಿ ದುರಂತಕ್ಕೆ ಸಿಲುಕುವ ಸ್ನೇಹಿತರ ಕಥೆಯನ್ನು ಹೇಳುತ್ತದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದು, ಜಾಗತಿಕವಾಗಿ 200 ಕೋಟಿಗಿಂತ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ.

ದಿ ವೇಲ್- ಡಿಸ್ನಿ ಹಾಟ್‌ಸ್ಟಾರ್
ಏಪ್ರಿಲ್ 30 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಿ ವೇಲ್ ವೆಬ್ ಸರಣಿಯನ್ನು ಬಿಡುಗಡೆಯಾಗಿದೆ. ಈ ವೆಬ್ ಸರಣಿಯ ಹೊಸ ಸಂಚಿಕೆಗಳು ಪ್ರತಿ ಮಂಗಳವಾರ ಮಧ್ಯಾಹ್ನ 12.30 ಕ್ಕೆ ಬಿಡುಗಡೆಯಾಗುತ್ತವೆ. ಈ ಸರಣಿಯು ಸತ್ಯ ಮತ್ತು ಸುಳ್ಳಿನ ಮಾರಣಾಂತಿಕ ಆಟವನ್ನು ಆಡುವ ಇಬ್ಬರು ಮಹಿಳೆಯರ ಕುರಿತಾಗಿದೆ. ಇದರಲ್ಲಿ ಎಲಿಸಬೆತ್ ಮಾಸ್, ಯುಮ್ನಾ ಮರ್ವಾನ್, ಜೋಶ್ ಚಾರ್ಲ್ಸ್, ಡಾಲಿ ಬೆನ್ಸಲಾಹ್, ಜೋನಾ ಬಿಡೆರಿಯೊ ಮತ್ತು ಜೇಮ್ಸ್ ಪ್ಯೂರ್ಫಾಯ್ ನಟಿಸಿದ್ದಾರೆ.
ದಿ ಐಡಿಯಾ ಆಫ್ ಯು- ಅಮೆಜಾನ್ ಪ್ರೈಮ್
ಆನ್ ಹ್ಯಾಥ್‌ವೇ ಮತ್ತು ನಿಕೋಲಸ್ ಗ್ಯಾಲಿಟ್‌ಜಿನ್ ನಟಿಸಿರುವ ದಿ ಐಡಿಯಾ ಆಫ್ ಯು, ಮೇ 2 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಈ ರೋಮ್ಯಾಂಟಿಕ್ ಚಿತ್ರವು 40 ವರ್ಷ ವಯಸ್ಸಿನ ವಿಚ್ಛೇದಿತ ಮತ್ತು ಸಿಲ್ವರ್ ಲೇಕ್ ಆರ್ಟ್ ಗ್ಯಾಲರಿಯ ಮಾಲೀಕರ ಕಥೆಯನ್ನು ಹೇಳುತ್ತದೆ.
ಬ್ರೋಕನ್ ನ್ಯೂಸ್ 2 - ZEE5
ಬ್ರೋಕನ್ ನ್ಯೂಸ್ 2 ಮೇ 3 ರಂದು ZEE5 ನಲ್ಲಿ ಬಿಡುಗಡೆ ಮಾಯಾಗಿದೆ. ವಿನಯ್ ವೈಕುಲ್ ನಿರ್ದೇಶಿಸಿರುವ ಈ ವೆಬ್ ಸೀರಿಸ್‌ನಲ್ಲಿ ಸೋನಾಲಿ ಬೇಂದ್ರೆ, ಜೈದೀಪ್ ಅಹ್ಲಾವತ್ ಮತ್ತು ಶ್ರಿಯಾ ಪಿಲ್ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ಮೊದಲ ಸೀಸನ್‌ನಲ್ಲಿ ರಾಧಾ ಭಾರ್ಗವ (ಶ್ರಿಯಾ ನಟಿಸಿದ್ದಾರೆ) ಮೇಲೆ ಭಯೋತ್ಪಾದನೆ ಆರೋಪ ಹೊರಿಸಿ ಜೈಲಿಗೆ ಹಾಕಲಾಯಿತು. ಈ ಸೀಸನ್‌ನಲ್ಲಿ ದೀಪಾಂಕರ್ ಸನ್ಯಾಲ್ (ಜೈದೀಪ್ ಅಹ್ಲಾವತ್) ವಿರುದ್ಧ ಸೇಡು ತೀರಿಸಿಕೊಳ್ಳಲು ರಾಧಾ ತೆಗೆದುಕೊಳ್ಳುವ ನಿರ್ಧಾರಗಳನ್ನು ನೋಡಬಹುದು.











Click it and Unblock the Notifications