Oscars 2025 Winners List: 2025ರ 97ನೇ ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
Oscars 2025 Winners List: ಆಸ್ಕರ್ ಸಿನಿಮಾ ಜಗತ್ತಿನಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಈಗಾಗಲೇ 96ನೇ ಅಕಾಡೆಮಿ ಅವಾರ್ಡ್‌ಗಳ ಕಾರ್ಯಕ್ರಗಳು ನಡೆದಿದ್ದು, ಇಂದು (ಮಾರ್ಚ್ 03) 97ನೇ ಅಕಾಡೆಮಿ ಪ್ರಶಸ್ತಿಗಳು ಅಂದರೆ ಆಸ್ಕರ್ 2025 ಕ್ಯಾಲಿಫೋರ್ನಿಯಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ. ಹಾಗಾದ್ರೆ ಅವರು ಯಾರಿಗೆ ಯಾವ ಸಿನಿಮಾಗೆ ಅವಾರ್ಡ್ ಬಂದಿದೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂದು 97ನೇ ಅಕಾಡೆಮಿ ಪ್ರಶಸ್ತಿಗಳು ಅಂದರೆ ಆಸ್ಕರ್ 2025 ಕ್ಯಾಲಿಫೋರ್ನಿಯಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ. ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಈ ಬಾರಿ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ದೊಡ್ಡ ಮಟ್ಟದಲ್ಲಿ ಸಮಾರಂಭ ನಡೆದಿದೆ. ಅಲ್ಲದೆ, ಕಾಡ್ಗಿಚ್ಚಿನ ವಿರುದ್ಧ ಸತತ ಹೋರಾಟ ನಡೆಸಿರುವ ಅಗ್ನಿಶಾಮಕ ದಳದವರಿಗೆ ವೇದಿಕೆ ಮೇಲೆ ಗೌರವ ಸೂಚಿಸಲಾಗಿದ್ದು, ಬಳಿಕ ಪ್ರಶಸ್ತಿ ಸಮಾರಂಭವನ್ನು ಆರಂಭ ಮಾಡಲಾಯಿತು.

2025 ಆಸ್ಕರ್ ಪಡೆದ ಸಿನಿಮಾಗಳು
* ಅತ್ಯುತ್ತಮ ಪೋಷಕ ನಟಿ: ಜೊಯಿ ಸಲ್ಡಾನಾ (ಎಮಿಲಿಯಾ ಪೆರೆಜ್‌ಗಾಗಿ)
* ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಫ್ಲೋ
* ಅತ್ಯುತ್ತಮ ವಸ್ತ್ರ ವಿನ್ಯಾಸಕ: ಪಾಲ್ ತಾಜ್‌ವೆಲ್ (ವಿಕೆಡ್)
* ಅತ್ಯುತ್ತಮ ಮೂಲ ಚಿತ್ರಕಥೆ: ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಮೇಕಪ್, ಕೇಶವಿನ್ಯಾಸ: ದಿ ಸಬ್‌ಸ್ಟೆನ್ಸ್
* ಅತ್ಯುತ್ತಮ ಮೂಲ ಗೀತೆ: ಎಲ್ ಮಾಲ್
* ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
* ಅತ್ಯುತ್ತಮ ಸಾಕ್ಷ್ಯಚಿತ್ರ: ನೋ ಅದರ್ ಲ್ಯಾಂಡ್
* ಅತ್ಯುತ್ತಮ ಎಡಿಟಿಂಗ್: ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
* ಅತ್ಯುತ್ತಮ ಧ್ವನಿ ವಿಭಾಗ: ಡ್ಯೂನ್ - ಭಾಗ 2 ಚಲನಚಿತ್ರ
* ಅತ್ಯುತ್ತಮ ಸೌಂಡ್ ಆ್ಯಂಡ್ ಬೆಸ್ಟ್ ವಿಶ್ಯುವಲ್ ಎಫೆಕ್ಟ್: ಡ್ಯೂನ್ ಭಾಗ 2
* ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ಐ ಆಮ್ ನಾಟ್ ಎ ರೋಬೋಟ್
* ಅತ್ಯುತ್ತಮ ಛಾಯಾಗ್ರಹಣ: ದಿ ಬ್ರೂಟಲಿಸ್ಟ್
* ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ಐ ಆಮ್ ಸ್ಟಿಲ್ ಹಿಯರ್ (ಬ್ರೆಜಿಲ್)
* ಅತ್ಯುತ್ತಮ ಮೂಲ ಸಂಗೀತ: ದಿ ಬ್ರೂಟಲಿಸ್ಟ್
ನಟಿ ಪ್ರಿಯಾಂಕಾ ಚೋಪ್ರಾ, ಆಸ್ಕರ್ ಗೆದ್ದಿರೋ 'ದಿ ಎಲಿಫೆಂಟ್ ವಿಸ್ಪರ್ಸ್'ನ ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ಇನ್ನಿತರರು ನಿರ್ಮಿಸಿದ 'ಅನುಜಾ' ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರಕ್ಕಾಗಿ ಐ ಆಮ್ ನಾಟ್ ಎ ರೋಬೋಟ್ ಪ್ರಶಸ್ತಿ ಗಳಿಸಿತು. ಆಸ್ಕರ್ ಕಿರುಪಟ್ಟಿಯಲ್ಲಿದ್ದ ಏಕೈಕ ಭಾರತೀಯ ಚಿತ್ರ ಅನುಜಾಗೆ ಅವಾರ್ಡ್ ಕೈತಪ್ಪಿದೆ.












Click it and Unblock the Notifications