ಆ ಇಬ್ಬರು ನಟರ ಸ್ಟಾರ್‌ಡಮ್‌ ಕನ್ನಡದಲ್ಲಿ ಬೇರೆ ಯಾರಿಗೂ ಇಲ್ಲ: ನಟ ಅವಿನಾಶ್‌ ಹೇಳಿದ್ದು ಯಾರ ಬಗ್ಗೆ?

ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಹಿರಿಯ ನಟ ಅವಿನಾಶ್‌ ಅವರು ಸ್ಯಾಂಡಲ್‌ವುಡ್‌ ಬಗ್ಗೆ ಶಾಕಿಂಗ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿನ ಪ್ರಮುಖ ಸ್ಟಾರ್‌ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಅವಿನಾಶ್‌ ಅವರು ಈಗಿನ ಸ್ಟಾರ್‌ ನಟರೊಂದಿಗೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈಗಿರುವ ನಟರ ಬಗ್ಗೆಯೂ ಅವರು ಮಾತನಾಡಿರುವ ಅವರು, ಒಬ್ಬರು ನಟರಿಗೆ ಇರುವ ಸ್ಟಾರ್‌ಡಮ್‌ ಕನ್ನಡದಲ್ಲಿ ಬೇರೆ ಯಾರಿಗೂ ಬಂದಿಲ್ಲ ಎಂದು ಹೇಳಿದ್ದಾರೆ. ಅವಿನಾಶ್‌ ಅವರು ಹೇಳಿರುವ ಆ ಇಬ್ಬರು ನಟರು ಯಾರು ಗೊತ್ತಾ?

ಅವಿನಾಶ್‌ ಅವರು ಡೇಲಿ ಮಾಧ್ಯಮ ಎನ್ನುವ ಯೂಟ್ಯೂಬ್‌ ಸಂದರ್ಶನದಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹೊಸಬರಿಗೆ ಅವಕಾಶಗಳನ್ನ ಕೊಡಬೇಕು. ಕನ್ನಡಕ್ಕೆ ಇನ್ನೂ ಹೆಚ್ಚಿನ ಹೀರೋಗಳ ಅಗತ್ಯವಿದೆ. ಆದರೆ ನಟರು ಹುಟ್ಟಿಕೊಳ್ಳುತ್ತಿಲ್ಲ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ದುನಿಯಾ ವಿಜಯ್‌ ಆದ ಮೇಲೆ ಅಂತಹ ಹೇಳಿಕೊಳ್ಳುವ ನಟರು ಯಾರೂ ಕನ್ನಡಕ್ಕೆ ಸಿಗಲಿಲ್ಲ. ಬಂದರೂ ಉಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Only Sudeep And Darshan Have Unmatched Stardom In Sandalwood Veteran Actor Avinash

ಇನ್ನು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಅಲ್ಲೋ ಹೊರಟು ಹೋಗಿದ್ದಾರೆ. ಬೇರೆ ಕಡೆನೇ ಹೊರಟು ಹೋಗಿರುವ ಅವರು ನಾಟ್‌ರೀಚಬಲ್‌ ಅಂತಾನೇ ಹೇಳಬಹುದು. ಈ ಹಿಂದೆ ಶಿವಣ್ಣ ಇದ್ರು, ಆ ಮೇಲೆ ಸುದೀಪ್‌ ಬಂದ್ರು, ದರ್ಶನ್‌ ಹಾಗೂ ಪುನೀತ್‌ ಇದ್ರು, ನಂತರ ಗಣೇಶ್‌ ಹಾಗೂ ದುನಿಯಾ ವಿಜಿ ಬಂದ್ರು. ಆ ಮೇಲೆ ಯಾರೂ ಬರಲಿಲ್ಲ, ಬಂದವರೂ ಉಳಿದುಕೊಳ್ಳಲಿಲ್ಲ. ಇದು ಸ್ಯಾಂಡಲ್‌ವುಡ್‌ಗೆ ತುಂಬಾ ದೊಡ್ಡ ಹೊಡೆತ ಎಂದಿದ್ದಾರೆ.

ನೀನಾಸಂ ಸತೀಶ್‌, ಡಾಲಿ ಧನಂಜಯ್‌ ಅಂತಹ ಒಳ್ಳೆಯ ನಟರಿದ್ದಾರೆ. ಅವರಿಗೆ ದೊಡ್ಡ ಹಿಟ್‌ ಸಿಕ್ಕರೆ ಸ್ಟಾರ್‌ಡಮ್‌ ಅನ್ನೋದು ಸಿಗುತ್ತೆ. ಇಬ್ಬರಿಗೂ ಜನಪ್ರಿಯತೆ ಇದೆ. ಆದರೆ ಅದು ಇನ್ನು ತುಂಬಾ ದೊಡ್ಡಮಟ್ಟಕ್ಕೆ ಇಲ್ಲ ಅನಿಸುತ್ತೆ, ಪ್ರಜ್ವಲ್‌ ದೇವರಾಜ್‌ ಕೂಡ ಇದ್ದಾರೆ. ಗಣೇಶ್‌, ದುನಿಯಾ ವಿಜಿ ಬಂದು ಎಷ್ಟು ವರ್ಷಗಳಾಯ್ತು? ಅದಾದ ಮೇಲೆ ಒಳ್ಳೆಯ ನಟರು ಬರಲೇ ಇಲ್ಲ. ಧನಂಜಯ್‌ ಕೂಡ ಇತ್ತೀಚೆಗೆ ಬಂದ ನಟ ಎಂದು ಅವಿನಾಶ್‌ ಹೇಳಿದ್ದಾರೆ.

ಇಂದಿಗೂ ದರ್ಶನ್‌ ಹಾಗೂ ಸುದೀಪ್‌ಗೆ ಸಿಗುವ ಮಾರ್ಕೆಟ್‌ ಈಗಿನ ಜನರೇಷನ್‌ ನಟರಿಗೆ ಎಲ್ಲಿದೆ? ಅವರಿಗಿರುವ ಜನಪ್ರಿಯತೆ, ಫ್ಯಾನ್‌ ಫಾಲೋಯಿಂಗ್‌, ಸ್ಟಾರ್‌ಡಮ್‌ ಇನ್ನೂ ಯಾರಿಗೂ ಬಂದಿಲ್ಲ ಎಂದು ಅವಿನಾಶ್‌ ಹೇಳಿದ್ದಾರೆ. ನನ್ನ ಪ್ರಕಾರ ಇನ್ನೂ ಒಂದು ಐದಾರು ಜನ ಹೀರೋಗಳು ಬಂದ್ರೆ ಕನ್ನಡ ಚಿತ್ರರಂಗ ಬ್ಯುಸಿಯಾಗುತ್ತೆ. ಆಗ ಎಲ್ಲರಿಗೂ ಕೆಲಸಗಳು ಸಿಗುತ್ತೆ, ಸಾಮಾನ್ಯವಾಗಿ ಕೆಲಸ ಬೇಕು, ಆದರೆ ಈಗ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪುನೀತ್‌ ನಿಧನ ದೊಡ್ಡ ಲಾಸ್‌!

ಪುನೀತ್‌ ರಾಜ್‌ಕುಮಾರ್‌ ಅವರ ನಿಧನವಂತೂ ಕನ್ನಡಕ್ಕೆ ದೊಡ್ಡ ಲಾಸ್‌, ಪರ್ಸನಲ್‌ ಆಗಿಯೂ ಅವರು ಇಲ್ಲದಿರುವುದು ದೊಡ್ಡ ಹೊಡೆತ. ಅದಕ್ಕಿಂತ ಚಿತ್ರರಂಗಕ್ಕೆ ಇನ್ನೂ ದೊಡ್ಡ ಲಾಸ್‌ ಎಂದಿದ್ದಾರೆ. ಅಪ್ಪು ವರ್ಷಕ್ಕೆ ಎರಡು ಮೂರು ಸಿನಿಮಾಗಳನ್ನ ಮಾಡ್ತಿದ್ರು. ಈಗ ಅಪ್ಪು ಅವರಂತಹ ಸ್ಟಾರ್‌ಡಮ್‌ ಇರುವ ನಟ ಬರಬೇಕು ಅಂದ್ರೆ ಇನ್ನು ಎಷ್ಟು ವರ್ಷ ಬೇಕು? ಅದೇ ರೀತಿ ದರ್ಶನ್‌, ಸುದೀಪ್‌ ಅವರಂತ ಹೀರೋಗಳು ಹುಟ್ಟಲು ಇನ್ನೆಷ್ಟು ವರ್ಷ ಬೇಕಾಗುತ್ತೆ? ಎಂದು ಕೇಳಿದ್ದಾರೆ. ಅವರು ಏನಿಲ್ಲ ಅಂದ್ರೂ ಒಂದಿಪ್ಪತ್ತು ವರ್ಷಗಳಿಂದ ಆ ಸ್ಥಾನವನ್ನ ಗಳಿಸಿದ್ದಾರೆ ಎಂದು ಅವಿನಾಶ್‌ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+