Get Updates
Get notified of breaking news, exclusive insights, and must-see stories!

ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು

ಕನ್ನಡದ 'ಕೆಡಿ' (KD-The Devil) ಚಿತ್ರದ 'ಸೆರಗ ಸರ್ಸೆ' ಹಾಡಿನ ವಿವಾದ ಈಗ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ, ನಟಿ ನೋರಾ ಫತೇಹಿ ಅವರ ವೃತ್ತಿಜೀವನಕ್ಕೆ ಕುತ್ತು ತರುವ ಹಂತಕ್ಕೆ ತಲುಪಿದೆ. ಹಾಡಿನ ಸಾಹಿತ್ಯ 'ಅಶ್ಲೀಲ' ಮತ್ತು ಡಬಲ್‌ ಮೀನಿಂಗ್‌ನಿಂದ ಕೂಡಿದೆ ಎಂಬ ಆರೋಪದ ಬೆನ್ನಲ್ಲೇ, ಹತ್ತು ಮಂದಿ ವಕೀಲರ ತಂಡವು ಕೇಂದ್ರ ಗೃಹ ಸಚಿವಾಲಯದ ಮೆಟ್ಟಿಲೇರಿದೆ.

ವಕೀಲರ ದೂರಿನಲ್ಲೇನಿದೆ?

ನೋರಾ ಫತೇಹಿ ಅವರು ವಿದೇಶಿ ಪ್ರಜೆಯಾಗಿದ್ದು, ಭಾರತದಲ್ಲಿ ಕೆಲಸ ಮಾಡಲು ನೀಡಿರುವ 'ವರ್ಕ್ ಪರ್ಮಿಟ್' (Work Permit) ಅನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಅವರನ್ನು ಭಾರತದಿಂದ ಗಡೀಪಾರು ಮಾಡಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ. ಈ ಹಾಡು ಸಾರ್ವಜನಿಕ ನೈತಿಕತೆ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದಾರೆ.

Nora Fatehi

'ಭಾರತೀಯ ನ್ಯಾಯ ಸಂಹಿತೆ', 'ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆ-1986' ಮತ್ತು 'ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಅಡಿಯಲ್ಲಿ ಈ ಹಾಡು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಿದೇಶಿ ಪ್ರಜೆಗಳು ಸಾರ್ವಜನಿಕ ಶಾಂತಿ ಅಥವಾ ನೈತಿಕತೆಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ವಕೀಲರು ವಾದಿಸಿದ್ದಾರೆ.

ನೋರಾ ಫತೇಹಿ ನೀಡಿದ ಸ್ಪಷ್ಟನೆ ಏನು?

ಈ ವಿವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ತಮಗೆ ಈ ಹಾಡಿನ ಅರ್ಥವೇ ತಿಳಿದಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆಯೇ ಚಿತ್ರೀಕರಿಸಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅವರು ಹೇಳಿದ್ದನ್ನೇ ನಂಬಿ ನಟಿಸಿದೆ. ಇದು ಸಂಜಯ್ ದತ್ ಅವರಂತಹ ದೊಡ್ಡ ನಟರಿದ್ದ ಸಿನಿಮಾ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದೆ ಎಂದಿದ್ದಾರೆ.

ಅನುಮತಿ ಇಲ್ಲದೆ ಹಿಂದಿ ಅನುವಾದ ಮಾಡಲಾಗಿದೆ. ಈ ಹಾಡನ್ನು ಹಿಂದಿಗೆ ಡಬ್ ಮಾಡುವಾಗ ಅಥವಾ ಸಾಹಿತ್ಯ ಬದಲಾಯಿಸುವಾಗ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ. ಆಕ್ಷೇಪಾರ್ಹ ಸಾಹಿತ್ಯದ ಬಗ್ಗೆ ನನಗೆ ಅರಿವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಹಾಡಿನ ಲಾಂಚ್ ಕಾರ್ಯಕ್ರಮದಲ್ಲಿ ತಮ್ಮ ಮತ್ತು ಸಂಜಯ್ ದತ್ ಅವರ ಎಐ ಫೋಟೋಗಳನ್ನು ಬಳಸಿದ್ದನ್ನು ನೋಡಿ ತಮಗೆ ಕಿರಿಕಿರಿಯಾಗಿತ್ತು ಎಂದು ನೋರಾ ಬಹಿರಂಗಪಡಿಸಿದ್ದಾರೆ.

ಮುಂದಿನ ಹಂತವೇನು?

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ, ಸೆನ್ಸಾರ್ ಮಂಡಳಿ (CBFC) ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಈ ದೂರನ್ನು ರವಾನಿಸಲಾಗಿದೆ. ಒಂದು ವೇಳೆ ಗೃಹ ಸಚಿವಾಲಯವು ವಕೀಲರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದರೆ, ನೋರಾ ಫತೇಹಿ ಭಾರತದಲ್ಲಿ ನಟಿಸುವುದು ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು.

ನೋರಾ ಫತೇಹಿ ಭಾರತದ ಪ್ರಜೆಯಲ್ಲ, ಕೆನಡಾ ಮೂಲದವರು. ವಿದೇಶಿ ಪ್ರಜೆಗಳು ಭಾರತದಲ್ಲಿ ಕೆಲಸ ಮಾಡಲು ಕಟ್ಟುನಿಟ್ಟಾದ ನಿಯಮಗಳಿವೆ. ಹತ್ತು ಮಂದಿ ವಕೀಲರು ಗೃಹ ಸಚಿವಾಲಯಕ್ಕೆ ದೂರು ನೀಡಿ, ಅವರ 'ವರ್ಕ್ ಪರ್ಮಿಟ್' ರದ್ದುಗೊಳಿಸಲು ಮತ್ತು ಭಾರತದಿಂದ ಗಡೀಪಾರು ಮಾಡಲು ಒತ್ತಾಯಿಸಿರುವುದು ಅವರ ಮುಂದಿರುವ ಅತಿ ದೊಡ್ಡ ಕಾನೂನು ಸವಾಲು. ಒಂದು ವೇಳೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಅವರು ಭಾರತದಲ್ಲಿ ನಟಿಸುವುದು ಅಸಾಧ್ಯವಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+