Niveditha Gowda: ನಿವೇದಿತಾ ಗೌಡಗೆ ಈ ಧರ್ಮದವರನ್ನ ಮದುವೆಯಾಗಬೇಕು ಎಂಬ ಆಸೆ ಇತ್ತಂತೆ

ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆಯಾದರು. ಬಿಗ್‌ ಬಾಸ್‌ ಮನೆಯಲ್ಲಿ ಅವರಿಬ್ಬರು ಅಣ್ಣ-ತಂಗಿ ಅನ್ನುತ್ತಿದ್ದವರು. ಆದರೆ, ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಪರಸ್ಪರ ಪ್ರೀತಿ ಮಾಡಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ, ಬಿಗ್ಬಾಸ್ ಜೋಡಿ ಖುಷಿಯಾಗಿ ಜೊತೆಯಾಗಿ ಸಂಸಾರ ಮಾಡ್ತಾರೆ ಇನ್ನೇನು ಗುಡ್ನ್ಯೂಸ್ ಕೊಟ್ಟೇ ಬಿಡ್ತಾರೆ ಎನ್ನುವಷ್ಟರಲ್ಲಿ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿ ಶಾಕ್ ಕೊಟ್ಟರು.

ರ್ಯಾಪರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಅವರಿಗೆ ಮೊದಲಿನಿಂದಲೂ ಅಪಾರ ಅಭಿಮಾನಿಗಳಿದ್ದಾರೆ. ಇನ್ನು ರೀಲ್ಸ್ ಮಾಡೋ ಮೂಲಕ ಫೇಮಸ್ ಆಗಿದ್ದ ನಿವೇದಿತಾ ಗೌಡ ಅವರು ಬಿಗ್ಬಾಸ್ ಮನೆಗೆ ಬಂದ ಮೇಲೆ ಹೆಚ್ಚಿನ ಅಭಿಮಾನಿಗಳನನ್ನು ಗಳಿಸಿದರು. ಅಲ್ಲಿಂದ ಅವರ ಕ್ರೇಜ್ ಹೆಚ್ಚಿತು. ಆದರೆ, ನಿವೇದಿತಾ ಹಾಗೂ ಚಂದನ್‌ ಶೆಟ್ಟಿ ಡಿವೋರ್ಸ್‌ ಬಳಿಕ ನಿವೇದಿತಾ ಗೌಡ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದಾರೆ. ದಿನಕ್ಕೊಂದು ಬೋಲ್ಡ್‌ ಅವತಾರದಲ್ಲಿ ಇನ್ಸ್ಟಾಗ್ರಾಂನಲ್ಲಿ ಸುದ್ದಿಯಾಗ್ತಿರುವ ನಿವೇದಿತಾ ಗೌಡಗೆ ಹೆಚ್ಚೆಚ್ಚು ಬ್ಯಾಡ್‌ ಕಾಮೆಂಟ್‌ಗಳೇ ಹರಿದು ಬರುತ್ತಿವೆ.

Niveditha Gowda Wanted to Marry a Christian Marriage News Love Story

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪ್ರೀತಿಸಿ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಹೊಂದಾಣಿಕೆ ಆಗ್ತಿಲ್ಲ ಎಂಬ ಕಾರಣ ನೀಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಸದ್ಯ ಮೂವ್ ಆನ್‌ ಆಗಿರುವ ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ನಿವೇದಿತಾ ಗೌಡ ಅವರ ಹಳೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ನಾನು ಕ್ರಿಶ್ಚಿಯನ್‌ ಹುಡುಗನನ್ನ ಮದುವೆಯಾಗಬೇಕು ಅಂದ್ಕೊಂಡಿದ್ದೆ ಎಂದು ನಿವೇದಿತಾ ಗೌಡ ಹೇಳಿರುವ ಹಳೇ ವಿಡಿಯೋ ವೈರಲ್‌ ಆಗಿದೆ. ಮೂರು ವರ್ಷದ ಹಿಂದೆ ನಿವೇದಿತಾ ಗೌಡ ಹೇಳಿದ ವಿಡಿಯೋ ಇದಾಗಿದ್ದು, ನಿವೇದಿತಾ ಗೌಡ ತಮ್ಮದೇ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದು, ಅದೇ ಯೂಟ್ಯೂಬ್‌ ಚಾನೆಲ್‌ನಲ್ಲೇ 3 ವರ್ಷಗಳ ಹಿಂದೆ ನಿವೇದಿತಾ ಗೌಡ ಒಂದು ವಿಡಿಯೋ ಮಾಡಿದ್ದರು. 'ಮೈ ಗೌನ್‌ ಕಲೆಕ್ಷನ್‌' ಎಂಬ ವಿಡಿಯೋದಲ್ಲಿ ತಮ್ಮ ಬಳಿ ಇರುವ ತರಹೇವಾರಿ ಗೌನ್‌ಗಳ ಬಗ್ಗೆ ತಮ್ಮ ಸಬ್ಸ್‌ಸ್ಕ್ರೈಬರ್ಸ್‌ಗೆ ನಿವೇದಿತಾ ಗೌಡ ವಿವರಿಸಿದ್ದರು. ಅದೇ ವಿಡಿಯೋದಲ್ಲಿ ತಮ್ಮ ವೆಡ್ಡಿಂಗ್ ಗೌನ್‌ ಬಗ್ಗೆಯೂ ನಿವೇದಿತಾ ಗೌಡ ಮಾತನಾಡಿದ್ದರು.

ನಿವೇದಿತಾ ಗೌಡ ತಮ್ಮು ರಿಸೆಪ್ಷನ್‌ ಗೌನ್‌ ಬಗ್ಗೆ ಮಾತನಾಡುತ್ತಿರುವಾಗಲೇ ''ನನ್ನ ಈ ರಿಸೆಪ್ಷನ್‌ ಗೌನ್‌ನ ನೋಡಿದ್ರೆ, ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ನಾನು ಕ್ರಿಶ್ಚಿಯನ್‌ ಆಗಬೇಕು, ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗಬೇಕು ಅಂತ ನಾನು ಬಾಲ್ಯದಲ್ಲಿ ಆಸೆಪಟ್ಟಿದ್ದೆ. ಯಾಕಂದ್ರೆ, ಕ್ರಿಶ್ಚಿಯನ್‌ನ ಮದುವೆಯಾದರೆ ಮದುವೆಯಲ್ಲಿ ಗೌನ್ ಹಾಕಿಕೊಳ್ಳಬಹುದು ಅಂತ ಅಂದುಕೊಂಡಿದ್ದೆ. ಈಗಲೂ ನನ್ನ ಮದುವೆಯ ರಿಸೆಪ್ಷನ್‌ನಲ್ಲಿ ಗೌನ್ ಧರಿಸಿದ್ದೆ. ಇದು ನನ್ನ ರಿಸೆಪ್ಷನ್‌ ಗೌನ್‌. ಇದನ್ನ ನನ್ನ ರಿಸೆಪ್ಷನ್‌ಗೆ ಬಿಟ್ಟು ನಾನು ಇನ್ನೆಲ್ಲೂ ಹಾಕೊಂಡಿಲ್ಲ. ನಾನು ಇದನ್ನ ಲಿಫ್ಟ್ ಮಾಡೋದಕ್ಕೂ ಸಾಧ್ಯವಿಲ್ಲ. ಅಷ್ಟು ಭಾರ ಇದೆ ಅಂತ ತಮ್ಮ ವಿಡಿಯೋದಲ್ಲಿ ನಿವೇದಿತಾ ಗೌಡ ಹೇಳಿದ್ದು, ಈ ಹಳೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+