Niveditha Gowda: ಬಾತ್‌ರೂಮ್ ಸೆಲ್ಫಿ ವೈರಲ್... ನಿವೇದಿತಾ ಗೌಡ ಹೇಳಿದ್ದೇನು ?!
ನಿವೇದಿತಾ ಗೌಡ ಅವರು ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಫೋಟೋ ಹಾಗೂ ರೀಲ್ಸ್‌ನಿಂದಲೇ ಫೇಮಸ್ ಆಗಿರುವ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಚಂದನ್ ಶೆಟ್ಟಿ ಅವರಿಂದ ದೂರವಾದ ಮೇಲೆ ಅವರು ಇನ್ನಷ್ಟು ಹೊಸ ರೀಲ್ಸ್ ಹಾಗೂ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದೀಗ ಬಾತ್‌ರೂಮ್‌ವೊಂದರಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಟಾದಲ್ಲಿ ಅವರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಫೋಟೋಗೆ ನಿವೇದಿತಾ ಗೌಡ ಅವರು ಕೊಟ್ಟಿರುವ ಕ್ಯಾಪ್ಷನ್ ಏನು ಅಂತ ನೋಡೋಣ.
ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ನಟಿಯರು ಹಾಗೂ ಮಹಿಳಾ ಸೆಲೆಬ್ರಿಟಿಗಳಿಗೆ ಕಿರಿಕಿರಿ ತುಸು ಹೆಚ್ಚೇ ಆಗುತ್ತದೆ. ಕೆಲವರು ನಟಿಯರು ಏನಾದರೂ ಹೇಳಿದರೆ ಇಲ್ಲ ಒಂದು ಫೋಟೋ ಅಪ್‌ಲೋಡ್ ಮಾಡಿದರೂ ಮನಸೋಇಚ್ಛೆ ರಿಯಾಕ್ಟ್ ಮಾಡುತ್ತಾರೆ. ಅದೇ ಅನುಭವ ಇದೀಗ ನಿವೇದಿತಾ ಅವರಿಗೂ ಆಗಿದೆ. ಆದರೆ, ಅವರು ತಣ್ಣಗೆ ರಿಯಾಕ್ಟ್ ಮಾಡಿರುವ ವಿಧಾನಕ್ಕೆ ಜನ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸೂಪರ್ ಅಂತಲೂ ಹೇಳಿದ್ದಾರೆ. ಇಷ್ಟಕ್ಕೂ ನಿವೇದಿತಾ ಗೌಡ ಮಾಡಿರುವ ಪೋಸ್ಟ್ ಯಾವುದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡ್ತಿರೋದು ಯಾಕೆ ಅಂತ ನೋಡೋಣ...

ನಿವೇದಿತಾ ಗೌಡ ಅವರು ಈ ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು. ಈಗಲೂ ಟ್ರೋಲ್ ಆಗುತ್ತಿದ್ದರೆ, ಈ ಹಿಂದೆ ಅವರು ಟ್ರೋಲ್‌ಗೆ ರಿಯಾಕ್ಟ್ ಮಾಡಿದ್ದು ತುಂಬಾನೇ ಕಡಿಮೆ... ಆದರೆ, ಈಗ ಅವರು ರಿಯಾಕ್ಟ್ ಮಾಡೋಕೆ ಶುರು ಮಾಡಿಕೊಂಡಿದ್ದಾರೆ. ಬಾತ್ ರೂಮ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ರೀತಿ ಫೋಟೋ ವೈರಲ್ ಆಗುವಾಗಲೇ ಕೆಲವರು ಅಸಹ್ಯ & ಅಶ್ಲೀಲವಾಗಿ ಕಮೆಂಟ್ ಮಾಡ್ತಾ ಇದ್ದಾರೆ. ಆದರೆ, ನಿವೇದಿತಾ ಮಾತ್ರ ಇದಕ್ಕೆ ಕ್ಯಾರೇ ಎಂದಿಲ್ಲ...
ಬಾತ್‌ರೂಮ್ ಫೋಟೋ ವೈರಲ್: ನಿವೇದಿತಾ ಗೌಡ ಅವರು ಸ್ನೇಹಿತೆಯೊಂದಿಗೆ ಬಾತ್‌ರೂಮ್ ಮಿರರ್‌ನಲ್ಲಿ ತೆಗೆಸಿಕೊಂಡ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದಾರೆ. ಸ್ನೇಹಿತೆ ವಾಣಿ ಅವರ ಜೊತೆ ನಿವೇದಿತಾ ಗೌಡ ಬಾತ್‌ರೂಮ್ ಸೇರಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗೆ ಅವರು ಕೊಟ್ಟಿರುವ ಕ್ಯಾಪ್ಷನ್ ಅಚ್ಚರಿಯಾಗಿದೆ. ಅಲ್ಲದೇ ಟ್ರೋಲ್ ಮಾಡುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಇದೆ.
ನಿವೇದಿತಾ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ ?
"ನಾನು ಮತ್ತು ನನ್ನ ಬಾತ್‌ರೂಮ್ ಸೆಲ್ಫಿ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನೀವು ಕೂಡ ನಿಮ್ಮ ಕೆಲಸ ಮಾಡಿ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಈ ಮೂಲಕ ನನ್ನ ಬದುಕು ನನ್ನದು.. ನಿಮ್ಮ ಬದುಕು ನಿಮ್ಮದು" ಎಂದಿದ್ದಾರೆ. / Me and my bathroom selfies minding our own business.. you should too... 🪞✨ ಇದಕ್ಕೆ ಹಲವು ಅಭಿಮಾನಿಗಳು 🔥🔥🔥🔥 ಕಮೆಂಟ್ ಮಾಡಿದ್ದಾರೆ.












Click it and Unblock the Notifications