Nithya Menen: ಮದುವೆ ಬೇಡ - ಮಗು ಬೇಕು ಅಂದರೂ ಸರಿ; ಮದುವೆ ಆಗಿ ಮಕ್ಕಳಿಲ್ಲದಿದ್ದರೂ ಬದುಕು ಸುಂದರ: ನಟಿ ನಿತ್ಯಾ ಮೆನನ್
Nithya Menen: ನಟಿ ಭಾವನಾ ರಾಮಣ್ಣ ಅವರು ಈಚೆಗೆ ಐವಿಎಫ್ ಮೂಲಕ ಮಗು ಪಡೆದುಕೊಂಡಿದ್ದರು. ಭಾವನಾ ಅವರ ಪ್ರಕರಣದ ವಿಚಾರದಲ್ಲಿ ಮದುವೆಯಾಗದೆ ಮಕ್ಕಳನ್ನು ಪಡೆಯುವ ಬಗ್ಗೆ ತೀವ್ರ ಚರ್ಚೆ ಆಗಿತ್ತು. ಇದೀಗ ದಕ್ಷಿಣ ಭಾರತದ ಸ್ಟಾರ್ ನಟಿ ನಿತ್ಯಾ ಮೆನನ್ ಅವರು ಮದುವೆ ಮಾಡಿಕೊಳ್ಳದೆ ಮಗು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ.. ಇನ್ನು ಮದುವೆ ಆಗಿ ಮಕ್ಕಳು ಇಲ್ದೆ ಇದ್ದರೂ ಚೆಂದ ಅಂತ ಅವರು ಹೇಳಿದ್ದಾರೆ.
ಬೆಂಗಳೂರಿನ ಹುಡುಗಿ ಬಹುಭಾಷಾ ನಟಿ ನಿತ್ಯಾ ಮೆನನ್ ರಿಲೇಷನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಚೆಗೆ ಕನ್ನಡ ನಟಿ ಭಾವನಾ ಮದುವೆಯಾಗದೆಯೇ ಗರ್ಭಿಣಿಯಾಗಿದ್ದರು. ತಾಯಿಯಾಗುವ ನಿರ್ಧಾರವನ್ನು ಬಹಳ ಮುಕ್ತವಾಗಿ ಮಾತನಾಡಿದ್ದರು. ಹಲವರು ಇದಕ್ಕೆ ಬೆಂಬಲ ಕೊಟ್ಟರೆ ಇನ್ನೂ ಕೆಲವರು ಈ ನಿರ್ಧಾರವನ್ನು ವಿಮರ್ಶೆ ಮಾಡಿದ್ದರು. ಇದೀಗ ನಟಿ ನಿತ್ಯಾ ಮೆನನ್ ಅವರು ಸಹ ಈ ರೀತಿಯ ನಿರ್ಧಾರದಲ್ಲಿ ತಪ್ಪೇನಿಲ್ಲ. ಅದು ಅವರವರ ಆಯ್ಕೆ ಅಷ್ಟೇ ಅಂತ ಹೇಳಿದ್ದಾರೆ.

ಮದುವೆ ಆಗದೆ ಮಗು ನಟಿ ನಿತ್ಯಾ ಮೆನನ್ ಹೇಳಿದ್ದೇನು
ಮದುವೆ ಆಗದೆ ಮಗು ಪಡೆದುಕೊಳ್ಳುವ ಬಗ್ಗೆ ನಿತ್ಯಾ ಮೆನನ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಮದುವೆ ಮಾಡಿಕೊಳ್ಳದೆ ಮಗುವಿಗೆ ಜನ್ಮ ನೀಡುವ ಅಲಿಖಿತ ನಿಯಮವನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ವಿಚಾರಗಳ ಬಗ್ಗೆ ನಿತ್ಯಾ ಮೆನನ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಐವಿಎಫ್ ಮಾದರಿಯಲ್ಲಿ ಹೆಣ್ಣೊಬ್ಬಳು ಮಗು ಪಡೆದುಕೊಳ್ಳುವ ಮಾದರಿಯ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಕಾದಲಿಕ್ಕಾ ನೆರಮಿಲ್ಲೆ ಎನ್ನುವ ತಮಿಳು ಸಿನಿಮಾದಲ್ಲಿ ಇದೇ ಪ್ರಧಾನವಾಗಿತ್ತು. ಈ ಸಿನಿಮಾದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಸಮಯದಲ್ಲಿ IndiaGlitz Tamil ಯೂಟ್ಯೂಬ್ ಚಾನಲ್‌ಗೆ ನಿತ್ಯ ಸಂದರ್ಶನ ಕೊಟ್ಟಿದ್ದರು. ಅದರ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಸಂದರ್ಶನದಲ್ಲಿ ಸಂದರ್ಶಕರು ರ್ಯಾಪಿಡ್ ಫೈಯರ್ ಪ್ರಶ್ನೆಗಳು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ನಿತ್ಯಾ ಮೆನನ್ ಅವರು, ಮದುವೆಗಿಂತ ಮುಂಚೆ ಗರ್ಭಿಣಿ ಆಗುವುದು ಸರೀನಾ, ತಪ್ಪಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಮದುವೆಗೂ ಮುಂಚೆ - ನಂತರ ಎನ್ನುವುದಕ್ಕಿಂತ ಮದುವೆ ಇಲ್ಲದೆಯೇ ಗರ್ಭಿಣಿ ಆಗುವುದರಲ್ಲಿ ತಪ್ಪೇನಿಲ್ಲ. ಮದುವೆಯೇ ಆಗದೆ ಗರ್ಭಿಣಿ ಆಗುವುದು ಪರವಾಗಿಲ್ಲ. ನಿಮಗೆ ಮಕ್ಕಳು ಬೇಕು, ಮದುವೆ ಬೇಡ ಎಂದಾದರೆ ಅದರಲ್ಲಿ ತಪ್ಪೇನಿದೆ. ಈಗ ಮಕ್ಕಳು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಾಕಷ್ಟು ಜನ ಅದನ್ನು ಅನುಸರಿಸುತ್ತಿದ್ದಾರೆ ಎಂದು ನಿತ್ಯಾ ಮೆನನ್ ಅವರು ಅಭಿಪ್ರಾಯಪಟ್ಟಿದ್ದರು.
ಮದುವೆ ರಿಲೇಷನ್‌ಶಿಪ್ ಅಥವಾ ಮಕ್ಕಳು ಇಲ್ಲದ ರಿಲೇಷನ್‌ಶಿಪ್ ಯಾವುದು ನಿಮಗೆ ಸೂಕ್ತ ಎನ್ನುವ ಪ್ರಶ್ನೆಗೆ ಮದುವೆ ರಿಲೇಷನ್‌ಶಿಪ್ ಮತ್ತು ಮಕ್ಕಳು ಇಲ್ಲದ ಜೀವನ ನನ್ನ ಆಯ್ಕೆ ಅಂತಲೂ ನಟಿ ನಿತ್ಯಾ ಮೆನನ್ ಅವರು ಉತ್ತರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
Nithya Menon: Getting pregnant without marriage is okay .... it’s an individual choice 😕
— InTheLoop (@jinx_5182) April 25, 2026
But we are already seeing male growth drastically declining. If this continues, we men might end up like zombies 😭pic.twitter.com/34h05t9TJ5












Click it and Unblock the Notifications