‘ಕನಸೊಂದು ಶುರುವಾಗಿದೆ’ ಅಂತಿದೆ ಈ ಹೊಸ ಜೋಡಿ!

ಕನ್ನಡ ಸಿನಿಮಾ ರಂಗದಲ್ಲಿ ಹೊಸಬರು ಬರ್ತಾರೆ, ಹೋಗ್ತಾರೆ. ಆದರೆ ಕೆಲವರು ಮಾತ್ರ, ಸಿನಿಮಾ ಇಂಡಸ್ಟ್ರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತಾರೆ. ಅದೇ ರೀತಿ ಇದೀಗ ಮತ್ತೊಂದು ಹೊಸ ಜೋಡಿ ಕನ್ನಡ ಸಿನಿಮಾ ರಂಗದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಸಿನಿಮಾಗೆ 'ಕನಸೊಂದು ಶುರುವಾಗಿದೆ' ಎಂಬ ಟೈಟಲ್ ಇಟ್ಟು ಗಮನ ಸೆಳೆಯುತ್ತಿದೆ. ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್‌ರ ಪತ್ನಿ, ಅಶ್ವಿನಿ ಪುನೀತ್ ಅವರು ಶುಭ ಹಾರೈಸಿದ್ದಾರೆ.

ಅಂದಹಾಗೆ 'ಸಹರ' ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಸ್ಯಾಂಡಲ್‌ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಮಂಜೇಶ್ ಭಾಗವತ್ ಹೊಸ ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್ ಮುಗಿಸಿದ ಅವರು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಂಜೇಶ್ 2ನೇ ಹೆಜ್ಜೆಗೆ ಕನಸೊಂದು ಶುರುವಾಗಿದೆ ಎಂಬ ಟೈಟಲ್ ಇಡಲಾಗಿದ್ದು. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ಅವರು ಇದೀಗ ಹೊಸಬರ ಕನಸಿಗೆ ಬೆಂಬಲ ನೀಡಿದ್ದಾರೆ. ಕನಸೊಂದು ಶುರುವಾಗಿದೆ ಶೀರ್ಷಿಕೆ ರಿಲೀಸ್ ಮಾಡಿ, ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ.

Newcomers Movie Is Attracting By The Special Title In Sandalwood

ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?

ಇನ್ನ ಕನಸೊಂದು ಶುರುವಾಗಿದೆ ಚಿತ್ರದ ಮೂಲಕ ಸಂತೋಷ್ ಬಿಲ್ವಾ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಅವರಿಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಕನಸೊಂದು ಶುರುವಾಗಿದೆ ಚಿತ್ರವನ್ನು ಬೆಂಗಳೂರು, ಕುಂದಾಪುರ & ಕುಣಿಗಲ್ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗುತ್ತಿವೆ. ಶೀಘ್ರದಲ್ಲೇ ರಿಲೀಸ್ ಆಗಲು ಸಜ್ಜಾಗುತ್ತಿದೆ.

ಸಿನಿಮಾದ ತಾಂತ್ರಿಕ ವರ್ಗ ಹೇಗಿದೆ?

KKR ಮೀಡಿಯಾ ಬ್ಯಾನರ್ ನಡಿ ಲಕ್ಷ್ಮೀ ಕಾಂತ್ ರೆಡ್ಡಿ 'ಕನಸೊಂದು ಶುರುವಾಗಿದೆ' ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಲೋಕೇಂದ್ರ ಸೂರ್ಯ ಕ್ಯಾಮೆರಾ ವರ್ಕ್ ಸಿನಿಮಾಗೆ ಇದ್ದರೆ, ಈ ವೇಳೆ ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿಎಸ್ ಗೌಡ ಸಂಕಲನ ಚಿತ್ರಕ್ಕಿದೆ. ಶಶಾಂಕ್, ಸಿಂಪಲ್ ಸುನಿ & ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Newcomers Movie Is Attracting By The Special Title In Sandalwood

ಒಟ್ನಲ್ಲಿ ಹೊಸಬರ ಸಿನಿಮಾ 'ಕನಸೊಂದು ಶುರುವಾಗಿದೆ' ಟೈಟಲ್ ಮೂಲಕವೇ ಮೋಡಿ ಮಾಡುತ್ತಿದ್ದು, ಸಿನಿಮಾ ಇನ್ನೇನು ಬೆಳ್ಳಿತೆರೆಗೆ ಎಂಟ್ರಿ ಕೊಡಲಿದೆ. ಹೀಗಾಗಿ ಬೆಳ್ಳಿತೆರೆ ಮೇಲೆ ಕೂಡ ಇದೇ ರೀತಿ ಅಬ್ಬರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+