Kamal Haasan:'ತಮಿಳಿನಿಂದ ಕನ್ನಡ ಹುಟ್ಟಿತು': ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ರು ಶಿವಣ್ಣ ಸುಮ್ಮನಿರೋದ್ಯಾಕೆ.?
ಬೆಂಗಳೂರು, ಮೇ 28: ಕಮಲ್ ಹಾಸನ್ ಯಾಕೋ ಇತ್ತೀಚೆಗೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ಒಬ್ಬ ಪ್ರಬುದ್ಧ ನಟ ಎಂದೇ ಗುರುತಿಸಿಕೊಂಡಿದ್ದಾರೆ. ಪ್ರಬುದ್ಧ ಪಾತ್ರಗಳಲ್ಲಿ ನಟಿಸುವುದಿರಲಿ ಅಥವಾ ಕೇಲವು ಗಂಭೀರ ವಿಷಯಗಳಿಗೆ ಪ್ರತಿಕ್ರಿಯೆ ನೀಡುವುದಿರಲಿ, ಕಮಲ್ ಹಾಸನ್ ಉತ್ತರ ಅವರಷ್ಟೇ ಪ್ರಬುದ್ಧವಾಗಿ ಇರುತ್ತಿತ್ತು. ಆದರೆ, ಇದೀಗ ಕಮಲ್ ಹಾಸನ್ ಕೊಡುತ್ತಿರುವ ಹೇಳಿಕೆಗಳು ಭಾರೀ ವಿವಾದವನ್ನು ಸೃಷ್ಟಿಸುತ್ತಿವೆ.
'ಥಗ್ ಲೈಫ್' ಸಿನಿಮಾ ಸಿನಿಮಾದ ಪ್ರಚಾರ ಆರಂಭಿಸಿದ ದಿನದಿಂದಲೂ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೀಗ ನಟ ಕಮಲ್ ಹಾಸನ್ ಅವರು ತಮ್ಮ ಮಾತೃಭಾಷೆಯನ್ನು ವೈಭವೀಕರಿಸುವ ಪ್ರಯತ್ನದಲ್ಲಿ ಕನ್ನಡಕ್ಕೆ ಅಗೌರವ ತೋರಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ಕೇಳಿ ಬರುತ್ತಿದೆ.

ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವುದಕ್ಕೂ ಮುನ್ನ ಹಿಂದಿ ಭಾಷಿಗರನ್ನು ಕೆಣಕಿದ್ದರು. ಹಿಂದಿ ಕಲಿಯುವುದಕ್ಕೂ ಮುನ್ನ ಪಕ್ಕದ ರಾಜ್ಯದ ಭಾಷೆಗಳನ್ನು ಕಲಿಯಿರಿ ಎಂದಿದ್ದರು. ಇದರ ಬೆನ್ನಲ್ಲೇ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದು, ಇದು ಕನ್ನಡಿಗರ ನಿದ್ದೆ ಕೆಡಿಸಿದೆ. ಅಲ್ಲದೇ ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ಶುರುವಾಗಿದ್ದು, ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Get Well Soon Dummy Hassan ತಮಿಳ್ ಇಂದ ಕನ್ನಡ ಹುಟ್ಟಿಲ್ಲ ರಿ ಅಯೋಗ್ಯ ಕನ್ನಡಕ್ಕೆ ತನ್ನದೇ ಆದ ಸ್ವಂತ ಲಿಪಿ ಇದೆ ಸಾವಿರಾರು ವರ್ಷಗಳ ಇತಿಹಾಸ ಇದೆ ನಾಲಾಯಕ ತಿಳ್ಕೊಳದಕ್ಕೆ ಆಗದೆ ಏನೇನೋ ಮಾತಾಡಬೇಡ @ikamalhaasan.@NimmaShivanna ನೀವು ಅದನ್ನು ಕೇಳಿ ಸುಮ್ಮನೆ ಇರ್ಬಾರ್ದಿತ್ತು. #ಕನ್ನಡ#KamalHaasan
— ಭೀಮು ಕೊಪ್ಪದ (@Bheemu_Koppad) May 27, 2025
ಇನ್ನೂ ಟ್ವೀಟರ್ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, "ಕಮಲ್ ಹಾಸನ್ ತಮ್ಮ ಖ್ಯಾತಿಯನ್ನು ಕನ್ನಡದ ನೆಲದಲ್ಲಿ ಹಾಳು ಮಾಡಿಕೊಂಡಿದ್ದಾರೆ. ಕನ್ನಡ ವಿಶ್ವಲಿಪಿಗಳ ರಾಣಿ, ಕನ್ನಡ ಯಾರಿಗೂ ಮಗಳಲ್ಲ ಅದು ಎಲ್ಲರಿಗೂ ತಾಯಿ ಅಷ್ಟೇ ಎಂದು ಕಮಲ್ ಹಾಸನ್ ಗೆ ತಿರುಗೇಟು ಕೊಟ್ಟಿದ್ದಾರೆ. ಈ ಅತಿಯಾದ ಗೌರವ ಕೊಟ್ಟು ತಲೆ ಮೇಲೆ ಕೂರಿಸಿಕೊಂಡಿರುವುದರಿಂದ ನಮ್ಮ ರಾಜ್ಯದಲ್ಲಿ ನಮ್ಮ ಸಿನಿಮಾಗಳಿಗೆ ಸಮಸ್ಯೆ ಆಗ್ತಿರೋದು. ಆದರೆ, ಈ ಸಿನಿಮಾ ಕರ್ನಾಟಕದಲ್ಲಿ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಹಿಂಗೇ ಹೋದ್ರೆ ಮುಂದೆ ಇಂಡಸ್ಟ್ರಿ ಗೋವಿಂದ" ಎಂದು ಮತ್ತೊಬ್ಬರು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ತಮಿಳರು ಜನರು ದೇವರು ಭೂಮಿಗೆ ಬರುವುದಕ್ಕಿಂತಲೂ ಮೊದಲು ತಮಿಳು ಭಾಷೆ ಹುಟ್ಟಿತ್ತು ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಕಮಲ್ ಹಾಸನ್‌ನಂತಹ ಹುಚ್ಚ ಅವರಿಗೆ ಏನು ಖುಷಿ ಕೊಡುತ್ತೋ ಹಾಗೆ ಮಾತಾಡುತ್ತಲೇ ಇರುತ್ತಾರೆ. ಶಿವಣ್ಣ ಯಾಕೆ ಈ ಬಗ್ಗೆ ಸೈಲೆಂಟ್ ಆಗಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಮಲ್ ಹಾಸನ್ ಕೊಟ್ಟ ಹೇಳಿಕೆಯನ್ನು ಖಂಡಿಸಿದ್ದಾರೆ. Get Well Soon Dummy Hassan ತಮಿಳ್ ಇಂದ ಕನ್ನಡ ಹುಟ್ಟಿಲ್ಲರಿ ಅಯೋಗ್ಯ. ಕನ್ನಡಕ್ಕೆ ತನ್ನದೇ ಆದ ಸ್ವಂತ ಲಿಪಿ ಇದೆ. ಸಾವಿರಾರು ವರ್ಷಗಳ ಇತಿಹಾಸ ಇದೆ. ನಾಲಾಯಕ್ ತಿಳಿದುಕೊಳ್ಳದೆ ಏನೇನೋ ಮಾತಾಡಬೇಡ. ಶಿವಣ್ಣ ನೀನು ಅದನ್ನು ಕೇಳಿ ಸುಮ್ಮನೆ ಇರಬಾರದಿತ್ತು ಎಂದು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಶಿವಣ್ಣನ ಮೇಲೂ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications