Rashmika Mandanna: ಆತನೇ ನನ್ನ ಕನಸಿನ ಸಂಗಾತಿ, ಇಂದಿಗೂ ಆತನ ಮೇಲೆ ನನಗೆ...: ರಶ್ಮಿಕಾ ಮಂದಣ್ಣ ಮನದ ಮಾತು!
ಕನ್ನಡದ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಮೂಲಕ ಭರ್ಜರಿ ಗೆಲುವು ಕಂಡ ರಶ್ಮಿಕಾ ಮಂದಣ್ಣ ಅವರು ಬಹುಭಾಷೆಯಲ್ಲಿ ಸರಣಿ ಸಿನಿಮಾಗಳನ್ನ ನೀಡುತ್ತಾ ಬಂದಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ನಟಿ. ರಕ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದುಕೊಂಡೇ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಈ ನಿಶ್ಚಿತಾರ್ಥ ಮುರಿದು ಬಿತ್ತು.
ಕನ್ನಡದ ಕಿರಿಕ್ ಪಾರ್ಟ್ ಸಿನಿಮಾದ ಮೂಲಕ ಹುಟ್ಟಿಕೊಂಡ ಗೆಳೆತನ ಹಾಗೂ ಪ್ರೀತಿ ಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಡುವೆ ತುಂಬಾ ದಿನ ಉಳಿಯಲಿಲ್ಲ. ಇಬ್ಬರು ಪರಸ್ಪರ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡು. ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರು ಬೇರೆ ಚಿತ್ರರಂಗಕ್ಕೆ ಹಾರಿದ್ದರು. ನಟಿ ರಶ್ಮಿಕಾ ಮಂದಣ್ಣ ಕೆಲವು ವರ್ಷಗಳಿಂದ ವಿಜಯ ದೇವರಕೊಂಡ ಜೊತೆಗೆ ಬಹಳ ಆತ್ಮೀಯರಾಗಿ ಕಾಣಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹೀಗಿದ್ದರೂ ಇವರಿಬ್ಬರೂ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಇದೀಗ ರಶ್ಮಿಕಾ ಮಂದಣ್ಣ ಅವರ ಕನಸಿನ ಸಂಗಾತಿ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನನಗೆ ಬಾಲ್ಯದಿಂದಲೂ ದಳಪತಿ ವಿಜಯ್ ಮೇಲೆ ಕ್ರಶ್ ಇತ್ತು ಎಂದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಈ ಹಿಂದೆ 2020 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ಭೀಷ್ಮ ಪ್ರಚಾರದ ಸಂದರ್ಭದಲ್ಲಿ ನಟಿ ರಶ್ಮಿಕಾ ಹೇಳಿರುವ ಮಾತು ಇದು. ಇದೀಗ ಮತ್ತೊಮ್ಮೆ ಮುನ್ನಲೇಗೆ ಬಂದಿದೆ.
ಭೀಷ್ಮ ಸಿನಿಮಾದ ಪ್ರಚಾರದ ವೇಳೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸ್ನೇಹಿತೆ, ಪ್ರೇಮಿ ಮತ್ತು ಪತಿಯಾಗಿ ಯಾರನ್ನ ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಲಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಸಿದ ನಟಿ ರಶ್ಮಿಕಾ ಮಂದಣ್ಣ ಅವರು, ಭೀಷ್ಮ ಚಿತ್ರದ ನಾಯಕ ನಿತಿನ್ ಅವರನ್ನು ತನ್ನ ಸ್ನೇಹಿತನನ್ನಾಗಿ ಆಯ್ಕೆ ಮಾಡುತ್ತಾರೆ. ಅಲ್ಲದೇ ದಳಪತಿ ವಿಜಯ್ ಅವರನ್ನು ತಮ್ಮ ಪ್ರೇಮಿಯನ್ನಾಗಿ ಆಯ್ಕೆ ಮಾಡಿದ್ದಾರೆ ರಶ್ಮಿಕಾ ಮಂದಣ್ಣ.
ಇನ್ನೂ ಬಾಲ್ಯದಿಂದಲೂ ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ಅವರನ್ನು ಪ್ರೀತಿಸುತ್ತಿದ್ದರಂತೆ ಮತ್ತು. ಇನ್ನೂ ಅವರನ್ನು ತಮ್ಮ ಕನಸಿನ ಸಂಗಾತಿ ಎಂದು ನಟಿ ರಶ್ಮಿಕಾ ಮಂದಣ್ಣ ಪರಿಗಣಿಸಿದ್ದರಂತೆ. 2023ರಲ್ಲಿ ಬಿಡುಗಡೆಯಾದ ವಾರಿಸು ಸಿನಿಮಾದಲ್ಲಿ ವಿಜಯ್ ಜೊತೆಗೆ ನಾಯಕಿಯಾಗಿ ನಟಿ ರಶ್ಮಿಕಾ ಅವರು ನಟಿಸಿದ್ದರು. ಈ ವೇಳೆ ದೀರ್ಘಕಾಲದ ಕನಸು ನನಸಾಯಿತು ಎಂದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿಕೊಂಡಿದ್ದರು.












Click it and Unblock the Notifications