ಅದು ಟಾಟಾ ಚೆರಿಯೋ, ನೀವು ಅನ್ಕೊಂಡಿದ್ದಲ್ಲ: ರಾಜಾ ರಾಜಾ ಹಾಡಿನ ಲಿರಿಕ್ ಬಗ್ಗೆ ವಿ.ಮನೋಹರ್ ಕ್ಲಾರಿಟಿ
ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ಎವರ್‌ಗ್ರೀನ್ ಸಿನಿಮಾಗಳಲ್ಲಿ "ಪ್ರೀತ್ಸೋದ್ ತಪ್ಪಾ?" ಕೂಡ ಒಂದು. 1998ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಜೋಡಿ ಮೋಡಿ ಮಾಡಿತ್ತು. ಇನ್ನು ಈ ಸಿನಿಮಾ ಹಾಡುಗಳು ಇಂದಿಗೂ ಜನರ ಬಾಯಲ್ಲಿದೆ. ಈ ಸಿನಿಮಾದ ರಾಜಾ ರಾಜಾ ಹಾಡಿಗೆ ಇಂದಿಗೂ ಜನ ರೀಲ್ಸ್ ಮಾಡಿ, ಹುಚ್ಚೆದ್ದು ಕುಣಿಯುತ್ತಾರೆ. ಸಿನಿಮಾ ಹಳೆಯದಾದ್ರೂ ಇದರ ಹಾಡುಗಳಿಗೆ ಇರುವ ಕ್ರೇಜ್ ಬೇರೆ. ಆದರೆ ಇದೇ ಹಾಡಿನ ಸಾಲುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಿದ್ದೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಲುಗಳನ್ನು ಕಟ್ ಮಾಡಿ ಬೇರೆ ಬೇರೆ ಅರ್ಥ ಕಲ್ಪಿಸಲಾಗಿತ್ತು. ಆದರೆ ಹಾಡಿನ ನಿಜವಾದ ಸಾಲುಗಳೇನು ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಅವರೇ ಸ್ಪಷ್ಟಪಡಿಸಿದ್ದಾರೆ.
ಪ್ರೀತ್ಸೋದ್ ತಪ್ಪಾ ಈ ಸಿನಿಮಾದ ಎಲ್ಲಾ ಹಾಡುಗಳನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರೇ ಬರೆದು ಸಂಗೀತ ಸಂಯೋಜಿಸಿದ್ದರು. ರಾಜಾ ರಾಜಾ...ಹೆಂಗಿರಬೇಕು ಗೊತ್ತಾ ನನ್ನ ರಾಜಾ ಹಾಡು ಅಂದ್ರೆ ಇಂದಿನ ಯುವತಿಯರಿಗೂ ಫೆವರೇಟ್ ಆಗಿದೆ. ನಾ ಮೆಚ್ಚೋ ಹುಡುಗ ರಾಜರ ರಾಜ ಎಂದು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಇದೇ ಹಾಡಿನ ಒಂದು ಸಾಲನ್ನು ಕೆಲವರು ಅಶ್ಲೀಲವಾಗಿ ಬಳಸುತ್ತಿದ್ದಾರೆ. ಇದನ್ನು ಕೆಲ ಟ್ರೋಲ್ ಪೇಜ್‌ಗಳಲ್ಲೂ ಹಾಕಿ ವಿಕೃತಿ ಮೆರೆಯುತ್ತಿದ್ದಾರೆ. ಆದರೆ ಜನ ಟ್ರೋಲ್ ಮಾಡುತ್ತಿರುವಂತೆ ಆ ಲಿರಿಕ್ ಇಲ್ಲ ಎಂದು ವಿ.ಮನೋಹರ್ ಸ್ಪಷ್ಟಪಡಿಸಿದ್ದಾರೆ.

ಶ್ರೀಗಂಧ ಟಿವಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮನೋಹರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ʼಪ್ರೀತ್ಸೋದ್ ತಪ್ಪಾ ಸಿನಿಮಾದ ರಾಜಾ ರಾಜಾ ಹಾಡಿನಲ್ಲಿ "ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ" ಎಂದು ಸಾಲುಗಳಿವೆ. ಟಾಟಾ ಚೆರಿಯೋ ಅಂದ್ರೆ ವಿದಾಯ ಎಂದರ್ಥ. ಆದರೆ ಈ ಸಾಲುಗಳನ್ನ ಕೆಲವರು "*** ತೆರಿಯೋ" ಎಂಬರ್ಥ ಕಲ್ಪಿಸಿಕೊಂಡು ಅಶ್ಲೀಲವಾಗಿ ಬಳಸುತ್ತಿದ್ದಾರೆ. ಟಾಟಾ ಪದಕ್ಕೆ ಬದಲು ಅಶ್ಲೀಲ ಪದ ಕಲ್ಪಿಸಿಕೊಂಡಿದ್ದಾರೆ. ಈ ವಿಚಾರವಾಗಿ ನಾನು ಜಗಳ ಕೂಡ ಆಡಿದ್ದೆʼ ಎಂದಿದ್ದಾರೆ.
'ಟಾಟಾ ಚೆರಿಯೋ ಅನ್ನೋದು ಬ್ರಿಟಿಷರ ಕೊಡುಗೆ. ಬ್ರಿಟಿಷರು ಅದನ್ನು ಆ ಪದ ಬಳಸುತ್ತಿದ್ದರು. ಮೊದಲಿಗೆ ಟಾಟಾ ಚೆರಿಯೋ ಎನ್ನುತ್ತಿದ್ದವರು, ದಿನ ಕಳೆದಂತೆ ಟಾಟಾ ಬೈಬೈ ಅನ್ನಲು ಶುರು ಮಾಡಿದ್ರು. ಆ ಮೇಲೆ ಬೈ ಬೈ, ಈಗ ಬರೀ ಬೈ ಎನ್ನುತ್ತಿದ್ದೀವಿ. ಕಾಲಕ್ರಮೇಣ ಈ ಪದ ಬದಲಾಗುತ್ತಾ ಬಂತು. ಆ ಸಿನಿಮಾ ಸಮಯದಲ್ಲಿ ಹಂಸಲೇಖ ಗುರುಗಳು ಆ ಪದವನ್ನು ಹಾಡಿನಲ್ಲಿ ಬಳಸಿದ್ರು. ಆದರೆ ಕೆಲವರು ಅದನ್ನೇ ಅಶ್ಲೀಲ ಅರ್ಥಕ್ಕೆ ಬದಲಿಸಿಕೊಂಡು ಹೇಳುತ್ತಿದ್ದರು. ಕೆಟ್ಟದಾಗಿ ಪ್ರಚಾರ ಮಾಡಲು ಯತ್ನಿಸಿದ್ದರು, ಆ ವಿಚಾರ ಬರ್ತಾ ಬರ್ತಾ ತಣ್ಣಗಾಯ್ತು' ಎಂದು ಮನೋಹರ್ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications