Kannada Cinema: ಹಾಕಿದ್ದು 75 ಲಕ್ಷ ರೂಪಾಯಿ, ಕನ್ನಡ ಇಂಡಸ್ಟ್ರಿಯಲ್ಲೇ ಇತಿಹಾಸ ನಿರ್ಮಿಸಿದ್ದ ಸಿನಿಮಾ ಇದು!

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸುಲಭವಾಗಿ 10 ಕೋಟಿ ರೂಪಾಯಿ, 100 ಕೋಟಿ ರೂಪಾಯಿ, 1,000 ಕೋಟಿ ರೂಪಾಯಿ ಹಣ ಗಳಿಸುವ ಸಿನಿಮಾಗಳು ಸಿಗುತ್ತವೆ. ಆದರೆ 20 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಕನ್ನಡ ಸಿನಿಮಾಗಳು ಹಾಕಿದ ಬಂಡವಾಗಳ ವಾಪಸ್ ಪಡೆಯುವುದೇ ಹರಸಾಹಸ ಎಂಬ ರೀತಿ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅದರಲ್ಲೂ ಒಂದು ಹಂತದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೇನು ಸಂಪೂರ್ಣ ಒದ್ದಾಡುವ ಹಂತಕ್ಕೆ ಬಂದು ನಿಂತಿತ್ತು. ಇಂತಹ ಸಮಯದಲ್ಲೇ ನೋಡಿ ಅದೊಂದು ಸಿನಿಮಾ ಇಡೀ ಇಂಡಸ್ಟ್ರಿಗೆ ಹೊಸ ಉತ್ಸಾಹ & ಹುಮ್ಮಸ್ಸು ನೀಡಿದ್ದು!

ಮುಂಗಾರು ಮಳೆ ಅನ್ನೋ ಸಿನಿಮಾ 2006 ಅಂತ್ಯದಲ್ಲಿ ರಿಲೀಸ್ ಆಗಿ ದೊಡ್ಡ ಸಾಧನೆ ಮಾಡಿಬಿಟ್ಟಿತ್ತು. ಹೌದು ಕನ್ನಡ ಸಿನಿಮಾ ರಂಗದಲ್ಲಿ 'ಮುಂಗಾರು ಮಳೆ' ಸಾಧನೆ ಯಾರು ಎಂದೆಂದಿಗೂ ಮರೆಯಲು ಆಗಲ್ಲ. ಅದರಲ್ಲೂ 90s & 80s ಕಿಡ್‌ಗಳ ಪಾಲಿಗೆ ಈ ಸಿನಿಮಾ ಎವರ್‌ಗ್ರೀನ್ ಅನ್ನಬಹುದು. ಒಂದೆರಡು ತಲೆಮಾರು ಈ ಸಿನಿಮಾಗೆ ಮಾರು ಹೋಗಿದ್ದ ದಿನಗಳು ಆಗಿನ ಕಾಲಘಟ್ಟದಲ್ಲಿ ಇದ್ದವು. ಅದರಲ್ಲೂ 'ಮುಂಗಾರು ಮಳೆ' ಸಿನಿಮಾದ ಹಾಡುಗಳು ಇಲ್ಲದೆ ಮದುವೆ, ಗೃಹಪ್ರವೇಶ ಸೇರಿದಂತೆ ಹಬ್ಬ & ಹರಿದಿನಗಳೇ ನಡೆಯುತ್ತಿರಲಿಲ್ಲ ಎಂಬ ಮಾತು ಕೂಡ ಇತ್ತು. ಹಾಗಾದ್ರೆ ಈ ಸಿನಿಮಾ ಗಳಿಸಿದ್ದ ಲಾಭ ಎಷ್ಟು? ಮುಂದೆ ಓದಿ.

Mungaru Male Movie Did Biggest Profit In The Kannada Cinema Industry History

75,00,000 ರೂಪಾಯಿ ಬಂಡವಾಳ!

2006ರ ಡಿಸೆಂಬರ್ ತಿಂಗಳಲ್ಲಿ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ತಿರುವು ಸಿಕ್ಕೇಬಿಟ್ಟಿತ್ತು. ಸಾಲು ಸಾಲಾಗಿ ಸೋತು ಹೋದ ಸಿನಿಮಾಗಳು ಬಂದು ಕನ್ನಡ ಸಿನಿಮಾ ಪ್ರೇಕ್ಷಕರನ್ನು ಕೂಡ ಬೇಸರಕ್ಕೆ ತಳ್ಳಿತ್ತು ಅಂದಿನ ವಾತಾವರಣ. ಆಗ ಒಂದೇ ಒಂದು ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿತ್ತು. ಅಷ್ಟಕ್ಕೂ ಹೊಸಬರ ಸಿನಿಮಾ, ಜಗತ್ತಿನಾದ್ಯಂತ ಕನ್ನಡ ಬಾವುಟ ಹಾರಿಸುವಂತೆ ಮಾಡಿದ್ದೇ ಈ ಮುಂಗಾರು ಮಳೆ ಸಿನಿಮಾದ ಸಾಧನೆ. ಈ ಸಿನಿಮಾಗೆ ಕೇವಲ 75,00,000 ರೂಪಾಯಿ ಅಂದರೆ 75 ಲಕ್ಷ ರೂಪಾಯಿ ಬಂಡವಾಳ ಹಾಕಲಾಗಿತ್ತು. ಹಾಗಾದ್ರೆ ಈ ಸಿನಿಮಾ ಬಾಕ್ಸ್ ಆಫಿಸ್ ಅಖಾಡದಲ್ಲಿ ಗಳಿಸಿದ ಹಣವು ಎಷ್ಟು ಕೋಟಿ ರೂಪಾಯಿ? ಮುಂದೆ ಓದಿ.

ಕನ್ನಡಿಗರ ಎದೆಯಲ್ಲಿ ಮುಂಗಾರು ಮಳೆ!

ಮುಂಗಾರು ಮಳೆ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ದೂದ್ ಪೇಡ ದಿಗಂತ್ ಹತ್ತಿರ ಆಗಿಬಿಟ್ಟರು. ಮುಂಗಾರು ಮಳೆ ಸಿನಿಮಾದಲ್ಲಿ ಭರ್ಜರಿ 7 ಹಾಡು ಇದ್ದವು, ಹಾಗೇ ಅದ್ಧೂರಿಯಾಗಿ ಕ್ಯಾಮೆರಾ ವರ್ಕ್ ಮೂಡಿಬಂದಿತ್ತು. ಪ್ರತಿಯೊಂದು ಹಂತದಲ್ಲೂ ಗೆದ್ದು ಬೀಗಿದ್ದ ಈ ಸಿನಿಮಾ ಇಂದಿಗೆ ಇತಿಹಾಸ ನಿರ್ಮಿಸಿದೆ. ಇನ್ನು ಕೇವಲ 75,00,000 ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಕೊನೆಗೆ ಬರೋಬ್ಬರಿ 75 ಕೋಟಿ ರೂಪಾಯಿ ಹಣ ಗಳಿಸುವ ಮೂಲಕ ಕನ್ನಡಿಗರ ಎದೆಯಲ್ಲೂ ಅಚ್ಚಳಿಯದೇ ಉಳಿದುಬಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+