ಡಿಬಾಸ್ ಸಾವಿನ ಆಡಿಯೋ ಕೇಳಿದ್ರೆ ರಕ್ತ ಕುದಿಯುತ್ತೆ, ನಾನೂ ಅವರ ಅಭಿಮಾನಿ: ನಟಿ ಮೌನ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ಮಡೆನೂರು ಮನು ಸದ್ಯ ತಮ್ಮ ಮೊದಲ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಆರಂಭದಲ್ಲೇ ಶಕುನ ಸರಿ ಇಲ್ಲ ಎನ್ನುವಂತೆ ಸಿನಿಮಾ ರಿಲೀಸ್‌ಗೂ ಮುನ್ನವೇ ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ನಟರಾದ ದರ್ಶನ್, ಶಿವಣ್ಣ ಅವರ ಸಾವಿನ ಬಗ್ಗೆ ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ. ಈ ಬಗ್ಗೆ ಮನು ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮೌನ ಗುಡ್ಡೇಮನೆ ಕೂಡ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್ ಆಗುವ ಹಿಂದಿನ ದಿನ ತುಂಬಾ ಪ್ರೆಷರ್ ಆಯ್ತು, ಮನು ಅವರ ವಿಚಾರ ಹೊರಬಂದ ನಂತರ ಎಲ್ಲೆಲ್ಲಿಂದಲೋ ನನಗೆ ಫೋನ್ ಬಂತು. ಒಂದಂತೂ ಸ್ಪಷ್ಟ, ಆ ಸಿನಿಮಾದಲ್ಲಿ ಮನು ಮಾತ್ರ ನಟಿಸಿಲ್ಲ. ನಾನು ಕೂಡ ಆ ಸಿನಿಮಾದಲ್ಲಿ ನಟಿ, ಮನು ವಿಚಾರದಿಂದ ನನಗೂ ತುಂಬಾ ಬೇಜಾರಾಯ್ತು. ನಟಿಯಾಗಿ ಮೊದಲ ಸಿನಿಮಾದಲ್ಲೇ ಈ ವಿವಾದ ಬೇಸರ ತಂದಿತು.

ಮನು ಅವರು ಅರೆಸ್ಟ್ ಆಗಿದ್ದರ ಜೊತೆಗೆ ಆ ಆಡಿಯೋ ಕೂಡ ವೈರಲ್ ಆಗಿ ನಮ್ಮ ಸಿನಿಮಾಗೆ ಮತ್ತಷ್ಟು ಎಫೆಕ್ಟ್ ಆಯ್ತು. ನಾನು ಕೂಡ ದರ್ಶನ್ ಅವರ ಅಭಿಮಾನಿ, ಹಾಗಾಗಿ ಮನು ಅವರ ವಿಚಾರವಾಗಿ ನನಗೂ ಹಲವು ಮಂದಿ ಫೋನ್ ಮಾಡಿದ್ರು, ನಾನು ಯಾರ ಫೋನ್‌ಗೂ ಉತ್ತರಿಸಲಿಲ್ಲ. ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ನನ್ನನ್ನೂ ಪ್ರಶ್ನೆ ಮಾಡಿದ್ರು, ದರ್ಶನ್ ಬಗ್ಗೆ ಆ ರೀತಿ ಮಾತನಾಡಿದ್ರೂ ಹೇಗೆ ಸಹಿಸಿಕೊಂಡಿದ್ದೀರಾ ಎಂದು ಕೇಳಿದ್ರು. ಆಗ ಈ ಸಿನಿಮಾದಲ್ಲಿ ಮನು ಮಾತ್ರ ನಟಿಸಿಲ್ಲ ಎಂದು ಅವರಿಗೆ ಉತ್ತರಿಸಿದೆ ಎಂದು ಮೌನ ಹೇಳಿದ್ದಾರೆ.
ಮನು ಅವರು ಏನಾದ್ರೂ ಹಾಗೆ ಮಾಡಿದ್ರೆ, ಅವರು ಈಗ ಉತ್ತರ ಕೊಡೋಕೆ ಇಲ್ಲ, ಒಂದು ವೇಳೆ ಯಾರಿಗಾದರೂ ನಮ್ಮಿಂದ ನೋವಾಗಿದ್ರೆ ಕ್ಷಮೆ ಕೇಳ್ತೀವಿ ಎಂದಿದ್ದಾರೆ. ಆ ಆಡಿಯೋ ಕೇಳಿದ್ರೆ ನಮಗೂ ನೋವಾಗುತ್ತೆ, ನಮಗೂ ರಕ್ತ ಕುದಿಯುತ್ತೆ, ನಮ್ಮ ಡಿಬಾಸ್, ಶಿವಣ್ಣ, ಧ್ರುವ ಸರ್ಜಾ ಸರ್ ಅವರಿಗೆ ಹಾಗೂ ಅವರ ಎಲ್ಲ ಅಭಿಮಾನಿಗಳಿಗೆ ಕ್ಷಮೆ ಕೇಳ್ತೀವಿ ಎಂದು ಹೇಳಿದ್ದಾರೆ. ಈ ವಿಚಾರದಿಂದ ನಮ್ಮ ಸಿನಿಮಾಗೆ ಎಫೆಕ್ಟ್ ಆಗಬಾರದು ಎಂದುಕೊಂಡಿದ್ದೀವಿ. ಈ ಸಿನಿಮಾಗಾಗಿ ನಾವೆಲ್ಲರೂ ಶ್ರಮಪಟ್ಟಿದ್ದೀವಿ ಎಂದಿದ್ದಾರೆ.
ಬೇರೆ ನಟಿಯರು ಆಗಿದ್ರೆ ಈ ರೀತಿ ಆದಾಗ ಪ್ರಚಾರಕ್ಕೆ ಬರುತ್ತಿರಲಿಲ್ಲ, ಇಷ್ಟೆಲ್ಲ ವಿವಾದಗಳಿದ್ರೂ ಸಿನಿಮಾ ಗೆಲ್ಲಬೇಕು ಎಂದು ನಿಂತಿದ್ದೇನೆ ಎಂದು ಎಲ್ಲರೂ ಹೊಗಳಿದ್ರು. ನನಗೆ ಅಷ್ಟು ಸಾಕು! ಈ ಸಿನಿಮಾಗಾಗಿ ಮನು ಮಾತ್ರ ಕಷ್ಟಪಟ್ಟಿಲ್ಲ, ಹಲವು ಕಲಾವಿದರ ಪರಿಶ್ರಮ ಇದೆ. ಪ್ರೇಕ್ಷಕರಿಂದಲೂ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂತಹ ಸಿನಿಮಾಗಳು ಉಳಿಯಬೇಕು, ಬೆಳೆಯಬೇಕು ಎಂದು ನಟಿ ಮೌನ ಹೇಳಿದ್ದಾರೆ. ಮಡೆನೂರು ಮನು ಹೇಳಿದ್ದಾರೆ ಎನ್ನಲಾದ ಆಡಿಯೋದಲ್ಲಿ ನಟ ದರ್ಶನ್, ಶಿವರಾಜ್ ಕುಮಾರ್ ಅವರ ಸಾವಿನ ಬಗ್ಗೆ ಕೆಟ್ಟದಾಗಿ ಹೇಳಿಕೆ ಕೊಡಲಾಗಿದೆ. ಇದೇ ಕಾರಣಕ್ಕೆ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಕೂಡ ಮಾಡಲಾಗಿದೆ.












Click it and Unblock the Notifications