Mokshitha Pai: ಮೋಕ್ಷಿತಾ-ಧನರಾಜ್ ಮದುವೆ ಮಾತುಕತೆ, ಬಿಗ್‌ಬಾಸ್‌ ಮನೆಯಲ್ಲಿ ದೂರ-ದೂರ ಯಾಕೆ?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಅಂತಿಮ ವಾರಗಳತ್ತ ಸಾಗುತ್ತಿದ್ದು, ಇನ್ನೇನು ಮೂರು ವಾರಗಳಲ್ಲಿ ಈ ಸೀಜನ್‌ ಮುಗಿಯಲಿದೆ. ಈ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್‌ ಬಾಸ್‌ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಒಬ್ಬರು ಈ ವಾರವೇ ಫಿನಾಲೆಗೆ ಹೋಗುವುದು ಖಚಿತವಾಗಿದೆ.

ಇನ್ನು ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ಜನವರಿ 26 ಗಣರಾಜೋತ್ಸವದ ಭಾನುವಾರ ನಡೆಯಲಿದೆ. ಈ ಬಗ್ಗೆ ಸ್ವತಃ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್‌ ಹೇಳಿದ್ದಾರೆ. ಈಗಾಗಲೇ ಬಿಗ್​ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಒಂಬತ್ತು ಜನ ಉಳಿದುಕೊಂಡಿದ್ದು, ಈಗ ಮನೆಯೊಳಗೆ ಇರುವವರು ತಮ್ಮದೇ ಆದ ಸ್ನೇಹವನ್ನು ಸಂಪಾದಿಸಿಕೊಂಡಿದ್ದಾರೆ.

Mokshitha Pai And Dhanraj Acharya Act In Same Project Even Before Bigg Boss Kannada

ಒಂದೆಡೆ ಭವ್ಯಾ ಗೌಡ, ತ್ರಿವಿಕ್ರಮ್‌ ಹಾಗೂ ರಜತ್‌ ಜೊತೆಯಾಗಿದ್ದರೆ, ಮತ್ತೊಂದೆಡೆ ಉಗ್ರಂ ಮಂಜು ಹಾಗೂ ಗೌತಮಿ ಈ ಸೀಜನ್‌ನ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇನ್ನು ಈ ಸೀಜನ್‌ನ ಹಿಟ್‌ ಫ್ರೆಂಡ್‌ಶಿಪ್‌ ಅಂದರೆ ಅದು ಧನರಾಜ್‌ ಮತ್ತು ಹನುಮಂತ. ಹೀಗಿರುವಾಗ ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಯಾರ ಜೊತೆಗೂ ಸೇರದೇ ತಮ್ಮ ಪಾಡಿಗೆ ತಾವಿದ್ದಾರೆ.

ಸದ್ಯ ಯಾರ ಗೆಳೆತನದಲ್ಲೂ ಮುಳುಗಿ ಹೋಗದ ಮೋಕ್ಷಿತಾ ಪೈಗೆ ಧನರಾಜ್‌ ಆಚಾರ್‌ ಬಿಗ್‌ ಬಾಸ್‌ಗೂ ಮೊದಲೇ ಪರಿಚಿತರು ಅಥವಾ ಸ್ನೇಹಿತರು ಎಂದರೆ ನೀವು ನಂಬಲೇಬೇಕು. ಈ ಮನೆಯೊಳಗೆ ಬರುವ ಮುನ್ನವೇ ತುಂಬಾ ಪರಿಚಿತರಾಗಿರುವ ಇವರು ಎಂದೂ ಬಿಗ್‌ ಬಾಸ್‌ ಮನೆಯಲ್ಲಿ ಪರಿಚಿತರಂತೆ ಅಥವಾ ಸ್ನೇಹಿತರಂತೆ ನಡೆದುಕೊಂಡಿಲ್ಲ. ಜೋಡಿ ಟಾಸ್ಕ್‌ ಅನ್ನು ಜೊತೆಯಾಗಿ ಆಡಿದರೂ ಕೂಡ ಅಪರಿಚಿರಂತೆ ಇಬ್ಬರು ಇದ್ದರು.

Mokshitha Pai And Dhanraj Acharya Act In Same Project Even Before Bigg Boss Kannada

ಬಿಗ್‌ ಬಾಸ್‌ ಮನೆಯಲ್ಲಿರುವ ಮೋಕ್ಷಿತಾ ಪೈಗೂ ಹಾಗೂ ಧನರಾಜ್ ಆಚಾರ್‌ಗೂ ಮೊದಲೇ ಪರಿಚಯವಿದ್ದು, ಇಬ್ಬರು ಮನೆಯೊಳಗೆ ಅಪರಿಚಿತರಂತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಇರುವ ಇನ್ನೊಂದು ವಿಚಾರ ಈಗ ಬಹಿರಂಗವಾಗಿದೆ. ಮೋಕ್ಷಿತಾ ಪೈಗೂ ಹಾಗೂ ಧನರಾಜ್ ಆಚಾರ್‌ಗೂ ಮದುವೆ ಮಾತುಕತೆ ಆಗಿತ್ತು. ಇದೆನಪ್ಪಾ ಹೊಸ ನ್ಯೂಸ್‌ ಅಂತಾ ಶಾಕ್‌ ಆಯ್ತಾ? ಈ ಬಗ್ಗೆ ಅಸಲಿ ವಿಚಾರ ಈ ಕೆಳಗಿದೆ.

ಪಾರು ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಮೋಕ್ಷಿತಾ ಪೈ ಹಾಗೂ ಗಿಚ್‌ ಗಿಲಿಗಿಲಿ ರಿಯಾಲಿಟಿ ಶೋ, ಅಬ್ಬಬ್ಬಾ ಸಿನಿಮಾ ಸೇರಿದಂತೆ ನಟನೆಯಲ್ಲಿ ಗುರುತಿಸಿಕೊಂಡಿರುವ ಧನರಾಜ್ ಆಚಾರ್‌ ಒಂದು ಪ್ರಾಜೆಕ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಮದುಮಗ ಎನ್ನುವ ವೆಬ್‌ ಸಿರೀಸ್‌ಅನ್ನು ಇಬ್ಬರು ಜೊತೆಯಾಗಿ ಮಾಡಿದ್ದು, ಇವರಿಬ್ಬರ ಮದುವೆ ಮಾತು-ಕತೆ ನಡೆಯುವಂತಹ ದೃಶ್ಯವೊಂದು ಈ ವೆಬ್‌ ಸಿರೀಸ್‌ನಲ್ಲಿದೆ.

Mokshitha Pai And Dhanraj Acharya Act In Same Project Even Before Bigg Boss Kannada

ಟಾಕೀಸ್‌ ಕನ್ನಡ ಎನ್ನುವ ಯೂಟ್ಯೂಬ್‌ನಲ್ಲಿ ಮೋಕ್ಷಿತಾ ಹಾಗೂ ಧನರಾಜ್‌ ನಟಿಸಿರುವ ಮದುಮಗ ಎನ್ನುವ ವೆಬ್‌ ಸಿರೀಸ್‌ ಅಪ್ಲೋಡ್‌ ಆಗಿದ್ದು, ಇವರಿಬ್ಬರು ಬಿಗ್‌ ಬಾಸ್‌ಗೆ ಹೋದ ಬಳಿಕ ಈ ವೆಬ್‌ ಸೀರಿಸ್‌ನ ಕೆಲವು ದೃಶ್ಯಗಳು ವೈರಲ್‌ ಆಗುತ್ತಿದೆ. ಅದೇನೆ ಇರಲಿ ಒಂದೇ ಪ್ರಾಜೆಕ್ಟ್‌ನಲ್ಲಿ ನಟಿಸಿ ಪರಿಚಯವಿದ್ದರೂ ಕೂಡ ಮೋಕ್ಷಿತಾ ಹಾಗೂ ಧನರಾಜ್‌ ಬಿಗ್‌ ಬಾಸ್‌ ಮನೆಯಲ್ಲಿ ಮೊದಲಿನಿಂದಲೂ ಅಪರಿಚಿತರಂತೆ ಯಾಕಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+