Master Anand: ಡಿವೋರ್ಸ್ ವದಂತಿ: ಮಹತ್ವದ ಪೋಸ್ಟ್ ಹಂಚಿಕೊಂಡ ಮಾಸ್ಟರ್ ಆನಂದ್ ಪತ್ನಿ
ಇತ್ತೀಚಿಗೆ ಸಾಮಾಜಿಕ ಜಾಲತಾಣ ಎನ್ನುವುದು ಬೇರೆಯವರ ನೆಮ್ಮದಿ ಕೆಡಿಸುವ ಬಹಳ ಸುಲಭದ ಆಯುಧವಾಗುತ್ತಿದೆ. ಅದರಲ್ಲೂ ಕಮೆಂಟ್‌ಗಳಿಂದ ಅದೆಷ್ಟೋ ಜನರು ಜೀವನದಲ್ಲಿ ಖಿನ್ನತೆಗೊಳಗಾಗಬೇಕು ಅಂತಹ ಪರಿಸ್ಥಿತಿ ಮುಂದೆ ಇದೆ. ಕೆಲವರು ತಾವು ಹಾಕುವ ಒಂದೇ ಒಂದು ಕಮೆಂಟ್‌ನಿಂದ ಒಬ್ಬರ ಮನಸ್ಸು ಒಡೆಯಬಹುದು, ಒಂದು ಕುಟುಂಬ ಒಡೆಯಬಹುದು ಎನ್ನುವ ಪರಿವೇ ಇಲ್ಲದೇ ಮನಸೋಇಚ್ಛೆ ಕಮೆಂಟ್ ಮಾಡುತ್ತಾರೆ.
ಅದರಲ್ಲೂ ಈ ಕಮೆಂಟ್ ಆಯುಧ ಹೆಚ್ಚಾಗಿ ನಟ, ನಟಿಯರು ಅಥವಾ ಸಮಾಜದ ಮುಖ್ಯ ಭೂಮಿಕೆಯಲ್ಲಿ ಬದುಕುತ್ತಿರುವವರ ನೆಮ್ಮದಿ ಹಾಳು ಮಾಡುತ್ತಿದೆ. ಮೊದಲು ಒಂದು ಕಮೆಂಟ್ ಬಳಿಕ ಅದೇ ಗಾಳಿ ಸುದ್ದಿಯಾಗಿ ಎಲ್ಲೆಡೆ ಹರಡಿ ಆ ವ್ಯಕ್ತಿ ಒತ್ತಡಕ್ಕೆ ಸಿಲುಕಿ ಅಥವಾ ತೀವ್ರ ಬೇಸರಗೊಂಡು ಮತ್ತೆ ಅದೇ ವಿಚಾರಕ್ಕೆ ಸ್ಪಷ್ಟನೆ ಕೊಡುವುದು ಈಗೀಗ ಸಾಮಾನ್ಯವಾಗುತ್ತಿದೆ. ಇದೀಗ ಇದೇ ರೀತಿಯ ಗಾಳಿ ಸುದ್ದಿ ವಿಚಾರಕ್ಕೆ ಕನ್ನಡದ ಜನಪ್ರಿಯ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಮೆಂಟ್‌ನಿಂದ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಮಾಸ್ಟರ್ ಆನಂದ್ ಡಿವೋರ್ಸ್ ವದಂತಿ ಎಂದು ಎಲ್ಲೆಡೆ ಸುದ್ದಿ ಹರಿದಾಡಲು ಆರಂಭಿಸಿತ್ತು. ಈ ವಿಚಾರಕ್ಕೆ ಯಶಸ್ವಿನಿ ಮಾಸ್ಟರ್ ಆನಂದ್ ಪ್ರತಿಕ್ರಿಯಿಸಿದ್ದು, ತಮ್ಮ ಬಗ್ಗೆ ಸಲ್ಲದ ಮಾತನಾಡಿರುವವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ತಮ್ಮ ಕುಟುಂಬದ ವಿಡಿಯೋ ಹಂಚಿಕೊಂಡಿರುವ ಯಶಸ್ವಿನಿ, 'ದಯವಿಟ್ಟು ಗಾಳಿ ಸುದ್ದಿ, ವದಂತಿಗಳನ್ನು ಹರಡಬೇಡಿ. ನನಗೆ ನನ್ನ ಕುಟುಂಬ ತುಂಬಾ ಮುಖ್ಯ, ನನ್ನ ಕುಟುಂಬವೇ ನನ್ನ ಜಗತ್ತು. ನಾನು ಅದೇ ಜಗತ್ತಿನಲ್ಲಿರಲು ಇಷ್ಟಪಡುತ್ತೇನೆ' ಎನ್ನುವ ಮೂಲಕ ತಮಗೆ ತಮ್ಮ ಕುಟುಂಬ ಎಷ್ಟು ಮುಖ್ಯ ಎನ್ನುವುದು ಯಶಸ್ವಿನಿ ವಿವರಿಸಿದ್ದು, ಗಾಳಿ ಸುದ್ದಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?
ಯಶಸ್ವಿನಿ ಮಾಸ್ಟರ್ ಆನಂದ್ ಇತ್ತೀಚಿಗೆ ಒಂದು ಹಾಡಿಗೆ ಮಿನಿ ಸ್ಕರ್ಟ್ ಹಾಕಿ ಡ್ಯಾನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ರೀಲ್ಸ್‌ಗೆ ಯುವತಿ ಒಬ್ಬರು ಡಿವೋರ್ಸ್ ಎನ್ನುವ ವಿಚಾರವಾಗಿ ಕಮೆಂಟ್ ಹಾಕಿದ್ದರು. ಯಶಸ್ವಿನಿ ರೀಲ್ಸ್‌ಗೆ ಯುವತಿ 'ಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್ ಆಗಲಿದೆ' ಎನ್ನುವ ಅರ್ಥದಲ್ಲಿ ಕಮೆಂಟ್ ಹಾಕಿದ್ದರು.
ಈವರೆಗೂ ಕೆಟ್ಟ ಕಮೆಂಟ್‌ಗೆ ತಲೆ ಕೆಡಿಸಿಕೊಳ್ಳದ ಯಶಸ್ವಿನಿ, ಈ ಕಮೆಂಟ್‌ಗೆ ಸರಿಯಾಗಿ ತಿರುಗೇಟು ನೀಡಿದ್ದರು. 'ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ' ಎನ್ನುವ ಮೂಲಕ ಯಶಸ್ವಿನಿ ತಮ್ಮ ಹಾಗೂ ಮಾಸ್ಟರ್ ಆನಂದ್ ದಾಂಪತ್ಯದ ಬಗ್ಗೆ ಮಾತನಾಡುವವರ ಬಾಯಿಗೆ ಬೀಗ ಹಾಕಿದ್ದರು.












Click it and Unblock the Notifications