Manjummel Boys OTT: ಸಿನಿ ಪ್ರೇಮಿಗಳನ್ನು ಸೀಟಿನ ತುದಿಗೆ ಕೂರಿಸಿದ ಮಂಜುಮ್ಮೇಲ್ ಬಾಯ್ಸ್ ಒಟಿಟಿಗೆ, ಎಲ್ಲಿ ಸಿಗಲಿದೆ?
ಈ ವರ್ಷದ ಮಲಯಾಳಂ ಸೂಪರ್ ಹಿಟ್ ಸಿನಿಮಾ ಮಂಜುಮ್ಮೇಲ್ ಬಾಯ್ಸ್ ಒಟಿಟಿಗೆ ಬರಲಿದೆ. ಚಿದಂಬರಂ ನಿರ್ದೇಶನದ ಸೌಬಿನ್ ಶಾಹಿರ್ ಮತ್ತು ಶ್ರೀನಾಥ್ ಭಾಸಿ ಅಭಿನಯದ 'ಮಂಜುಮ್ಮೆಲ್ ಬಾಯ್ಸ್' ಫೆಬ್ರವರಿ 22, 2024 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು.
'ಮಂಜುಮ್ಮೆಲ್ ಬಾಯ್ಸ್' ಈ ವರ್ಷ ಸಿನಿಮಾ ರಂಗದಲ್ಲಿ ಹೊಸ ರಿತಿಯ ಸಿನಿಮಾ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪ್ರಶಂಸೆ ಗಳಿಸಿದ ಚಿತ್ರವು ಕೊನೆಗೂ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ನೋಡುಗರನ್ನು ಸೀಟಿನ ತುದಿಗೆ ಕೂರಿಸಿದ ಈ ಸಿನಿಮಾ ಮನೆಗಳಲ್ಲಿಯೂ ತನ್ನ ಕಥೆಯಿಂದಾಗಿ ಮತ್ತಷ್ಟು ಮನರಂಜನೆ ನೀಡಲು ಸಿದ್ಧವಾಗಿದೆ. ಮಂಜುಮ್ಮೇಲ್ ಬಾಯ್ಸ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಜಗತ್ತಿನಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

ಒಟಿಟಿಗೆ 'ಮಂಜುಮ್ಮೆಲ್ ಬಾಯ್ಸ್'
ಥಿಯೇಟರ್‌ಗಳಲ್ಲಿ "ಮಂಜುಮ್ಮೆಲ್ ಬಾಯ್ಸ್" ಸಿನಿಮಾ ನೊಡಲು ಸಾಧ್ಯವಾಗದವರು ಯಾವಾಗ ಒಟಿಟಿಗೆ ಬರುತ್ತದೆ ಎಂದು ಕಾಯುತ್ತಿದ್ದರು. ಅವರಿಗಾಗಿ ಸಿನಿಮಾ ತಮಡ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಮಂಜುಮ್ಮೆಲ್ ಬಾಯ್ಸ್ ಏಪ್ರಿಲ್ 5 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತನ್ನ ಡಿಜಿಟಲ್ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ.
2006 ರಲ್ಲಿ, ಕೇರಳದ ಸ್ನೇಹಿತರ ಗುಂಪೊಂದು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಗುಹೆಗಳಿಗೆ ಪ್ರವಾಸಕ್ಕೆ ತೆರಳುತ್ತದೆ. ಪ್ರವಾಸದ ಖುಷಿಯನ್ನು ಕಳೆದುಕೊಳ್ಳುವಂತೆ, ಸ್ನೇಹಿತನೊಬ್ಬ ಅಜಾಗರೂಕತೆಯಿಂದ ಆಳವಾದ ಕಂದಕಕ್ಕೆ ಬೀಳುತ್ತಾನೆ. ಆತನನ್ನು ಉಳಿಸಲು ಹೋರಾಡುವ ಇತರ ಸ್ನೇಹಿತರ ಕಥೆಯೇ "ಮಂಜುಮ್ಮೆಲ್ ಬಾಯ್ಸ್". ಸತ್ಯ ಘಟನೆ ಆಧಾರಿತ ಈ ಸಿನಿಮಾ ಬಾಯಿಂದ ಬಾಯಿಗೆ ಹರಡಿ ಇಂದಿಗೂ ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿದೆ.

ಮಂಜುಮ್ಮೆಲ್ ಬಾಯ್ಸ್ ತಂಡ
'ಜನ್.ಇ.ಮ್ಯಾನ್' ನಿರ್ದೇಶನಕ್ಕೆ ಹೆಸರುವಾಸಿಯಾದ ಚಿದಂಬರಂ, 'ಮಂಜುಮ್ಮೆಲ್ ಬಾಯ್ಸ್' ಗೆ ಆಕ್ಷನ್ ಕಟ್ ಹೇಳಿದ್ದಾರೆ. "ಮಂಜುಮ್ಮೆಲ್ ಬಾಯ್ಸ್" ಚಿತ್ರದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ದೀಪಕ್ ಪರಂಬೋಲ್, ಗಣಪತಿ, ಲಾಲ್ ಜೂನಿಯರ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಲೀದ್ ರೆಹಮಾನ್, ಚಂದು ಸಲೀಂಕುಮಾರ್, ಮತ್ತು ವಿಷ್ಣು ರೇಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೈಜು ಖಾಲಿದ್ ಛಾಯಾಗ್ರಾಹಕರಾಗಿದ್ದು, ವಿವೇಕ್ ಹರ್ಷನ್ ಸಂಕಲನಕಾರರಾಗಿದ್ದಾರೆ. ಸುಶಿನ್ ಶ್ಯಾಮ್ ಸಂಗೀತ ನೀಡಿದ್ದಾರೆ.












Click it and Unblock the Notifications