ನಟ ಮಹೇಶ್ ಬಾಬು ಶರ್ಟ್ ಬಿಚ್ಚಿದರೆ ಕೇಳಲ್ಲ: ಪತ್ರಕರ್ತನಿಗೆ ಬುದ್ಧಿ ಕಲಿಸಿದ ನಟಿ, ಇಲ್ಲಿದೆ ವೈರಲ್ ವಿಡಿಯೋ!

ಪತ್ರಕರ್ತರು ಹಾಗೂ ಸ್ಟಾರ್ ನಟ - ನಟಿಯರು, ನಿರ್ಮಾಪಕರೊಂದಿಗೆ ಮತ್ತು ನಿರ್ದೇಶಕರೊಂದಿಗೆ ಕೆಲವೊಮ್ಮೆ ವೈಮನ್ಸು ಮೂಡುವುದು ಇದೆ. ಆದರೆ ಕೆಲವು ಪತ್ರಕರ್ತರು ಕೆಣಕಿ ಹಾಗೂ ಬೇಕಂತೆಲೇ ಕೆಲವೊಂದು ತರ್ಲೆ ಪ್ರಶ್ನೆಗಳನ್ನು ಕೇಳುವುದು ಇದೆ. ಈ ರೀತಿ ಮಾಡುವವರ ವಿರುದ್ಧ ಕೆಲವರು ನೇರವಾಗಿ ಉತ್ತರಿಸಿದರೆ ಇನ್ನೂ ಕೆಲವರು ಸೂಕ್ಷ್ಮವಾಗಿ ಪ್ರತಿಕ್ರಿಯೆ ಕೊಡುವುದು ಇದೆ. ಇದೀಗ ತೆಲುಗಿನ ನಟಿಯೊಬ್ಬರು ಪತ್ರಕರ್ತರ ಮೇಲೆ ತಿರುಗಿ ಬಿದ್ದಾರೆ. ಈ ಸಂಬಂಧ ದೂರು ಸಹ ದಾಖಲಾಗಿದೆ. ಬೇಕಾಬಿಟ್ಟಿ ಪ್ರಶ್ನೆ ಮಾಡುವವರಿಗೆ ಇದೊಂದು ಪಾಠ ಅಂತಲೇ ಹೇಳಲಾಗುತ್ತಿದೆ. ಇಷ್ಟಕ್ಕೂ ಏನಿದು ವಿವಾದ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ತೆಲುಗು ನಟಿ ಮತ್ತು ನಿರ್ಮಾಪಕಿ ಲಕ್ಷ್ಮಿ ಮಂಚು ಅವರು ತಮ್ಮ ಹೊಸ ಚಿತ್ರ 'ದಕ್ಷ: ಎ ಡೆಡ್ಲಿ ಕಾನ್ಸ್ಪಿರಸಿ'ಯ (Daksha: The Deadly Conspiracy) ಸಿನಿಮಾದ ಪ್ರಚಾರದ ಭಾಗವಾಗಿ ಸಂದರ್ಶನ ನೀಡುತ್ತಿದ್ದಾರೆ. ಆದರೆ ಈ ಸಿನಿಮಾದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತರು ಮನಸೋ ಇಚ್ಛೆ ಪ್ರಶ್ನೆ ಕೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಂದರ್ಶನದಲ್ಲಿ ಹಿರಿಯ ಪತ್ರಕರ್ತೆಯೊಬ್ಬರು ಬಾಡಿಶೇಮಿಂಗ್, ಬಟ್ಟೆ ಹಾಗೂ ವಯಸ್ಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Manchu Lakshmi to Journalist If Mahesh Babu Takes Off Shirt No Vulgar Questions Viral Video

ಈ ಆರೋಪಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅವರು, ತೆಲಂಗಾಣ ಚಲನಚಿತ್ರ ವಾಣಿಜ್ಯ ಮಂಡಳಿಗೆ (TFCC) ದೂರು ನೀಡಿದ್ದಾರೆ. ಪತ್ರಕರ್ತರು ಲಕ್ಷ್ಮಿ ಅವರ ಬಳಿ ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದು, 40ರ ಮಹಿಳೆಯಾಗಿರುವ ನೀವು (ನಟಿ) ಈ ರೀತಿಯ ಬಟ್ಟೆ ಧರಿಸುತ್ತೀರಿ ಎಂಬರ್ಥದ ಆಕ್ಷೇಪಾರ್ಹವಾದ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನುವ ಆರೋಪ ಪತ್ರಕರ್ತರ ಮೇಲೆ ಕೇಳಿ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ನಟಿ ಲಕ್ಷ್ಮಿ ಅವರು, "ಭಾರತವು ಮಹಿಳೆಯರನ್ನು ಶಕ್ತಿದೇವಿ ಎಂದು ಪೂಜಿಸುವ ದೇಶ, ಆದರೆ ನಾವು ವೃತ್ತಿಪರ ಸ್ಥಳಗಳಿಗೆ ಕಾಲಿಟ್ಟಾಗ, ನಾವು ಸಾಂದರ್ಭಿಕ ಸ್ತ್ರೀದ್ವೇಷ, ಅವಮಾನ ಮತ್ತು ಅಗೌರವಕ್ಕೆ ಒಳಗಾಗುತ್ತೇವೆ. ಇದು ಮುಂದುವರಿಸಲು ಸಾಧ್ಯವಿಲ್ಲ. ನಾನು ನನಗೆ ಮಾತ್ರವಲ್ಲ ಎಲ್ಲರಿಗಾಗಿ ಮಾತನಾಡುತ್ತಿದ್ದೇನೆ. ಅನೇಕ ಯುವತಿಯರಿಗೂ ಈ ವಿಚಾರದಲ್ಲಿ ಋಣಿಯಾಗಿದ್ದೇನೆ." ಸಾರ್ವಜನಿಕ ವ್ಯಕ್ತಿಯಾಗಿ / ಪ್ರಸಿದ್ಧ ವ್ಯಕ್ತಿಯಾಗಿ ಯಾವುದೇ ಕಠಿಣ ಪ್ರಶ್ನೆಗಳನ್ನು ಕೇಳುವ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸುತ್ತಾ, "ಪತ್ರಿಕೋದ್ಯಮದ ಮರೆಮಾಚುವ ಕ್ರೌರ್ಯ"ವನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೇ ಈ ರೀತಿ ಆಕ್ಷೇಪಾರ್ಹವಾದ ಪ್ರಶ್ನೆಗಳನ್ನು ಕೇಳಿರುವ ಪತ್ರಕರ್ತರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಎಂದು ಆಂಧ್ರಪ್ರದೇಶದ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿದ್ದಾರೆ. ಲಕ್ಷ್ಮಿ ಅವರು ಹಾಗೂ ಪತ್ರಕರ್ತರ ಸಂದರ್ಶನದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಆಕೆಯ "ಡ್ರೆಸ್ಸಿಂಗ್ ಸೆನ್ಸ್" ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅಲ್ಲದೇ ಇದಕ್ಕೆ ಲಕ್ಷ್ಮಿ ಅವರು "ನೀವು ಒಬ್ಬ ಪುರುಷನಿಗೆ ಇದೇ ಪ್ರಶ್ನೆಯನ್ನು ಕೇಳುತ್ತೀರಾ? ನನಗೆ ಈ ಪ್ರಶ್ನೆಯನ್ನು ಕೇಳಲು ನಿಮಗೆ ಎಷ್ಟು ಧೈರ್ಯ?" ಎಂದು ಲಕ್ಷ್ಮಿ ಅವರು ಪ್ರಶ್ನೆ ಮಾಡಿದ್ದಾರೆ. 50 ವರ್ಷ ವಯಸ್ಸಿನ ಮಹೇಶ್ ಬಾಬುಗೆ ಶರ್ಟ್ ಹಾಕದೆ ಹೋಗುವುದನ್ನು ತಪ್ಪು ಎಂದು ಯಾರೂ ಹೇಳುವುದಿಲ್ಲ, ಆದರೆ ಮಹಿಳೆಯರು 40 ವರ್ಷ ದಾಟಿದ ನಂತರ ಅವರು ಬಯಸಿದ್ದನ್ನು ಧರಿಸಿದ್ದಕ್ಕಾಗಿ ಪ್ರಶ್ನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನೀವು ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಯಾಕೆ: ಇನ್ನು ಈ ಸಂದರ್ಶನದಲ್ಲೇ ಲಕ್ಷ್ಮಿ ಅವರು ಈ ಪ್ರಶ್ನೆಗೆ ತಿರುಗಿ ಬಿದ್ದಿದ್ದಾರೆ. ನೀವು ಕೇಳುವ ಪ್ರಶ್ನೆಗಳನ್ನು ಜನರು ನೋಡುತ್ತಾರೆ. ಜನರು ನಿಮ್ಮನ್ನು ನೋಡಿ ಪ್ರಶ್ನೆ ಕೇಳುತ್ತಾರೆ. ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಿ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+