3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ

ಮುಂಬೈನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇತ್ತೀಚೆಗೆ ಮತ್ತೊಂದು ಪ್ರಮುಖವಾದ ವ್ಯವಹಾರ ನಡೆದಿದ್ದು, ಅದು ಐಕಾನಿಕ್ ಹಾಡುಗಳು ರಾಣಿ ಎಂದೆ ಕರೆಯಲ್ಪಡುವ ಮಲೈಕಾ ಅರೋರಾ ತಮ್ಮ ಅಪಾರ್ಟ್ಮೆಂಟ್ ಅನ್ನು ಮೂರು ವರ್ಷಗಳ ಅವಧಿಗೆ ಬಾಡಿಗೆಗೆ ನೀಡಿದ್ದಾರೆ.

ಸ್ಕ್ವೇರ್‌ಯಾರ್ಡ್ಸ್ ವರದಿಯ ಪ್ರಕಾರ ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದ ಕಾರ್ಟರ್ ರಸ್ತೆ ಸಮೀಪದ 'ವಿಡಾ' ಕಟ್ಟಡದಲ್ಲಿರುವ ಮಲೈಕಾ ಅರೋರಾ ಅವರ ಈ ಅಪಾರ್ಟ್ಮೆಂಟ್‌ಗೆ ಮಾಸಿಕ ಬಾಡಿಗೆ 3.10 ಲಕ್ಷ ಆಗಿದ್ದು, ಒಟ್ಟು 36 ತಿಂಗಳುಗಳಗೆ ಬಾಡಿಗೆಯನ್ನು ನೀಡಲಾಗಿದೆ ಎಂದು ವರದಿ ಮಾಡಿದೆ.

Malaika Arora

ಬಾಡಿಗೆಯ ಒಪ್ಪಂದದ ಪ್ರಕಾರ ಬಾಡಿಗೆ ಮಲೈಕಾ ಅವರ ಅಪಾರ್ಟ್ಮೆಂಟ್ನ ಈ ಮೊತ್ತವು ಪ್ರತಿ ವರ್ಷ ಶೇ. 5ರಷ್ಟು ಹೆಚ್ಚಿಗೆ ಆಗುತ್ತದೆ. ಎರಡನೇ ವರ್ಷದಲ್ಲಿ 3.25 ಲಕ್ಷ ರೊ ಮತ್ತು ಮೂರನೇ ವರ್ಷಕ್ಕೆ 3.41 ಲಕ್ಷ ಆಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅವರ ಅಪಾರ್ಟ್ಮೆಂಟ್ ಒಟ್ಟು ಬಾಡಿಗೆ ಆದಾಯವೆ 1.17 ಕೋಟಿ ಮುಟ್ಟಲಿದೆ.

ಮಲೈಕಾ ಅರೋರಾ ಅವರು ಈ ಒಪ್ಪಂದವನ್ನು ಮಾರ್ಚ್ 18, 2026ರಂದು ನೋಂದಣಿ ಮಾಡಿಕೊಂಡಿದ್ದಾರೆ, 30,819 ಸ್ಟಾಂಪ್ ಡ್ಯೂಟಿ ಮತ್ತು 1,000 ನೋಂದಣಿ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಅಪಾರ್ಟ್ಮೆಂಟ್ ಅನ್ನು ಆದಿತಿ ರಾವ್ ಎಂಬವರಿಗೆ ಬಾಡಿಗೆಗೆ ನೀಡಲಾಗಿದ್ದು, ಭದ್ರತಾ ಠೇವಣಿ ರೂಪದಲ್ಲಿ 20 ಲಕ್ಷ ಪಾವತಿಸಿದ್ದಾರೆ ಎಂದು ದಾಖಲೆಗಳು ತಿಳಿಸಿವೆ.

ಬಾಂದ್ರಾ ವೆಸ್ಟ್‌ನ ಪ್ರಮುಖ ವೈಶಿಷ್ಟ್ಯಗಳು

ಬಾಂದ್ರಾ ವೆಸ್ಟ್ ಮುಂಬೈನ ಅತ್ಯಂತ ಪ್ರಸಿದ್ದ ಮತ್ತು ದುಬಾರಿ ಪ್ರದೇಶಗಳಲ್ಲಿ ಇದು ಒಂದಾಗಿದೆ. ಇದರ ವೈಶಿಷ್ಟಗಳು ಇಂತಿವೆ.

ಬಾಲಿವುಡ್ ತಾರೆಯರ ನೆಚ್ಚಿನ ಜಾಗ

ಈ ಬಾಂದ್ರಾ ವೆಸ್ಟ್ ಬಾಲಿವುಡ್ ನ ಪ್ರಮುಖ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಸೇರಿದಂತೆ ಹಲವಾರು ನಟರ ನೆಚ್ಚಿನ ವಾಸ ಸ್ಥಳ ಆಗಿದೆ.

ಪ್ರಮುಖ ಹಾಟ್‌ಸ್ಪಾಟ್‌ಗಳು

ಕಾರ್ಟರ್ ರಸ್ತೆ, ಬ್ಯಾಂಡ್‌ ಸ್ಟ್ಯಾಂಡ್‌ಗಳು, ವಾಕಿಂಗ್, ರಿಲ್ಯಾಕ್ಸ್ ಮತ್ತು ಸಮುದ್ರ ತೀರದ ನೋಟಕ್ಕಾಗಿ ಈ ಜಾಗವು ಜನಪ್ರಿಯ ಆಗಿದೆ.

ಐಷಾರಾಮಿ ಜೀವನಶೈಲಿ

ಬಾಂದ್ರಾ ವೆಸ್ಟ್ ಪ್ರೀಮಿಯಂ ಅಪಾರ್ಟ್ಮೆಂಟ್‌ಗಳು, ವಿಲ್ಲಾಗಳು ಮತ್ತು ಹೈಎಂಡ್ ನಿವಾಸಗಳಿಗೆ ಹೆಸರುವಾಸಿ. ಇಲ್ಲಿ ವಾಸಿಸುವುದು ಒಂದು ಪ್ರತಿಷ್ಟೆಯ ಸಂಕೇತವು ಆಗಿದೆ.

ನೈಟ್‌ಲೈಫ್ ಹಬ್

ಟಾಪ್ ಎಂಡ್ ರೆಸ್ಟೋರೆಂಟ್, ಕೆಫೆ, ಪಬ್ ಈ ತರಹದ ಜೀವನ ಶೈಲಿಯು ಹೆಚ್ಚಾಗಿ ಕಾಣಸಿಗುತ್ತದೆ. ಇಲ್ಲಿ ಹೆಚ್ಚಾಗಿ ಯುವಕರು ಮತ್ತು ಸೆಲೆಬ್ರಿಟಿಗಳಿಗೆ ಇದು ಇಷ್ಟವಾದ ಜಾಗವಾಗಿದೆ ಎಂದು ಹೇಳಲಾಗುತ್ತದೆ.

ಹೂಡಿಕೆದಾರರಿಗೆ ಪ್ರಮುಖ ಸ್ಥಳವಾಗಿರುತ್ತದೆ

ಈ ಬಾಂದ್ರಾ ವೆಸ್ಟ್ ಮುಂಬೈನ ಅತ್ಯಂತ ಪ್ರಸಿದ್ದ ಮತ್ತು ದುಬಾರಿ ಆಗಿರುವುದರಿಂದ ಇದರ ರಿಯಲ್ ಎಸ್ಟೇಟ್ ಮೌಲ್ಯ ಸದಾ ಹೆಚ್ಚಾಗುತ್ತಲೆ ಇರುತ್ತದೆ, ಇದು ಹೂಡಿಕೆದಾರರಿಗೆ ಅತ್ಯಂತ ಬೇಡಿಕೆಯ ಪ್ರದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+