Get Updates
Get notified of breaking news, exclusive insights, and must-see stories!

Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ

Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಬರಹಗಾರ, ಟೆಕ್ಕಿ ಮಧು ವೈ.ಎನ್ ಅವರ ಬರಹ ಇಲ್ಲಿದೆ.

ಲವ್‌ ಮಾಕ್‌ಟೇಲ್‌ ಕತೆ ಕೃತಿಚೌರ್ಯದ ಕಾಂಟ್ರೋವರ್ಸಿಯ ಬಗ್ಗೆ ನೋಡುತ್ತಿದ್ದೆ. ಇದರ ಸತ್ಯಾಸತ್ಯತೆ ಬಗ್ಗೆ ನಾವು ಇಲ್ಲಿ ಕೂತುಕೊಂಡು ಏನನ್ನೂ ತೀರ್ಮಾನ ಹೊರಡಿಸುವುದು ತಪ್ಪಾಗುತ್ತದೆ. ಆದರೆ, ಇಷ್ಟು ಆಗಿದೆಯೆಂದು ಊಹಿಸಬಹುದು.

ಒಬ್ಬ ಸಾಮಾನ್ಯ ಮನುಷ್ಯ ತನಗೆ ಯಾರಿಂದಲೋ ಅನ್ಯಾಯ ಆಗಿದೆ ಅನಿಸಿದಾಗ ಆತ ಮೊದಲು ಯಾರಿಂದ ಅನ್ಯಾಯ ಆಗಿದೆಯೋ ಅಲ್ಲಿಯೇ ನ್ಯಾಯ ಕೇಳುತ್ತಾನೆ. ಅಲ್ಲಿ ತಿರಸ್ಕಾರದ ಪ್ರತಿಕ್ರಿಯೆ ಬಂದಾಗ ಆತ ಬಲಿಷ್ಠನಾಗಿದ್ದಲ್ಲಿ ಸೇಡು, ಪ್ರತೀಕಾರದ ಮನೋಭಾವ ಹೊಂದಿದ್ದಲ್ಲಿ ಒಂದೋ ತಾನೇ ಹೊಡೆದಾಟ ಬಡಿದಾಟದ ಮೂಲಕ ನೇರ ಸಂಘರ್ಷಕ್ಕೆ ಇಳಿಯುತ್ತಾನೆ ಇಲ್ಲವೇ ಕಾನೂನಿನ ಮೊರೆ ಹೋಗುತ್ತಾನೆ. ಎರಡೂ ಅಲ್ಲದವನು ಸುಳ್ಳೇ ಕ್ಷಮಿಸಿಯೋ ಹಲ್ಲು ಕಚ್ಚಿಕೊಂಡೋ ಸುಮ್ಮನಾಗುತ್ತಾನೆ.

Love Mocktail 3 Row

ಒಂದೆರಡು ದಿನ ಒಳಗೆ ದುಃಖಿಸಿ ನಂತರ ಕನಿಷ್ಠ ಮಟ್ಟದಲ್ಲಿ ಅದನ್ನು ಜನತಾ ನ್ಯಾಯಾಲಯದಲ್ಲಿ ತೋಡಿಕೊಂಡು ಹಗುರಾಗಲು ಪ್ರಯತ್ನಿಸುತ್ತಾನೆ. ರಾಘವೇಂದ ಅವರು ತಾವು ಕತೆ ಮಾಡಿಕೊಂಡಿದ್ದು ಮತ್ತು ಅದು ಅದ್ಭುತವಾಗಿದ್ದು(ನೆನ್ನಿನ ಸಂದರ್ಶನದಲ್ಲಿ ವಿವರಿಸಿದ್ದಾರೆ) ಈ ಎರಡೂ ಸತ್ಯವೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇವರು ಯಾರಿಂದಲೂ ಕದ್ದ ಆರೋಪ ಇಲ್ಲ ಹಾಗಾಗಿ ಇವರು ಏನನ್ನೂ ಸಾಬೀತುಪಡಿಸಬೇಕಿಲ್ಲ. ಡಾರ್ಲಿಂಗ್ ಕೃಷ್ಣ ಅವರು ಮತ್ತೆ ಮತ್ತೆ ಅದನ್ನು ಗೂಗಲ್ ಕತೆ ಅಂತ ಹಂಗಿಸಿ ಹೀಯಾಳಿಸಿದ್ದು ಶುದ್ಧ ಉಡಾಫೆ ಮತ್ತು ಒಬ್ಬ ಸೃಜನಶೀಲ ವ್ಯಕ್ತಿಯ ಕಡೆಗೆ ಎಸಗಬಹುದಾದ ಕ್ರೌರ್ಯ. ಜೇಮ್ಸ್ ಕ್ಯಾಮರೂನ್ 1912ರಲ್ಲಿ ಟೈಟಾನಿಕ್ ಮುಳುಗಿದ್ದ ಘಟನೆಯನ್ನು ಗೂಗಲ್ ಮಾಡಿಯೋ, ಪುಸ್ತಕ ಓದಿಯೋ ತಿಳಿದುಕೊಂಡೇ ಕತೆ ಮಾಡಿರುವುದು.

ಹಾಗಂತ ಕೃಷ್ಣ ಅವರು ಇವರಿಂದಾನೇ ಎತ್ತಿಕೊಂಡಿದ್ದಾರಾ, ನನಗೆ ಗೊತ್ತಿಲ್ಲ. ಅವರ ರಕ್ಷಣೆಗೆ ಇರುವ ಮುಖ್ಯ ಅಂಶ ಏನೆಂದರೆ ಪಾರ್ಟ್‌- 2 ಅಂತ್ಯದಲ್ಲಾಗಲೇ ಕಥಾನಾಯಕ ಮಗುವನ್ನು ದತ್ತು ತಗೊಂಡಿದ್ದನಂತೆ. ಇದು ಇಂಟರ್‌ನೆಟ್ ಯುಗ. ಅವರು ಕತೆಯನ್ನು ಮೊದಲೇ ಸೃಷ್ಟಿಸಿಕೊಂಡಿದ್ದರೆ ಈಗಲೂ ಅದನ್ನು ನಿರೂಪಿಸಬಹುದು. ಗಂಡ - ಹೆಂಡತಿ ಪರಸ್ಪರ ಮೆಸೇಜು, ಈಮೇಲು ಅಥವಾ ಗೂಗಲ್ ಡ್ರೈವಿನಲ್ಲಿ ಫೈಲ್ ಹಿಸ್ಟರಿ.. ಪೂರ್ತಿ ಕತೆಯೇ ಆಗಬೇಕಿಲ್ಲ.. ಒಂದೇ ಒಂದು ಸಾಲು ಚರ್ಚಿಸಿರುವ ದಾಖಲೆ ಸಿಕ್ಕರೂ ಸಾಕು. ಅಲ್ಲಿಗೆ ಒಂದೇ ಅಂಶ ಇಬ್ಬರಿಗೂ ಏಕಕಾಲದಲ್ಲಿ ಹೊಳೆದಿರಲು ಸಾಧ್ಯವೆಂದು ಒಪ್ಪಬಹುದು. ಇದು ಸಾಧ್ಯ, ಯಾಕೆಂದು ಮುಂದೆ ಹೇಳ್ತೇನೆ. ನಾಲ್ಕು ವರ್ಷಗಳಿಂದ ಅಷ್ಟೊಂದು ವರ್ಷನ್‌ಗಳನ್ನು ಬರೆದಿರುವವರು ಇಬ್ಬರ ಲ್ಯಾಪ್‌ಟಾಪ್‌ನಲ್ಲಿ ಎಲ್ಲಿಯಾದರೂ ಹಳೆಯ ಟೈಂ ಸ್ಟ್ಯಾಂಪ್‌ನ ಕಡತವಾದರೂ ಇದ್ದಿರಬೇಕು.

ಇಂಟರ್‌ನೆಟ್‌ ಯುಗದಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಇರುವುದರಿಂದ, ಒಂದೇ ಬಗೆಯ ಸುದ್ದಿಗಳಿಗೆ, ಚರ್ಚೆಗಳಿಗೆ ಇಂದ್ರಿಯಗಳನ್ನು ತೆರೆದುಕೊಳ್ಳುವುದರಿಂದ ಏಕಕಾಲದಲ್ಲಿ ಒಂದೇ ಸಂಗತಿ ಹಲವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಖಂಡಿತ ಇದೆ. ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ನನಗೆ ಅನ್ನಿಸಿದ್ದನ್ನೇ ಇನ್ಯಾರೋ ಟೈಪು ಮಾಡಿರುತ್ತಾರೆ. ನಾನು ಯೋಚಿಸಿದ್ದನ್ನೇ ಇನ್ಯಾರೋ ಯೋಚಿಸುತ್ತಿರುತ್ತಾರೆ. ಇದರಲ್ಲಿ ಸಾಕಷ್ಟು ಸೋಷಿಯಲ್ ಮೀಡಿಯಾಗಳ ಅಲ್ಗೋರಿತಂಗಳ ಪ್ರಭಾವ ಇರುತ್ತದೆ. ಒಂದೇ ಬಗೆಯ ಅಭಿರುಚಿಯುಳ್ಳವರಿಗೆ ಒಂದೇ ಬಗೆಯ ವಸ್ತುಗಳನ್ನು ತೋರಿಸುತ್ತಿರುತ್ತವೆ.

ಒಂದು ವೇಳೆ ಕೃಷ್ಣ ಅವರು ಕದ್ದಿಲ್ಲದಿದ್ದರೂ ರಾಘವೇಂದ್ರ ಅವರಿಗೆ ನಷ್ಟವಂತೂ ಆಗಿದೆ. ಅವರು ಇನ್ನೆಂದೂ ಆ ಕತೆಯನ್ನು ಸಿನಿಮಾ ಮಾಡಲಾರರು. ಅದನ್ನು ಕೃಷ್ಣ ಅವರು ಆಗಲೇ ಮಾಡಿಯಾಗಿದೆ. ಎಗೇನ್, ಕೃಷ್ಣ ಅವರು ಕೊಡುತ್ತಿದ್ದ ಕ್ಯಾನ್ಸರ್‌ ಉದಾಹರಣೆ ಶುದ್ಧ ಉಡಾಫೆ, ತನ್ನ ಸಹೋದ್ಯೋಗಿಗೆ ಮಾಡುವ ಅವಮಾನ.
ತಾನು ನಂಬಿಕೆಯಿಟ್ಟು ಒಬ್ಬ ನಟರಿಗೆ ಹೇಳಿದ ಕತೆ, ಆ ನಟರಿಂದಲೇ ಕೆಲವೇ ವರ್ಷಗಳಲ್ಲಿ ಸಿನಿಮಾ ಆಗಿರುವುದರಿಂದ ರಾಘವೇಂದ್ರ ಅವರ ಆರೋಪಕ್ಕೆ ಬೆಲೆಯಿದೆ. ಅಷ್ಟನ್ನು ನಾವೆಲ್ಲರೂ ಗೌರವಿಸಬೇಕು. ಅವರು ಜನತಾ ನ್ಯಾಯಾಲಯಕ್ಕೆ ಬಂದಿರುವುದರಿಂದ.

ಹಾಗಾದರೆ ಕೃಷ್ಣ ತಪ್ಪು ಮಾಡಿಲ್ಲದಿದ್ದರೆ ಅವರಿಗೆ ಇದರಿಂದ ನಷ್ಟ ಮತ್ತು ಅವಮಾನ ಅಲ್ಲವೇ?: ಅದು ನಿಜ, ಇದಕ್ಕೆ ಸರಿಯಾದ ಮಾರ್ಗ ಮೇಲೆ ಹೇಳಿದ ಹಾಗೆ ಸಾಕ್ಷಿಗಳ ಮೂಲಕ ಆರೋಪ ಮುಕ್ತರಾಗುವುದು ಅಥವಾ ಆರೋಪ ಬಂದಕೂಡಲೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು. ಸಾಮಾನ್ಯ ಜನರಾದ ನಾವು ಇಬ್ಬರಿಗೂ ಕಿವಿಯಾಗಬಹುದು, ಸಂತೈಸಬಹುದು, ಧೈರ್ಯ ತುಂಬಬಹುದು, ಕೈಲಾದ ಸಹಾಯ ಮಾಡಬಹುದು, ಮಾಧ್ಯಮಗಳು ಸಮಾನ ವೇದಿಕೆ ಒದಗಿಸಬಹುದು ಹಾಗೂ ತಿಳಿದವರು ಹಿರಿಯರು ಇಬ್ಬರನ್ನೂ ಬಲ್ಲವರು ಸಮನ್ವಯ ಸಾಧಿಸಲು ಪ್ರಯತ್ನಿಸಬಹುದು. ಆದರೆ ಕೆಲವು ಮಾಧ್ಯಮಗಳಿಗೆ ಏನಾಗಿದೆ ? ಇವರ ಸಂದರ್ಶನ ನೋಡಿದ ನಂತರ ಕೃಷ್ಣ ಮತ್ತು ಮಿಲನ ಅವರ ಸಂದರ್ಶನ ಹೋಗಿ ನೋಡಿದೆ. ಕೃಷ್ಣ ಅವರು ಹಾರಿಸಿದ ಜೋಕಿಗೆ ಅಲ್ಲಿದ್ದವರು ಗಹಗಹಿಸಿ ನಗುತ್ತಿದ್ದರು.

ನೋಡಿ ಮತ್ತೊಮ್ಮೆ ಹೇಳ್ತೇನೆ, ಪಾಪ ಕೃಷ್ಣ-ಮಿಲನ ದಂಪತಿಗಳು ನಿರ್ದೋಷಿಗಳೇ ಇದ್ದಿರಬಹುದು ನನಗೆ ಅವರ ಮೇಲೆ ಯಾವುದೇ ಅಭಿಪ್ರಾಯ ಇಲ್ಲ; ಆದರೆ ಸುಂದರವಾದ ಮುಖ ಹೊಂದಿದ್ದಾರೆ ಅಂತನೋ, ಯಶಸ್ಸು ಜೊತೆಗಿದೆ ಅಂತಾನೋ, ಅವರನ್ನು ಹೆಚ್ಚು ತೋರಿಸಿದರೆ ಟಿಆರ್‌ಪಿ ಜಾಸ್ತಿ ಸಿಗುತ್ತೆ ಅಂತಾನೋ ಹೋಗಿ ಅವರು ಹಾರಿಸಿದ ಜೋಕಿಗೆ ನಕ್ಕಿದ್ದರೆ ನಿಮ್ಮಂತ ಜನ ಜಗತ್ತಿನಲ್ಲಿ ಇನ್ನಿಲ್ಲ. ಇಬ್ಬರು ಪಾರ್ಟಿಗಳು ಮಾನಾವವಮಾನ ಪ್ರಶ್ನೆ ಇಟ್ಟುಕೊಂಡು ಜನತಾ ನ್ಯಾಯಾಲಯದ ಎದುರು ಕೂತಿದ್ದಾಗ ನೀವು ಒಬ್ಬರ ಎದುರು ಮೈಕಿಟ್ಟು ಲಾಯರಿನಂತೆ ಪ್ರಶ್ನೆ ಬೀಸುತ್ತ ಇನ್ನೊಬ್ಬರ ಎದುರು ಕಳ್ಳೆಪುರಿ ಮೇಯುತ್ತ ಗಹಗಹಿಸಿ ನಗುವುದು ಇದೆಯಲ್ಲಾ, ಖಂಡಿತ ಕೂಡದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+