Bigg Boss Kannada: ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್ ಎಂಟ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 11 ನಾಳೆ ( ಭಾನುವಾರ) ಆರಂಭವಾಗುತ್ತಿದೆ. ಆದರೆ ಕಳೆದ ಹತ್ತು ವರ್ಷದಲ್ಲಿ ಇದೇ ಮೊದಲ ಬಾರಿ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗುತ್ತಿದೆ. ಮೊದಲ ಸ್ಪರ್ಧಿಯಾಗಿ ನಟಿ ಗೌತಮಿ ಜಾಧವ್ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ಇನ್ನೂ ಎರಡನೇ ಸ್ಪರ್ಧಿ ವಕೀಲರೊಬ್ಬರು ಬಿಗ್ ಬಾಸ್ ಮನೆಗೆ ಹೋಗುತ್ತಿದ್ಧಾರೆ.
ಸಿಟ್ಟಿನ ವ್ಯಕ್ತಿತ್ವ, ಮಾತುಗಾರ. ಏಕವಚನ, ಅಶ್ಲೀಲ ಪದಗಳು ಅವರಿಗೆ ತೀರಾ ಸಾಮಾನ್ಯ ಎಂಬುದು ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿದರೆ ತಿಳಿಯುತ್ತದೆ. ಬಿಗ್ ಬಾಸ್ ಮನೆಯ ಈ ಬಾರಿ ಲಾಯರ್ ಜಗದೀಶ್ ಎರಡನೇ ಸ್ಪರ್ಧಿಯಾಗಿದ್ದಾರೆ. ಲಾಯರ್ ಜಗದೀಶ್ ಅವರು ಮದುವೆಯಾಗಿದ್ದಾರೆ. ಆದರೆ ಅವರಿಗೆ ಡಿವೋರ್ಸ್ ಆಗಿದ್ದು, ಪತ್ನಿ ಹಾಗೂ ಮಗ ಅವರಿಂದ ದೂರ ಇದ್ದಾರೆ.

ಫೇಸ್ಬುಕ್ ಲಾಯರ್' ಎಂದು ಟೀಕಾಕಾರರಿಂದ ಕರೆಸಿಕೊಳ್ಳುವ, ತಮ್ಮ ವಕೀಲಿಕೆಗಿಂತಲೂ ಸಾಮಾಜಿಕ ಜಾಲತಾಣದಿಂದ ಭಾರಿ ಹೆಸರು ಮಾಡಿರುವ ವಕೀಲ ಜಗದೀಶ್ ಅವರನ್ನು ಬಿಗ್‌ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಕಳಿಸಲಾಗುತ್ತಿದೆ. ಸಾಕಷ್ಟು ವಿಚಾರಗಳ ಕುರಿತು ಲಾಯರ್ ಜಗದೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೋರಾಟವನ್ನ ನಡೆಸಿದ್ದಾರೆ.
ಲಾಯರ್ ಜಗದೀಶ್ ಅವರು ಯುವಕರಾಗಿದ್ದಾಗ ಅವರ ಮೇಲೆ ಪೊಲೀಸರು ಸುಳ್ಳು ಕೇಳು ದಾಖಲಿಸಿ ಅವರನ್ನು ರೌಡಿ ಶೀಟರ್ ಮಾಡಿ ಅವಮಾನ ಮಾಡಿದ್ದರಂತೆ ಅಲ್ಲದೇ ದೌರ್ಜನ್ಯ ಮಾಡಿದರಂತೆ. ಇದೇ ಕಾರಣಕ್ಕಾಗಿಯೇ ಲಾಯರ್ ಜಗದೀಶ್ ಅವರು ಸ್ವಂತ ಪರಿಶ್ರಮದಿಂದ ಎಲ್ಎಲ್ಬಿ ಓದಿ ಅವರ ಕೇಸುಗಳನ್ನು ಅವರೇ ವಾದಿಸಿದರಂತೆ. ಆ ನಂತರ ಸಾಮಾಜಿಕ ಹೋರಾಟಕ್ಕೂ ಧುಮುಕಿದ್ದಾರೆ.
ಇನ್ನೂ ಈ ಹಿಂದೆ ಪುನೀತ್ ಕೆರೆಹಳ್ಳಿ ವಿರುದ್ಧ ಅವರ ಸಾಮಾಜಿಕ ಜಾಲತಾಣದ ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರೂ ಸಹ ಪರಸ್ಪರರ ಬಗ್ಗೆ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಅದಾದ ಬಳಿಕ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಪ್ರಕರಣದಲ್ಲಿಯೂ ಸಹ ಜಗದೀಶ್ ಸುದ್ದಿಯಾಗಿದ್ದರು. ಸಂತ್ರಸ್ಥೆಯ ಪರವಾಗಿ ನಿಂತಿದ್ದ ಜಗದೀಶ್, ಸಂತ್ರಸ್ತೆಯನ್ನು ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಕರೆತರುವ ಕೆಲಸ ಮಾಡಿದ್ದರು.
ಇತ್ತೀಚೆಗೆ ನಟ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿ ಮಾಡಿದ್ದರು. ಅಲ್ಲದೇ ಅತ್ಯಾಚಾರ ಪ್ರಕರಣದ ಕುರಿತು ಶಾಸಕರಾದ ಮುನಿರತ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹೆಚ್ಚು ಗಲಾಟೆಗಳಾಗುವುದು ಮಾತ್ರ ಗ್ಯಾರಂಟಿ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಜೋರಾಗಿ ಕಿರುಚಾಡುವ, ಜಗಳವಾಡುವ ವ್ಯಕ್ತಿಗಳನ್ನು ಆರಿಸಿ ಬಿಗ್‌ಬಾಸ್ ಮನೆ ಒಳಗೆ ಕಳಿಸುತ್ತದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೊಡ್ಡ ಬಾಯಿಯಿಂದ, ಜಗಳ ಮಾಡಿಕೊಳ್ಳುವ ವ್ಯಕ್ತಿತ್ವದಿಂದಲೇ ಚಿರಪರಿಚಿತರಾದ ವ್ಯಕ್ತಿ ಲಾಯರ್ ಜಗದೀಶ್ ಅವರನ್ನ ಬಿಗ್‌ಬಾಸ್ ಮನೆಯ ಒಳಗೆ ಕಳಿಸುತ್ತಿದೆ.












Click it and Unblock the Notifications