'ನನ್ನ ಹತ್ತಿರ ಮೊಬೈಲೂ ಇಲ್ಲ..ಬಾಯ್ ಫ್ರೆಂಡೂ ಇಲ್ಲ'
ಪ್ರಸ್ತುತ ಪ್ರಸಾರ ಕಾಣುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಾಯಕಿ ಲಕ್ಷ್ಮಿ ಪಾತ್ರಧಾರಿ ಭೂಮಿಕಾ ರಮೇಶ್ ಮೊದಲ ಬಾರಿಗೆ ಮದುವೆ, ಪ್ರೀತಿ, ಪ್ರೇಮ, ಬಾಯ್ ಫ್ರೆಂಡ್ ಹಾಗೂ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ವಿಶ್ವ ವಾಣಿ ಟಿವಿ ಸ್ಪೆಷಲ್ ಜೊತೆ ಮಾತನಾಡಿದ ಅವರು, 'ನನ್ನ ಹತ್ತಿರ ಮೊಬೈಲ್ ಇಲ್ಲ. ಕೆಲವೊಮ್ಮೆ ಅಮ್ಮನ ಮೊಬೈಲ್ ನನ್ನ ಹತ್ತಿರ ಇರುತ್ತದೆ. ಅಗತ್ಯ ಇದ್ದಾಗ ಅಮ್ಮ ಮೊಬೈಲ್ ಕೊಟ್ಟು ಹೋಗುತ್ತಾರೆ. ಬಾಯ್ ಫ್ರೆಂಡ್ ಯಾಕಿಲ್ಲ ಅಂದರೆ ಮೊದಲನೆಯದು ನನ್ನ ಹತ್ತಿರ ಮೊಬೈಲ್ ಇಲ್ಲ. ಎರಡನೇಯದು ನನಗೆ ಅದಕ್ಕೆ ಸಮಯ ಸಿಗಲಿಲ್ಲ. ಒಂದು ಸಂಬಂಧದಲ್ಲಿ ಎಲ್ಲರೂ ಅದನ್ನೇ ಸಹ ನಿರೀಕ್ಷೆ ಮಾಡುವುದು. ಸಮಯ ಕೊಡಬೇಕು, ಫೋನ್‌ನಲ್ಲಿ ಮಾತನಾಡಬೇಕು ಅಂತೆಲ್ಲಾ ಇರುತ್ತದೆ. ಆದರೆ ನನಗೆ ವೈಯಕ್ತಿಕವಾಗಿ ಇದಕ್ಕೆಲ್ಲಾ ಸಮಯವೇ ಇಲ್ಲ' ಎಂದರು.

'ಚಿಕ್ಕ ವಯಸ್ಸಿನಿಂದಲೂ ಶಾಲೆಯಿಂದ ಬಾ, ಡಾನ್ಸ್ ಕ್ಲಾಸ್‌ಗೆ ಹೋಗು, ಜಿಮ್ನ್ಯಾಸ್ಟಿಕ್ ಕ್ಲಾಸ್‌ಗೆ ಹೋಗು, ಮತ್ತೆ ಬೆಳಗ್ಗೆ ಎಂದು ಶಾಲೆಗೆ ಹೋಗು ಇದು ನನ್ನ ದಿನಚರಿ ಆಗಿತ್ತು. ಕಾಲೇಜಿನಲ್ಲಿ ಹೇಗಾಯ್ತು ಅಂದರೆ ಲಿಟಲ್ ಮಿಸ್ ಮೊನಾಲಿಸಾ ಅವಾರ್ಡ್ ಸಿಕ್ಕಿತು ನನಗೆ. ಈ ಟ್ರೈನಿಂಗ್‌ಗೆ ನಾನು ಒರಿಸ್ಸಾ ಹೋಗಬೇಕಿತ್ತು. ಹೀಗೆ ಈ ಕ್ಷೇತ್ರದಲ್ಲಿ ಬ್ಯೂಸಿಯಾಗಿ ಆಗಿ ನಾನು ಪ್ರೀತಿ-ಪ್ರೇಮದ ಬಗ್ಗೆ ಗಮನಾನೂ ಹರಿಸಿಲ್ಲ. ಆದರೆ ಆಗುವ ಸಮಯದಲ್ಲಿ ಆಗೇ ಆಗುತ್ತದೆ ಅಂತಾ ಅಂದುಕೊಂಡು ಬಿಟ್ಟಿದ್ದೇನೆ' ಎಂದರು.
'ಪ್ರಪೋಸಲ್‌ಗಳು ಬಂದೇ ಬರುತ್ತದೆ ಅದನ್ನು ತಡೆಯಲು ಆಗಲ್ಲ. ಆದರೆ ನೇರವಾಗಿ ಬಂದು ಹೇಳುವ ಧೈರ್ಯ ಯಾರೂ ಮಾಡಿಲ್ಲ. ನಾನು ಓದಿದ್ದು, ವುಮೆನ್ಸ್ ಕಾಲೇಜ್ ಹೀಗಾಗಿ ನೇರವಾಗಿ ಯಾರೂ ಪ್ರಪೋಸ್ ಮಾಡಿಲ್ಲ. ಪರೋಕ್ಷವಾಗಿ ಮಾಡಿದ್ದಾರೆ. ನೇರವಾಗಿ ಯಾಕೆ ಮಾಡಿಲ್ಲ ಅಂದರೆ. ಎಲ್ಲರಿಗೂ ಒಂದು ಭಯ ಇತ್ತು. ನಮ್ಮಪ್ಪ ಲಾಯರ್ ಅಂತಾ. ಹೀಗೆ ಕಾಲೇಜು ಕೂಡ ಮುಗಿದು ಹೋಯ್ತು.ಈಗ ಹೇಗಾಗಿದೆ ಅಂದರೆ ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವುದಿದೆ' ಎಂದು ಹೇಳಿದರು.

ಇನ್ನು ತಮ್ಮ ಬಾಳ ಸಂಗಾತಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ ಭೂಮಿಕಾ ರಮೇಶ್, 'ತಮ್ಮ ಹುಡುಗ ಹೀಗೆ ಇರಬೇಕು ಎಂದು ಎಲ್ಲರಿಗೂ ನಿರೀಕ್ಷೆ ಇರುತ್ತದೆ. ನನಗೂ ಕೆಲವು ನಿರೀಕ್ಷೆಗಳಿವೆ. ನಾನು ಟ್ರೆಡಿಶನಲ್ ಹುಡುಗಿ ಅಂತಾ ಎಲ್ಲರಿಗೂ ಗೊತ್ತು. ಹೀಗಾಗಿ ಆ ರೀತಿನೇ ನಾನು ಆಲೋಚನೆ ಮಾಡಿದ್ದೇನೆ. ಎಲ್ಲರ ಮನೆಯಲ್ಲೂ ಮನಸ್ತಾಪಗಳು ಸಾಮಾನ್ಯವಾಗಿರುವುದರಿಂದ ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಒಂದು ವೇಳೆ ಒಂದು ದಿನ ನಾನು ನನ್ನ ಹುಡುಗನನ್ನು ನಿಲ್ಲಿಸಿಕೊಂಡು ನಾನು ಮುಖ್ಯನಾ ನಿಮ್ಮ ಅಮ್ಮ ಮುಖ್ಯನಾ ಎನ್ನುವ ಪರಿಸ್ಥಿತಿ ಬಂದರೆ ಅವನು ನನ್ನ ಅಮ್ಮನೇ ಮುಖ್ಯ ಎಂದು ಹೇಳಬೇಕು. ಆ ರೀತಿಯ ಹುಡುಗ ಆಗಿರಬೇಕು' ಎಂದರು.
'ಅವನಿಗೆ ನಾನು ಮುಖ್ಯ ಎನ್ನುವುದಾಗಿದ್ದರೆ ಖಂಡಿತಾ ಮುಂದೊಂದು ದಿನಾ ಅವನು ನನ್ನನ್ನೂ ಬಿಟ್ಟು ಬಿಡುತ್ತಾನೆ. ಯಾಕೆಂದರೆ ಮೊದಲಿನಿಂದಲೂ ಜೊತೆಗಿರುವ ಅಮ್ಮನನ್ನು ಬಿಟ್ಟು ನಾನು ಅಂತಾ ಹೇಳುತ್ತಿದ್ದಾನೆ ಅಂದರೆ ಮುಂದೊಂದು ದಿನಾ ನನ್ನನ್ನು ಬಿಡುತ್ತಾನೆ ಅಂತಾ. ಹೀಗಾಗಿ ಫ್ಯಾಮಿಲಿ ಹುಡುಗ ಆಗಿರಬೇಕು..ಫ್ಯಾಮಿಲಿಗೆ ಸಮಯ ಕೊಡುವ ಹುಡುಗ ಆಗಿರಬೇಕು. ನನ್ನ ತಂದೆ-ತಾಯಿಗೂ ವಯಸ್ಸಾಗುತ್ತದೆ ಅವರನ್ನೂ ಮಕ್ಕಳ ರೀತಿ ನೋಡಿಕೊಳ್ಳಬೇಕಾದ ಸಮಯ ಬರುತ್ತದೆ. ಆಗ ನಾನು ಅವರಿಗೆ ತಾಯಿಯಾದರೆ ಅವನು ತಂದೆ ಸ್ಥಾನ ಕೊಡುವವನಾಗಿರಬೇಕು' ಎಂದು ಹೇಳಿದರು.












Click it and Unblock the Notifications