Bro Gowda: ಎಂಟು ವರ್ಷದ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದೇಕೆ ಬ್ರೋ ಗೌಡ?

ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಶಮಂತ್ ಗೌಡ (ಬ್ರೋ ಗೌಡ) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪ್ರೇಮಿಗಳ ದಿನದಂದು ಶಮಂತ್ ಗೌಡ ತನ್ನ ಪ್ರೇಯಸಿ ಮೇಘನಾ ಅವರನ್ನು ಪರಿಚಯಿಸಿದ್ದರು. ವೃತ್ತಿಯಲ್ಲಿ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಮೇಘನಾ ಅವರ ಜೊತೆ ಫೆಬ್ರವರಿ 16ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಶಮಂತ್ ಗೌಡ ಮೊದಲ ಬಾರಿಗೆ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ.

ವಿಶ್ವವಾಣಿ ಟಿವಿ ಸ್ಪೆಷಲ್ ಯೂಟ್ಯೂಬ್ ಚಾನೆಲ್‌ ಜೊತೆ ಮಾತನಾಡಿದ ಅವರು, ನಾವು ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಯಾರಿಗೂ ಹೇಳದೇ ಆ ಸಿಕ್ರೇಟ್‌ಅನ್ನು ಕಾಪಾಡಿಕೊಂಡಿದ್ದೆವು. ಕಾಲೇಜಿನಲ್ಲಿ ನನ್ನ ಸ್ನೇಹಿತರದು ಗೆಟ್‌ ಟುಗೆದರ್‌ ಇತ್ತು. ಅದೇ ಸಮಯದಲ್ಲಿ ಫೆಸ್ಟ್‌ ಕೂಡ ನಡೆಯುತ್ತಿತ್ತು. ಆ ಫೆಸ್ಟ್‌ಗೆ ಹೋದಾಗ ಅಲ್ಲಿ ಅವರ ಪರಿಚಯ ಆಯ್ತು. ಅಲ್ಲಿಂದ ಮುಂದುವರಿದು ಇಲ್ಲಿದೆ ಬಂದಿದೆ. ಹಿಂದೆ ತಿರುಗಿ ನೋಡಿದಾಗ ಎಂಟು ವರ್ಷ ಆಗಿ ಬಿಟ್ಟಿದೆ. ಇದು ಸೂಕ್ತವಾದ ಸಮಯ ಎಂದುಕೊಂಡು ಮನೆಯಲ್ಲಿ ಒಪ್ಪಿಸಿ ಎಲ್ಲರಿಗೂ ಹೇಳಿದೆವು ಎಂದರು.

Lakshmi Baramma Serial Actor Bro Gowda Love Story

ಇನ್ನು ತಮ್ಮ ಭಾವಿ ಪತ್ನಿ ಮೇಘನಾ ಬಗ್ಗೆ ಮಾತನಾಡಿದ ಶಮಂತ್ ಗೌಡ, 'ಅವರು ಸಿಕ್ಕಾಪಟ್ಟೆ ಆ್ಯಕ್ಟಿವ್‌. ನಾನು ಡಲ್‌ ಆಗಿದ್ದಾಗ ಅವರೇ ನನ್ನನ್ನು ಆ್ಯಕ್ಟಿವ್‌ ಮಾಡಿಸುತ್ತಾರೆ. ಅವರು ನನಗಿಂತ ಬ್ಯೂಸಿ. ಅವರಿಗೆ ದಿನೇ ಕೆಲಸ ಇದ್ದೇ ಇರುತ್ತದೆ. ನಾನು ಅವರು ಸಿಗುವುದು ತುಂಬಾ ಕಡಿಮೆ ಸಮಯ. ಆದರೆ ಸಿಗೋ ಸಮಯ ತುಂಬಾ ಚೆನ್ನಾಗಿರುತ್ತದೆ. ನಾನು ಬಿಗ್‌ ಬಾಸ್‌ಗೆ ಹೋದಾಗ ನನ್ನ ಸಂಪೂರ್ಣ ಬಟ್ಟೆ, ನನ್ನ ಮೇಕಪ್‌ ಕಿಟ್‌, ಮತ್ತೆ ದಿನಾ ಬಳಸುವ ವಸ್ತುಗಳು ಜೊತೆ ನನ್ನ ಸೋಶಿಯಲ್ ಮೀಡಿಯಾ ಹೀಗೆ ಪ್ರತಿಯೊಂದು ಸಂಪೂರ್ಣವಾಗಿ ಅವರೇ ನೋಡಿಕೊಂಡಿದ್ದು' ಎಂದು ಹೇಳಿದರು.

'ನಮ್ಮ ಪ್ರೀತಿ ವಿಚಾರ ಕೆಲವು ಆತ್ಮೀಯರಿಗೆ ಗೊತ್ತಿತ್ತು ಆದರೆ ನಾನೇ ಬಾಯಿ ಮುಚ್ಚಿಸಿದ್ದೆ. ನಾನು ಯಾವುದೋ ಒಂದು ಒಳ್ಳೆ ಕೆಲಸ ಆಗಬೇಕು ಎಂದರೆ ಮೊದಲೇ ಯಾರಿಗೂ ಹೇಳುವುದಿಲ್ಲ. ಸಿನಿಮಾ ಕೂಡ ಅಷ್ಟೇ ಎಲ್ಲಾ ಒಕೆಯಾಗಿ ಶುರುವಾಗುವ ಸಮಯ ಬಂದರೂ ನಾನು ಯಾರಿಗೂ ಹೇಳಿರಲಿಲ್ಲ. ಮೊದಲಿನಿಂದಲೂ ಕೆಲಸ ಮಾಡಿದ ಮೇಲೆ ಹೇಳೋಣ ಎನ್ನುವುದು ನಾನು ರೂಢಿಸಿಕೊಂಡು ಬಂದಿರುವುದು' ಎಂದು ಶಮಂತ್‌ ಗೌಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+