ಜಾಮೀನು ರಿಜೆಕ್ಟ್..ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೇ ಪವಿತ್ರಾ ಗೌಡ ಪುತ್ರಿ ಭಾವುಕ ಪೋಸ್ಟ್ ವೈರಲ್‌

ಬೆಂಗಳೂರು, ಸೆಪ್ಟೆಂಬರ್‌ 04: ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್‌ ಜೊತೆ ಆಪ್ತೆ ನಟಿ ಪವಿತ್ರಾ ಗೌಡ ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿದೆ. ದರ್ಶನ್‌ ಸೇರಿದಂತೆ ನ್ಯಾಯಾಂಗ ಬಂಧನದಲ್ಲಿರುವ ಒಟ್ಟು 17 ಮಂದಿಗೆ ಜಾಮೀನು ಸಿಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬದಲಿಗೆ ದರ್ಶನ್ ಬಳ್ಳಾರಿ ಜೈಲು ಸೇರಿದ್ದರೆ ಉಳಿದವರು ರಾಜ್ಯದ ಬೇರೆ ಬೇರೆ ಜೈಲು ಸೇರಿದ್ದಾರೆ.

ಇತ್ತ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಬಿಡುಗಡೆಗೆ ಕುಟುಂಬಸ್ಥರು ಶತಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿ ವಜಾವಾಗಿದ್ದು, ಕುಟುಂಬಸ್ಥರು ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಈ ಮಧ್ಯೆ ತಾಯಿಯಿಂದ ದೂರಾಗಿ ಅಜ್ಜಿ ಆಶ್ರಯದಲ್ಲಿರುವ ಪವಿತ್ರಾ ಗೌಡ ಮಗಳು ಖುಷಿ ಗೌಡ ಅಮ್ಮನನ್ನು ನೆನೆದು ಆಗಾಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

Kushi gowda Shares Emotional Post About Her Mother Pavithra Gowda

ತಾಯಿಯಿಂದ ದೂರಾಗಿರುವ ನೋವನ್ನು ಖುಷಿ ಗೌಡ ಇನ್​ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಹೊರ ಹಾಕುತ್ತಿರುತ್ತಾಳೆ. ಇದೀಗ ಖುಷಿ ತನ್ನ ತಾಯಿ ಬಗ್ಗೆ ಹಾಕಿದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತದೆ. 'ಯಾವುದೇ ಪರಿಸ್ಥಿತಿಯಲ್ಲಿದ್ದರೂ ಅವಳು ನನಗೆ ಸಹಾಯ ಮಾಡುತ್ತಾಳೆ. ನನಗೆ ಗೊತ್ತು ಈ ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ನನ್ನ ಜೊತೆಗೆ ಇದ್ದಾಳೆ ಎಂದು. ಹೀಗಾಗಿಯೇ ಆಕೆ ಬೆಸ್ಟ್‌ ಅಮ್ಮ. ನಿನ್ನನ್ನು ತಾಯಿಯಾಗಿ ಪಡೆಯುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ' ಎಂದು ಖುಷಿ ಬರೆದುಕೊಂಡಿದ್ದಾಳೆ.

ಇನ್ನು ಈ ಹಿಂದೆ ಕೂಡ ಖುಷಿ, ತನ್ನ ತಾಯಿ ಪವಿತ್ರಾ ಗೌಡ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದು, 'ಅವಳು ನನ್ನ ಪ್ರೇರಣೆ, ಎಂತಹದ್ದೇ ಪರಿಸ್ಥಿತಿ ಬಂದರೂ ಗಟ್ಟಿಯಾಗಿರಬೇಕು ಎಂದು ಆಕೆ ನನಗೆ ಕಲಿಸಿಕೊಟ್ಟಿದ್ದಾಳೆ. ಅವಳು ಯಾವಾಗಲೂ ತುಂಬಾ ಮುಕ್ತವಾಗಿ ಇರುತ್ತಾಳೆ ಹಾಗೂ ಸದಾ ನನಗೆ ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು. ನನ್ನ ತಾಯಿಯಂತೆ ಯಾರೂ ಇಲ್ಲ. ಅವಳಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ಅದೃಷ್ಟವಂತೆ. ಹಾಗೂ ಅವಳ ಮಗಳಾಗಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ' ಎಂದು ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಳು.

Kushi gowda Shares Emotional Post About Her Mother Pavithra Gowda

ಫ್ಯಾಷನ್ ಡಿಸೈನರ್ ಆಗಿರುವ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್‌ ಕಾರ್ಪೆಟ್‌ 777 ಶಾಪ್ ಅನ್ನು ಖುಷಿ ಗೌಡ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿರುವ ಈ ರೆಡ್‌ ಕಾರ್ಪೆಟ್‌ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಖುಷಿ ಗೌಡ ಮೇಲಿದೆ. ಮನೆಯ ಹಿರಿಯರ ಹಾಗೂ ತಾಯಿ ಆಪ್ತರ ಬೆಂಬಲದೊಂದಿಗೆ ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಖುಷಿ ಗೌಡ ರೆಡ್‌ ಕಾರ್ಪೆಟ್‌ 777 ಇನ್​ಸ್ಟಾಗ್ರಾಮ್‌ನಲ್ಲಿ ತಮ್ಮ ಶಾಪ್‌ನ ಅಪ್ಡೇಟ್‌ಗಳನ್ನು ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+