Kipi Keerthi: ಕಿಪಿ ಕೀರ್ತಿಗೆ ದಿಢೀರ್ ಆಘಾತ, ಮತ್ತೆ ಕೈಕೊಟ್ಟು ಹೋದನಂತೆ ಆತ...

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆ ನಡೆಯುತ್ತಿದ್ದು ಲವ್ ಸ್ಟೋರಿ ಫುಲ್ ಟ್ರೆಂಡ್ ಆಗ್ತಿವೆ. ಒಂದು ಕಡೆ ನನ್ನ ಹೆಂಡತಿ ಬಿಟ್ಟು ಓಡಿ ಹೋಗಿದ್ದಾಳೆ, ಅವಳನ್ನ ವಾಪಸ್ ಬರೋದಕ್ಕೆ ಹೇಳಿ ಅಂತಾ ಒಬ್ಬ ಗಂಡ ಹೇಳಿದ್ರೆ. ಇನ್ನೊಂದು ಕಡೆ ನನ್ನ ಲವರ್ ಕೈಕೊಟ್ಟು ಓಡಿ ಹೋದಳು, ನೀವು ಹುಡುಗಿರನ್ನ ನಂಬಬೇಡಿ ಅಂತಾ ಪುಂಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹ ಸಮಯದಲ್ಲೇ ನಂದೂ ಒಂದು ಲವ್ ಸ್ಟೋರಿ ಇದೆ ಅಂತಾ ಕಿಪಿ ಕೀರ್ತಿ ಕಂಬ್ಯಾಕ್ ಮಾಡಿದ್ದು, ಕಿಪಿ ಕೀರ್ತಿಗೆ ದಿಢೀರ್ ಆಘಾತವಾಗಿದೆ ಅಂತೆ!

ಹೌದು, ಕಿಪಿ ಕೀರ್ತಿ ತನ್ನ ಲವರ್ ವಿಚಾರವಾಗಿ ಮಾತನಾಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದೂ ಆಗಿತ್ತು. ಆ ನಂತರ ಕಿಪಿ ಕೀರ್ತಿ ತನ್ನ ಲವರ್ ಜೊತೆಗೆ ರಾಜಿ ಮಾಡಿಕೊಂಡು ಇಬ್ಬರೂ ಒಟ್ಟಿಗೆ ವಿಡಿಯೋ ಕೂಡ ಮಾಡಿದ್ದರು. ಹೀಗಿದ್ದಾಗ ಕಿಪಿ ಕೀರ್ತಿ ಬಾಳು ಇದೀಗ ಸರಿ ಹೋಯ್ತು ಬಿಡು ಅಂತಾ ಫಾಲೋವರ್ಸ್ ಅಂದುಕೊಳ್ಳುವ ಸಮಯದಲ್ಲೇ ಮತ್ತೆ ಶಾಕ್ ಕೊಟ್ಟಿರುವ ಕಿಪಿ ಕೀರ್ತಿ, ತನ್ನ ನೋವನ್ನು ಒಂದು ಪೇಜ್ ತುಂಬಾ ಬರೆದುಕೊಂಡು ಪೋಸ್ಟ್ ಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸಂಚಲನ ಸೃಷ್ಟಿ ಮಾಡಿದೆ.

Kipi Keerthi Said This About Her Love And Created Trend

ಕಿಪಿ ಕೀರ್ತಿಗೆ ದಿಢೀರ್ ಆಘಾತ!

ಅಂದಹಾಗೆ ಕಿಪಿ ಕೀರ್ತಿ ಪದೇ ಪದೇ ತನ್ನ ಲವ್ ಸ್ಟೋರಿ ಬಗ್ಗೆ ಹೇಳಿಕೊಳ್ಳುತ್ತಾ ಇದ್ದಿದ್ದು ಎಲ್ಲರಿಗೂ ಗೊತ್ತಿದೆ. ಕೆಲವು ತಿಂಗಳ ಹಿಂದೆ ಕಿಪಿ ಕೀರ್ತಿ ಲವ್ ಬ್ರೇಕಪ್ ಸ್ಟೋರಿ ಭಾರಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು ಸೋಷಿಯಲ್ ಮೀಡಿಯಾದಲ್ಲಿ. ಆದರೆ ಆ ನಂತರ ಎಲ್ಲವೂ ಸರಿಯಾಗಿದೆ ಅಂತಾ ಎಲ್ಲ ಅಂದುಕೊಳ್ಳುವಾಗ ದಿಢೀರ್ ಮತ್ತೆ ಅಂತಹದ್ದೇ ಘಟನೆ ನಡೆದಿದೆಯಂತೆ. ಇನ್ನೇನು ಇಬ್ಬರೂ ಮದುವೆ ಆಗ್ತಾರೆ ಅಂದುಕೊಳ್ಳುವ ಸಮಯದಲ್ಲೇ ಕಿಪಿ ಕೀರ್ತಿ ಹೇಳಿರುವುದು ಏನು ಗೊತ್ತಾ?

ತನಗೂ & ತನ್ನ ಲವರ್‌ಗೂ ಮತ್ತೆ ಬ್ರೇಕಪ್ ಆಗಿದೆ ಅಂತಾ ಕಿಪಿ ಕೀರ್ತಿ ಸ್ಟೋರಿ ಹಾಕಿರುವುದು ಇದೀಗ ವೈರಲ್ ಆಗ್ತಿದೆ. ಅಲ್ಲದೆ ಈ ವಿಚಾರದ ಬಗ್ಗೆ ದೊಡ್ಡ ಚರ್ಚೆ ಕೂಡ ನಡೆಯುತ್ತಾ ಇದೆ. ಇನ್ಸ್ಟಾಗ್ರಾಂ ತೆಗೆದರೆ ಸಾಕು ನಮಗೆ ಇವರ ಕಾಟ ಜೋರಾಗಿದೆ ಅಂತಾ ನೆಟ್ಟಿಗರು ಆರೋಪ ಕೂಡ ಮಾಡುತ್ತಿದ್ದಾರೆ. ಹಾಗೇ, ಮತ್ತೊಂದು ಕಡೆ ಕಿಪಿ ಕೀರ್ತಿಗೆ ಬೆಂಬಲ ಕೊಡುವವರು ಕೂಡ ಇದ್ದಾರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+