Kipi Keerthi: 'ಅಮ್ಮ ಕೇಳಿಕೊಂಡ್ರೂ ಬಿಡಲಿಲ್ಲ': ಟ್ರೋಲ್‌ಗ್ರೂಪ್‌ನ ಅವಾಂತರ ಬಿಚ್ಚಿಟ್ಟ ಕಿಪಿ ಕೀರ್ತಿ

ಹಾಯ್ ಜನರೇ, ಯಾಕೆ ಜನರೇ, ಹೇಳಿ ಜನರೇ ಎಂದು ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದಿರುವ ಕಿಪಿ ಕೀರ್ತಿ, ಇದೀಗ ಕನ್ನಡ ಚಿತ್ರರಂಗದ ಸಿನಿಮಾಗಳ ಪ್ರಮೋಷನ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೇ ಹೆಸರು ಮಾಡಿರುವ ಕಿಪಿ ಕೀರ್ತಿ ಟ್ರೋಲ್‌ ಹಾಗೂ ಗ್ರೂಪ್‌ನಿಂದ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

'ಯಾರೋ ಹುಡುಗಿ ಫ್ಯಾನ್‌ ಎಂದು ಪರಿಚಯ ಆದಳು. ಅವಳು ನನ್ನ ಅಭಿಮಾನಿ ಅಂತಾ ಗ್ರೂಪ್‌ ಕ್ರಿಯೆಟ್‌ ಮಾಡಿದಳು. ನನಗೆ ಟ್ರೋಲರ್ಸ್‌ಗಳು ತುಂಬಾ ಸಪೋರ್ಟ್‌ ಮಾಡುತ್ತಾರೆ. ನನ್ನ ವ್ಯಕ್ತಿತ್ವಕ್ಕೆ ಅವರು ಗೌರವ ಕೊಟ್ಟು ತಂಗಿ ಎಂದು ಸಪೋರ್ಟ್‌ ಮಾಡುತ್ತಾರೆ. ನಾನು ಸುಮ್ಮನೆ ತಮಾಷೆಗೆ ಹೇಳುತ್ತೇನೆ ನನ್ನ ಟ್ರೋಲ್‌ ಮಾಡಿ ಅಂತಾ. ಆ ಹುಡುಗಿ ಕ್ರಿಯೆಟ್‌ ಮಾಡಿದ ಗ್ರೂಪ್‌ನಲ್ಲಿಯು ಸಹ ನನ್ನ ಅಭಿಮಾನಿ ಎಂದು ಹಾಕುತ್ತಿದ್ದರು'.

Kipi Keerthi Discusses Her Experience With Trolls And Negative Fans

'ನಾನು ಎಲ್ಲರನ್ನೂ ಮಾತನಾಡಿಸುತ್ತೇನೆ. ಆ ಗ್ರೂಪ್‌ನಲ್ಲಿ ಇದ್ದ ಟ್ರೋಲರ್‌ ನನ್ನನ್ನು ಏಕವಚನದಲ್ಲಿ ಮಾತನಾಡಿಸಿ ಏನೇನೋ ಮಾತನಾಡಿದರು. ನಾನು ಅದಕ್ಕೆ ನನಗೆ ಪರಿಚಯ ಇರುವ ಟ್ರೋಲರ್‌ ಒಬ್ಬರನ್ನು ಆ ಗ್ರೂಪ್‌ಗೆ ಸೇರಿಸಿದೆ. ಅವರು ಅವನನ್ನು ಬೈದರು. ನಾನು ಆ ಗ್ರೂಪ್‌ನಿಂದ ಲೆಫ್ಟ್‌ ಆದೆ. ಆದರೆ ಅವರು ಮತ್ತೆ ಆ್ಯಡ್‌ ಮಾಡಿ ಯಾಕೆ ಬೈಸಿದ್ದು ಅಂತೆಲ್ಲಾ ಕೇಳಿದರು. ನಾನು ಕೂಡ ನೀವ್ಯಾಕೆ ಹೀಗೆಲ್ಲಾ ಮಾತನಾಡಬೇಕು ಅಂತಾ ಪ್ರಶ್ನೆ ಮಾಡಿದೆ'.

'ಬಳಿಕ ಆ ವ್ಯಕ್ತಿ ನನ್ನನ್ನು ಟ್ರೋಲ್‌ ಮಾಡುತ್ತೇನೆ ಅಂತೆಲ್ಲಾ ಎಗುರಾಡುತ್ತಿದ್ದ. ಮೊದಲು ನಾನು ಕೇಳಿಸಿಕೊಂಡು ಸುಮ್ಮನಾಗಿದ್ದೆ. ಈ ಸಮಯದಲ್ಲಿ ನನ್ನ ವೈಯಕ್ತಿಕ ವಿಷಯಗಳನ್ನು ಅವರ ಬಳಿ ಹೇಳಿಕೊಂಡಿದ್ದೆ. ಕಷ್ಟಪಟ್ಟು ಮೇಲೆ ಬಂದಿದ್ದೀನಿ ಎಂದು ನನ್ನ ಒಂದು ಬೇಜಾರಿನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದೆ. ಈ ರೀತಿ ನಾನು ಮಾತನಾಡಿರುವುದನ್ನು ರಾತ್ರೋ ರಾತ್ರಿ ಟ್ರೋಲ್‌ ಮಾಡಿದರು. ಅದನ್ನು ನೋಡಿ ನನಗೆ ತುಂಬಾ ಬೇಜಾರಾಯ್ತು'.

Kipi Keerthi Discusses Her Experience With Trolls And Negative Fans

'ಅಭಿಮಾನಿ, ಅಕ್ಕ ಎಂದೆಲ್ಲಾ ಕರೆದುಕೊಂಡು ಈ ರೀತಿ ಎಲ್ಲಾ ಮಾಡಿದರು ಅಂತಾ ನಮ್ಮ ಅಮ್ಮನ ಬಳಿ ಹೇಳಿಕೊಂಡೆ. ಅಮ್ಮನೂ ಆ ಗ್ರೂಪ್‌ಗೆ ಬಂದು ಕೇಳಿಕೊಂಡರು. ಅಮ್ಮ ಕೇಳಿಕೊಂಡರೂ ಅವರು ಅಮ್ಮನಿಗೆ ಗೌರವನೇ ಕೊಟ್ಟಿಲ್ಲ. ಕೊನೆಯಲ್ಲಿ ಕ್ಷಮೆ ಕೇಳಿ ವಿಡಿಯೋ ಮಾಡಿ ಕೊಡಿ ಅಂದರು. ಕೊನೆಗೆ ಕ್ಷಮೆ ಕೇಳಿ ಎಲ್ಲವನ್ನೂ ಡಿಲೀಟ್‌ ಮಾಡಿದೆ' ಎಂದು ತಮಗಾದ ಕಹಿ ಅನುಭವವನ್ನು ಕಿಪಿ ಕೀರ್ತಿ ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+