Kichcha Sudeep: ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದುಕೊಳ್ಳಬೇಡಿ: ಚರ್ಚೆಗೆ ಕಾರಣವಾದ ಕಿಚ್ಚ ಸುದೀಪ್ ಹೇಳಿಕೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಅಲ್ಲಿ ಗತ್ತು, ಗಮ್ಮತ್ತು ಇರಲೇಬೇಕು. ಸದ್ಯ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಕೆಡಿ' (KD-The Devil) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಆಡಿರುವ ಒಂದು ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. "ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದುಕೊಳ್ಳಬೇಡಿ" ಎಂದು ಸುದೀಪ್ ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿದೆ.
ನಡೆದಿದ್ದೇನು?
ಧ್ರುವ ಸರ್ಜಾ ನಟನೆಯ, ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ಪತ್ರಿಕಾಗೋಷ್ಠಿ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವೇಳೆ ಸುದೀಪ್ ಅವರು ಮಾಧ್ಯಮದವರ ಪ್ರತಿಯೊಂದು ಪ್ರಶ್ನೆಗೂ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಿದ್ದರು. ಈ ವೇಳೆ ಪತ್ರಕರ್ತೆಯೊಬ್ಬರು ತಮ್ಮ ಪ್ರಶ್ನೆಯನ್ನು ಕೇಳಲು ಮುಂದಾಗಿ, "ಸರ್, ಒಂದೇ ಒಂದು ಲಾಸ್ಟ್.. ನಂದು ಮುಗಿಸಿಬಿಡ್ತೀನಿ" (ತಮ್ಮ ಪ್ರಶ್ನೆಯನ್ನು ಮುಗಿಸುತ್ತೇನೆ ಎಂಬ ಅರ್ಥದಲ್ಲಿ) ಎಂದು ಹೇಳಿದರು.

ಈ ಮಾತನ್ನು ಕೇಳಿದ ಕೂಡಲೇ ಕಿಚ್ಚ ಸುದೀಪ್ ಅವರು ವೇದಿಕೆಯಿಂದಲೇ ಏರುಧ್ವನಿಯಲ್ಲಿ "ಯಾರನ್ನ?" ಎಂದು ಪ್ರಶ್ನಿಸಿದರು. ಅಷ್ಟಕ್ಕೇ ನಿಲ್ಲದ ಅವರು, "ಕನಸಿನಲ್ಲೂ ಅನ್ಕೋಬೇಡಿ ನನ್ನನ್ನ ಮುಗಿಸ್ತೀನಿ ಅಂತ" ಎಂದು ನಗುತ್ತಲೇ ತಮಾಷೆಯಾಗಿ ಉತ್ತರ ನೀಡಿದರು. ಪತ್ರಕರ್ತರೊಬ್ಬರ ಪ್ರಶ್ನೆಗೆ ಸುದೀಪ್ ನೀಡಿದ ಪ್ರತಿಕ್ರಿಯೆ ಕೇಳಿ ಒಂದು ಕ್ಷಣ ಇಡೀ ಸಭಾಂಗಣವೇ ಸ್ತಬ್ಧವಾಗಿತ್ತು.
ಸುದೀಪ್ ಅವರ ಈ ಮಾತು ಕೇಳಿ ಪತ್ರಕರ್ತೆ ತಕ್ಷಣವೇ ಸ್ಪಷ್ಟನೆ ನೀಡಿ, "ಸರ್, ನಾನು ನನ್ನ ಪ್ರಶ್ನೆಯನ್ನು ಮುಗಿಸುತ್ತೇನೆ ಎಂದು ಹೇಳಿದ್ದು" ಎಂದರು. ಆಗ ಸುದೀಪ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ನಗೆ ಬೀರಿದರು. ಆದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಈ ಮಾತಿನ ಮೂಲಕ ಸುದೀಪ್ ಅವರು ತಮ್ಮ ವಿರೋಧಿಗಳಿಗೆ ಅಥವಾ ಚಿತ್ರರಂಗದಲ್ಲಿ ತಮ್ಮನ್ನು ತುಳಿಯಲು ನೋಡುವವರಿಗೆ ನೇರವಾದ ಎಚ್ಚರಿಕೆ ನೀಡಿದ್ದಾರೆ ಎಂಬ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

'ಕೆಡಿ' ಚಿತ್ರದಲ್ಲಿ ಕಾಲ ಭೈರವನಾಗಿ ಕಿಚ್ಚ
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರವು ಇದೇ ಏಪ್ರಿಲ್ 30 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸುದೀಪ್ ಅವರು 'ಕಾಲ ಭೈರವ' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಸುದೀಪ್ ಅವರ ಲುಕ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. 'ಕೆಡಿ' ಸಿನಿಮಾದ ಪ್ರಚಾರದ ನಡುವೆಯೇ ಸುದೀಪ್ ಅವರ ಈ "ಮುಗಿಸಿಬಿಡ್ತೀನಿ" ಎಂಬ ಕಾಲೆಳೆಯುವ ಮಾತು ಮಾತ್ರ ಗಾಂಧಿನಗರದ ಹಾಟ್ ಟಾಪಿಕ್ ಆಗಿ ಉಳಿದಿದೆ.
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ 'ಕೆಡಿ - ದಿ ಡೆವಿಲ್' ಸಿನಿಮಾದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಆಧರಿಸಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಕೇವಲ ಅತಿಥಿ ಪಾತ್ರವಾಗಿ ಉಳಿಯದೆ, ಕಥೆಗೆ ಪ್ರಮುಖ ತಿರುವು ನೀಡುವ 'ಕಾಲ ಭೈರವ' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ ಮತ್ತು ಪ್ರಚಾರದ ತುಣುಕುಗಳಲ್ಲಿ ಸುದೀಪ್ ಅವರು ರಗಡ್ ಮತ್ತು ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಶಿಷ್ಟ ಧ್ವನಿ ಮತ್ತು ಮ್ಯಾನರಿಸಂ ಈ ಪಾತ್ರಕ್ಕೆ ಹೊಸ ಆಯಾಮ ನೀಡಿದೆ. ಸುದೀಪ್ ಅವರ ಪಾತ್ರವು ಕಥೆಯಲ್ಲಿ ಬಹಳ ಪ್ರಭಾವಶಾಲಿಯಾಗಿದ್ದು, ಧ್ರುವ ಸರ್ಜಾ ಅವರ ಕೆಡಿ ಪಾತ್ರದ ಪಯಣಕ್ಕೆ ಒಂದು ಬೆಂಬಲವಾಗಿ ನಿಲ್ಲಲಿದೆ ಎಂಬ ನಿರೀಕ್ಷೆಯಿದೆ.
#KicchaSudeep:-
— Cinema Premi✍🏻 (@kalaavidanaanu) April 27, 2026
"ನನ್ನ ಲೈಫು, ನನಗೆ ಏನು ಬೇಕು - ನಾನು ಡಿಸೈಡ್ ಮಾಡ್ತೀನಿ ಶಾರದಾ, ಕಾರ್ನರ್ ಸೀಟ್ ಅಲ್ಲಿ ಕೂತಿರೋ ಯಾವ ಹುಡುಗಿಗೂ ಡಿಸೈಡ್ ಮಾಡೋಕೆ ನಾನ್ ಬಿಡಲ್ಲ."
One way to deal with a so-called senior journalist.🙂@KicchaSudeep#KD #KDTheDevil #DhruvaSarja #KichchaSudeep pic.twitter.com/EojEQHtdjT












Click it and Unblock the Notifications