ಕನ್ನಡ ಸಿನಿಮಾ ಇಂಡಸ್ಟ್ರಿ ಜಾಸ್ತಿ ದಿನ ಇರಲ್ಲ ಅಂತಾ ಕಿಚ್ಚ ಸುದೀಪ್... Bigg Boss Kiccha Sudeep
ಕನ್ನಡ ಸಿನಿಮಾ ಇಂಡಸ್ಟ್ರಿ ಇದೀಗ ನೂರಾರು ಸಮಸ್ಯೆ ಎದುರಿಸುತ್ತಿದ್ದು, ಒಂದು ಕಡೆ ಈಗ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಾ 10, 100... ಹೀಗೆ ಕೋಟಿ ಕೋಟಿ ರೂಪಾಯಿ ಲಾಸ್ ಆಗುತ್ತಿದೆ. ಸಾಲ ಮಾಡಿ, ಲೋನ್ ಪಡೆದು ನಿರ್ಮಾಪಕರು ಕನ್ನಡ ಸಿನಿಮಾಗಳಿಗೆ ಹಣ ಹಾಕಿ ಇದೀಗ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಭಯ ಹುಟ್ಟಿಸುವ ಸಮಯದಲ್ಲೇ, ಕನ್ನಡ ಸಿನಿಮಾ ಇಂಡಸ್ಟ್ರಿ ಜಾಸ್ತಿ ದಿನ ಇರಲ್ಲ ಅಂತಾ ಕಿಚ್ಚ ಸುದೀಪ್...
ಕನ್ನಡ ಸಿನಿಮಾ ಇಂಡಸ್ಟ್ರಿ 1934 ರಲ್ಲಿ ಆರಂಭವಾಗಿತ್ತು 'ಸತಿ ಸುಲೋಚನ' ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಸಂಭ್ರಮ ಆರಂಭವಾಗಿತ್ತು. ಹೀಗೆ ಹತ್ತಿರ ಹತ್ತಿರ 100 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಹೆಮ್ಮೆಯ ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ನೂರಾರು ಸಮಸ್ಯೆಗಳನ್ನ ಎದುರಿಸುತ್ತಿದೆ. ಕನ್ನಡ ಸಿನಿಮಾಗಳಿಗೆ ಸರಿಯಾಗಿ ಥಿಯೇಟರ್ ಸಿಗುತ್ತಿಲ್ಲ, ತೆಲುಗು & ತಮಿಳು ಸಿನಿಮಾಗಳಿಗೆ ಸಿಕ್ಕಾಪಟ್ಟೆ ಸ್ಕ್ರೀನ್ ಕೊಡಲಾಗುತ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗಲೇ, ಕನ್ನಡ ಸಿನಿಮಾ ಇಂಡಸ್ಟ್ರಿ ಜಾಸ್ತಿ ದಿನ ಇರಲ್ಲ ಅಂತಾ ಕಿಚ್ಚ ಸುದೀಪ್...

ಕನ್ನಡ ಸಿನಿಮಾ ಇಂಡಸ್ಟ್ರಿ ಜಾಸ್ತಿ ದಿನ...
ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 30 ವರ್ಷಗಳಿಂದಲೂ ಸಖತ್ ಆಕ್ಟಿವ್ ಆಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾ ಕೊಡುವ ಜೊತೆಗೆ, ಕನ್ನಡ ಸಿನಿಮಾಗಳ ಮಾರ್ಕೆಟ್ ಹಾಲಿವುಡ್ ಲೆವೆಲ್ ತಲಪಲು ಕಿಚ್ಚ ಸುದೀಪ್ ಅವರ ಶ್ರಮ ಕೂಡ ಇದೆ. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಬೆಳೆಸಲು ಸಾಥ್ ನೀಡಿರುವ ನಟ ಕಿಚ್ಚ ಸುದೀಪ್ ಅವರು ದಿಢೀರ್, ಕನ್ನಡ ಸಿನಿಮಾ ಇಂಡಸ್ಟ್ರಿ ಜಾಸ್ತಿ ದಿನ ಇರಲ್ಲ ಅಂತಾ ಹೇಳಿದ್ದು ಏಕೆ?
ದ್ವೇಷ & ಅಸೂಯೆ ಹರಡುತ್ತಿದ್ದರೆ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಫ್ಯಾನ್ಸ್ ವಾರ್ & ಫೈಟಿಂಗ್ ಜೋರಾಗಿದೆ. ಒಬ್ಬ ಹೀರೋ ಸಿನಿಮಾ ಬಂದ್ರೆ ಮತ್ತೊಬ್ಬ ಹೀರೋ ಅಭಿಮಾನಿಗಳು ಸಿನಿಮಾ ಹಾಳು ಮಾಡುತ್ತಾರೆ & ದ್ವೇಷ ಹರಡುತ್ತಾರೆ ಅನ್ನೋ ಗಂಭೀರ ಆರೋಪ ಇದೆ. ಹೀಗಿದ್ದಾಗಲೇ, ನಟ ಕಿಚ್ಚ ಸುದೀಪ್ ಅವರು ಕೂಡ ಸಂಚಲನ ಸೃಷ್ಟಿ ಮಾಡುವ ಹೇಳಿಕೆ ನೀಡಿದ್ದಾರೆ.
ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ಕಿಚ್ಚ ಸುದೀಪ್ ಅವರು, ನನ್ನ ಪ್ರಕಾರ ಕನ್ನಡ ಇಂಡಸ್ಟ್ರಿಯಲ್ಲಿ ಕೆಲವರು ಇದೇ ಥರ ದ್ವೇಷ & ಅಸೂಯೆ ಹರಡುತ್ತಿದ್ರೆ, ಬೇಡದ ವಿಚಾರ ಮುಂದಿಟ್ಟು ಪ್ರಾಮುಖ್ಯತೆ ಕೊಟ್ಟು ನಾವು ಮುಂದೆ ಹೋಗದೇ ಇದ್ದರೆ ಜಾಸ್ತಿ ದಿನ ಇರೋದೆ ಇಲ್ಲ ಸರ್ ಅಂತ ಹೇಳಿದ್ದಾರೆ. ಈ ಮೂಲಕ ಕನ್ನಡ ಇಂಡಸ್ಟ್ರಿಗೆ ಎದುರಾಗಿರುವ ಸಮಸ್ಯೆಗಳು & ಅದನ್ನ ಬಗೆಹರಿಸುವ ಬಗ್ಗೆ ಮಾತನಾಡಿದ್ದಾರೆ ಕಿಚ್ಚ ಸುದೀಪ್ ಅವರು.












Click it and Unblock the Notifications