Max Movie Release: ಮ್ಯಾಕ್ಸ್‌ ಸಕ್ಸಸ್‌ಗಾಗಿ ನರ್ತಕಿ ಚಿತ್ರಮಂದಿರದಲ್ಲಿ ಸುದೀಪ್‌ ಪತ್ನಿ ವಿಶೇಷ ಪೂಜೆ

ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಇಂದು ಕ್ರಿಸ್‌ಮಸ್‌ ಅಂಗವಾಗಿ ರಿಲೀಸ್‌ ಆಗಿದೆ. ಇಂದು ಮುಂಜಾನೆಯಿಂದಲೇ ಪ್ರದರ್ಶನಗಳು ಹೌಸ್‌ಫುಲ್‌ ಆಗಿದ್ದು, ಸಿನಿಮಾ ವೀಕ್ಷಿಸಿದ ಕಿಚ್ಚನ ಅಭಿಮಾನಿಗಳು ಹಬ್ಬ ಮಾಡಿದ್ದಾರೆ. ಇಂದು ರಿಲೀಸ್‌ ದಿನವಾದ ಕಾರಣ ಸುದೀಪ್‌ ಪತ್ನಿ ಪ್ರಿಯಾ ಅವರು ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ ಸಕ್ಸಸ್‌ಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

ಬೆಂಗಳೂರಿನ ನರ್ತಕಿ ಚಿತ್ರಮಂದಿರವು ಬಹುತೇಕ ಕನ್ನಡ ಸಿನಿಮಾಗಳು ಗ್ರ್ಯಾಂಡ್‌ ರಿಲೀಸ್‌ ಆಗುವ ಸ್ಥಳ ಎಂದೇ ಹೆಸರುವಾಸಿಯಾಗಿದೆ. ಹಾಗಾಗಿ ಸಿನಿಮಾ ಬಿಡುಗಡೆಯಾದ ದಿನ ಎಲ್ಲ ನಟ ನಟಿಯರು ಇಲ್ಲಿಗೆ ಭೇಟಿ ನೀಡುವುದು ವಾಡಿಕೆ. ಅಲ್ಲದೆ ಈ ಥಿಯೇಟರ್‌ನಲ್ಲಿ ಸಿನಿಮಾ ಮೊದಲ ದಿನ ಹೌಸ್‌ಫುಲ್‌ ಕಂಡರೆ ಸಿನಿಮಾ ಸಕ್ಸಸ್‌ ಪಕ್ಕಾ ಎನ್ನುವ ಲೆಕ್ಕಾಚಾರವೂ ಇದೆ.

Kiccha Sudeep Max Movie Released Wife Priya Performs Special Pooja For Success

ಹೀಗಾಗಿ ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ ಅವರು ಇಂದು ಬೆಳಿಗ್ಗೆ ಶೋ ಆರಂಭಕ್ಕೂ ಮುನ್ನ ನರ್ತಕಿ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪರದೆ ಬಿಡುವ ಪರಿಕರಗಳಿಗೆ ಹಾಗೂ ಅಲ್ಲಿದ್ದ ದೇವರ ಫೋಟೋಗಳಿಗೆ ಮಂಗಳಾರತಿ ಮಾಡುವ ಮೂಲಕ ಮ್ಯಾಕ್ಸ್‌ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ. ಬಳಿಕ ಆ ಥಿಯೇಟರ್‌ನಲ್ಲೇ ತಮ್ಮ ಕುಟುಂಬಸ್ಥರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

ಸುಮಾರು ಎರಡೂವರೆ ವರ್ಷಗಳ ಬಳಿಕ ಸುದೀಪ್‌ ಅವರ ಸಿನಿಮಾ ಬಹುಭಾಷೆಗಳಲ್ಲಿ ಇಂದು ರಿಲೀಸ್‌ ಆಗಿದೆ. ಇದು ಸುದೀಪ್‌ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವೇ ಆಗಿದೆ. ಇನ್ನು ರಾಜ್ಯದಲ್ಲೇ 250ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ತೆರೆಗೆ ಕಂಡಿದೆ ಎನ್ನಲಾಗಿದೆ. ಜೊತೆಗೆ ಮ್ಯಾಕ್ಸ್​ ಸಿನಿಮಾ ಟಿಕೆಟ್ ಕೂಡ ಭಾರೀ ಸಂಖ್ಯೆಯಲ್ಲೇ ಸೋಲ್ಡ್ ಔಟ್ ಆಗಿದ್ದು, ಕಿಚ್ಚ ಸುದೀಪ್‌ ವಿಡಿಯೋ ಶೇರ್‌ ಮಾಡಿ ಥಿಯೇಟರ್‌ನಲ್ಲಿ ಸಿಗೋಣ ಎಂದು ಕರೆ ನೀಡಿದ್ದಾರೆ.

Kiccha Sudeep Max Movie Released Wife Priya Performs Special Pooja For Success

ಮ್ಯಾಕ್ಸ್‌ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಆಫೀಸರ್‌ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಂದು ಪೊಲೀಸ್ ಠಾಣೆಯಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನೇ ಮ್ಯಾಕ್ಸ್‌ ಸಿನಿಮಾ ಪರದೆ ಮೇಲೆ ತಂದಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಗೆ ವಿಜಯ್ ಕಾರ್ತಿಕೇಯ ಆಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ಈ ಸಿನಿಮಾ ಪ್ರೊಡ್ಯೂಸ್‌ ಮಾಡಿದ್ದಾರೆ.

ಮ್ಯಾಕ್ಸ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡು, ವರಲಕ್ಷ್ಮಿ ಶರತ್​ಕುಮಾರ್​, ಪ್ರಮೋದ್​ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ. ಟೀಸರ್‌ ಹಾಗೂ ಪೋಸ್ಟರ್‌ನಲ್ಲಿ ಸುದೀಪ್‌ ಸಖತ್‌ ಮಾಸ್‌ ಆಗಿ ಕಾಣಿಸಿಕೊಂಡಿದ್ದು, ಈಗಾಗಲೇ ರಿಲೀಸ್‌ ಆಗಿರೋ ಮ್ಯಾಕ್ಸಿಮಮ್​ ಮಾಸ್​ ಸಾಂಗ್‌ ಕೂಡ ಹಿಟ್‌ ಆಗಿತ್ತು. ಇನ್ನು ಡಿಸೆಂಬರ್ 20ರಂದು ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಯುಐ ಸಿನಿಮಾ ಕೂಡ ತೆರೆಗೆ ಬಂದಿದ್ದು, ಈ ವೇಳೆ ಮ್ಯಾಕ್ಸ್‌ ಹಾಗೂ ಯುಐ ನಡುವೆ ಪೈಪೋಟಿ ಎದುರಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು. ಬಳಿಕ ಇಬ್ಬರು ನಟರೂ ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+