Bigg Boss Kannada 12: ಸುದೀಪ್ ಹುಟ್ಟುಹಬ್ಬದಂದೇ ಬಿಗ್‌ಬಾಸ್‌ನಿಂದ ದೊಡ್ಡ ಸರ್‌ಪ್ರೈಸ್, ಏನದು?
ನಟ ಕಿಚ್ಚ ಸುದೀಪ್ (Kiccha Sudeep) ಅವರೇ ಬಿಗ್‌ಬಾಸ್ ಕನ್ನಡ ಸೀಸನ್-12 (Bigg Boss Kannada 12) ರಿಯಾಲಿಟಿ ಶೋ ನಡೆಸಿಕೊಡುವುದು ಪಕ್ಕಾ ಆಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆ ಈ ಶೋ ಶುರುವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಬಿಗ್‌ಬಾಸ್‌ನಿಂದ ದೊಡ್ಡ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ. ಈ ಬಾರಿಯ ಕಿಚ್ಚನ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗಲಿದೆ. ಹೀಗಾಗಿ ಬಿಗ್‌ಬಾಸ್ ಬಗ್ಗೆ ಏನು ಅಪ್ಡೇಟ್ ಸಿಗಬಹುದು ಎಂದು ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.
ಬಿಗ್‌ಬಾಸ್ ಸೀಸನ್-11 ಅನ್ನು ಸುದೀಪ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಲ್ಲದೆ, ಮುಂದಿನ ಸೀಸನ್‌ನಿಂದ ನಿರೂಪಣೆ ಮಾಡಲ್ಲ ಎಂದು ಶಾಕ್ ಕೊಟ್ಟಿದ್ರು. ಇದು ಸುದೀಪ್ ಹಾಗೂ ಬಿಗ್‌ಬಾಸ್ ಫ್ಯಾನ್ಸ್‌ಗೆ ಆಘಾತ ನೀಡಿತ್ತು. ಆದರೆ ಸುದೀಪ್ ಅವರ ಅಸಮಾಧಾನಗಳನ್ನು ನಿವಾರಿಸಿ, ಮತ್ತೆ ಅವರನ್ನು ಬಿಗ್‌ಬಾಸ್‌ಗೆ ಕರೆತರುವಲ್ಲಿ ಆಯೋಜಕರು ಯಶಸ್ವಿಯಾಗಿದ್ದಾರೆ. ಹೀಗಾಗಿ ಇನ್ನೂ ನಾಲ್ಕು ಸೀಸನ್‌ಗಳವರೆಗೆ ಸುದೀಪ್ ಅವರೇ ಬಿಗ್‌ಬಾಸ್ ನಡೆಸಿಕೊಡುವುದು ಪಕ್ಕಾ ಆಗಿದೆ.

ಪ್ರೋಮೋ, ದಿನಾಂಕ ಘೋಷಣೆ?
ಸಾಮಾನ್ಯವಾಗಿ ಸೆಪ್ಟೆಂಬರ್ ಅವಧಿಯಲ್ಲೇ ಬಿಗ್‌ಬಾಸ್ ಶುರುವಾಗುತ್ತೆ. ಇದೇ ತಿಂಗಳಲ್ಲಿ ಕಿಚ್ಚನ ಹುಟ್ಟುಹಬ್ಬವೂ ಇದೆ. ಹೀಗಾಗಿ ಈ ಬಾರಿ ಹೊಸತನದೊಂದಿಗೆ ಬಿಗ್‌ಬಾಸ್ ವೇದಿಕೆ ಸಜ್ಜಾಗುತ್ತಿದೆ. ಇತ್ತೀಚೆಗೆ ಬಿಗ್‌ಬಾಸ್ ಹೊಸ ಲೋಗೋ ರಿವೀಲ್ ಮಾಡಿದ್ದ ವಾಹಿನಿಯು, ಬೇರೆ ಯಾವುದೇ ಅಪ್‌ಡೇಟ್ ಅನ್ನು ನೀಡಿರಲಿಲ್ಲ. ಸುದೀಪ್ ಅವರ ಹುಟ್ಟುಹಬ್ಬದಂದೇ ಬಿಗ್‌ಬಾಸ್‌ನಿಂದ ದೊಡ್ಡ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಸುದೀಪ್ ಅವರು ಸೆಪ್ಟೆಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಒಂದು ದಿನ ಮೊದಲೇ ಅಭಿಮಾನಿಗಳಿಗೆ ಸಿಗುತ್ತೇನೆ. ಆ ದಿನ ಯಾರೂ ಮನೆಯ ಹತ್ತಿರ ಬರಬೇಡಿ ಎಂದು ನಿನ್ನೆಯಷ್ಟೇ ಮನವಿಯೂ ಮಾಡಿಕೊಂಡಿದ್ದಾರೆ. ಆದರೆ ಬಿಗ್‌ಬಾಸ್ ಕಿಚ್ಚನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಲು ರೆಡಿಯಾಗಿದೆ. ಅದೇ ದಿನ ಬಿಗ್ ಬಾಸ್ ಸೀಸನ್-12ರ ಪ್ರೋಮೋ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್ ಆರಂಭದ ದಿನಾಂಕವೂ ಅದೇ ದಿನ ಘೋಷಣೆಯಾಗಲಿದೆಯಂತೆ.
ವರದಿಗಳ ಪ್ರಕಾರ ಸೆಪ್ಟೆಂಬರ್ 28ರಂದು ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, 29ರಿಂದಲೇ ಸ್ಪರ್ಧಿಗಳ ಅಸಲಿ ಆಟ ಶುರುವಾಗುವ ಸಾಧ್ಯತೆ ಇದೆ. ಆದರೆ ಯಾವೆಲ್ಲ ಸ್ಪರ್ಧಿಗಳು ಈ ಸೀಸನ್‌ನಲ್ಲಿ ಕಾಣಿಸಿಕೊಳ್ತಾರೆ ಅನ್ನೋದೇ ಈಗಿರುವ ಕುತೂಹಲ. ಇದಕ್ಕೆ ಪ್ರೋಮೋದಲ್ಲಿ ಉತ್ತರ ಸಿಗುತ್ತಾ ಕಾದು ನೋಡೋಣ..
ಕನ್ನಡಕ್ಕೆ ಆದ್ಯತೆ
ಈಗಾಗಲೇ ಕಲರ್ಸ್ ವಾಹಿನಿ ಬಿಗ್‌ಬಾಸ್ ಹೊಸ ಸೀಸನ್‌ನ ಲೋಗೋ ರಿವೀಲ್ ಮಾಡಿದೆ. ಇದರಲ್ಲಿ ಕನ್ನಡ ಸಂಖ್ಯೆ ಇರುವ ಗಡಿಯಾರ ಹಾಗೂ ಕ್ಯಾಮೆರಾ ಥೀಮ್ ಗಮನ ಸೆಳೆದಿದೆ. ಸುದೀಪ್ ಅವರು ಬೇರೆ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮಗಳಿಗೆ ಕೊಡುವ ಆದ್ಯತೆ ಕನ್ನಡಕ್ಕೆ ಕೊಡುತ್ತಿಲ್ಲ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಇದೇ ಕಾರಣಕ್ಕೆ ಈ ಸೀಸನ್‌ನಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಬಿಗ್‌ಬಾಸ್ ಮನೆ ಕೂಡ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೂ ಕಿಚ್ಚ ಹುಟ್ಟುಹಬ್ಬದ ದಿನವೇ ಉತ್ತರ ಸಿಗಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications