38 ತುಂಬಿ 39ನೇ ವಯಸ್ಸಿಗೆ ಕಾಲಿಟ್ಟ ‘ಕೆಜಿಎಫ್’ ಕೋಟೆಯ ಕ್ಯಾಪ್ಟನ್ ರಾಕಿಂಗ್ ಸ್ಟಾರ್ ಯಶ್!
ರಾಕಿಂಗ್ ಸ್ಟಾರ್ ಯಶ್ ಅಬ್ಬರ ಬಲು ಜೋರಾಗಿದ್ದು, ಮತ್ತೊಮ್ಮೆ ಜಗತ್ತಿನಾದ್ಯಂತ ಭಾರಿ ಸೌಂಡ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಫಸ್ಟ್ ಲುಕ್‌ನ ರಿಲೀಸ್ ಮಾಡಿ 'ಕೆಜಿಎಫ್' ಬಳಿಕ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ರಾಕಿಭಾಯ್ ಯಶ್ ಅವ್ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಎಲ್ಲೆಲ್ಲೂ ಅಭಿಮಾನಿಗಳ ಸಂಭ್ರಮ ಮೇಳೈಸಿದೆ. ಹಾಗೇ ರಾಕಿಭಾಯ್ ಮುಂದಿನ ಸಿನಿಮಾಗಳ ಬಗ್ಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ!
ನಟ ಯಶ್ ಅಂದುಕೊಂಡ ಗುರಿ ಸಾಧಿಸುವ ತನಕ ನಿಲ್ಲಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ, ಸಾರ್ವಕಾಲಿಕ ವಿಚಾರ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನು, ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಯಶಸ್ಸು ಯಶ್‌ಗೆ ಸಲ್ಲಬೇಕು. ನಟ ಯಶ್ ಇಂದು ತಮ್ಮ ಬರ್ತ್ ಡೇ ಸಂಭ್ರಮದಲ್ಲಿ ಇದ್ದು, 38 ತುಂಬಿ 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹೀಗಾಗಿ 'ಕೆಜಿಎಫ್' ಕೋಟೆಯ ಕ್ಯಾಪ್ಟನ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ, ಶುಭಾಶಯಗಳ ಸುರಿಮಳೆ ಇದೀಗ ಸುರಿಯುತ್ತಿದೆ.

2018ರಲ್ಲಿ ಹುಟ್ಟಿತ್ತು ಹೊಸ ಭರವಸೆ
ಹೌದು ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳು ತಮ್ಮ ಖ್ಯಾತಿ, ಬಲ ಕಳೆದುಕೊಳ್ಳುತ್ತಿವೆ ಎಂಬ ಆರೋಪ ಇತ್ತು. ಅದರಲ್ಲೂ ದೊಡ್ಡ ದೊಡ್ಡ ನಟರು ಆರ್ಭಟಿಸಿದ್ದ, ಕನ್ನಡ ಸಿನಿಮಾ ಇಂಡಸ್ಟ್ರಿ ಸೊರಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈ ಮಾತುಗಳನ್ನು ನಟ ಯಶ್ 2018ರಲ್ಲಿ ಸುಳ್ಳು ಮಾಡಿ ಕನ್ನಡ ಸಿನಿ ಜಗತ್ತಿನ ಗತ್ತು ಏನು? ಅಂತಾ ಜಗತ್ತಿಗೇ ತೋರಿಸಿದ್ದರು. ಈಗ ರಾಕಿಭಾಯ್ ನಟ ಯಶ್ ಇನ್ನೂ ಒಂದು ಹೆಜ್ಜೆ ದೊಡ್ಡದಾಗಿ ಮುಂದೆ ಇಟ್ಟು, ಯಶ್-19 ಮೂಲಕ ಹಾಲಿವುಡ್ ಲೆವೆಲ್ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ ರಾಕಿಭಾಯ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮ ಮೇಳೈಸಿದೆ.
ಯಶ್ ಬೆಳವಣಿಗೆ ಬಗ್ಗೆ ಹೆಮ್ಮೆ!
'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿತ್ತು, ನಂತರ 2022ರಲ್ಲಿ 'ಕೆಜಿಎಫ್-2' 1000 ಕೋಟಿ ಕ್ಲಬ್ ಸೇರಿ ಅಬ್ಬರಿಸಿತ್ತು. ಆದ್ರೆ ಕೆಜಿಎಫ್-2 ಬಳಿಕ ಯಶ್ ಅವರ ಯಾವುದೇ ಸಿನಿಮಾಗಳು ಅನೌನ್ಸ್ ಆಗಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಸಖತ್ ಕುತೂಹಲದಿಂದ ಕಾಯ್ತಾ, ಯಶ್-19 ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದರು. ಹೀಗಿದ್ದಾಗ ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಘೋಷಣೆ ಹೊರಡಿಸಿದ್ದರು ನಟ ಯಶ್. ಯಶ್-19 ಸಿನಿಮಾಗೆ 'ಟಾಕ್ಸಿಕ್' ಎಂಬ ಟೈಟಲ್ ಇಡಲಾಗಿತ್ತು. ಹೀಗೆ ಟೈಟಲ್ ಅನೌನ್ಸ್ ಆದ 1 ತಿಂಗಳ ನಂತರ ರಾಕಿಭಾಯ್ ಯಶ್ ಅವರ ಹುಟ್ಟುಹಬ್ಬ ಕೂಡ ಬಂದಿದೆ.
ಆಸ್ಕರ್ ಪ್ರಶಸ್ತಿ ಕೂಡ ಸಿಗುತ್ತಾ?
ಯಶ್ ತಮ್ಮ ಕೆಲಸದ ಮೇಲೆ ಎಷ್ಟು ಶ್ರದ್ಧೆ ವಹಿಸಿದ್ದಾರೆ ಅಂದ್ರೆ, ಅಚ್ಚುಕಟ್ಟಾಗಿ ಎಲ್ಲಾ ಮಾಡಿ ಮುಗಿಸುತ್ತಾರೆ. ಜೊತೆಗೆ ಕನ್ನಡ ಸಿನಿಮಾಗಳಿಗೂ ಹೊಸ ಗತ್ತನ್ನು ತಂದುಕೊಡುತ್ತಿದ್ದಾರೆ. ಈಗ 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕವೇ ಗೋವಾ ಡ್ರಗ್ಸ್ ಲೋಕದ 1960-70ರ ಕಥೆಯನ್ನ ಯಶ್ ಹೇಳಲು ಹೊರಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಕನ್ನಡಕ್ಕೆ ಈ ಸಿನಿಮಾ ಮೂಲಕ 'ಆಸ್ಕರ್' ಪ್ರಶಸ್ತಿ ಕೂಡ ಸಿಗುತ್ತೆ ಅಂತಿದ್ದಾರೆ ಫ್ಯಾನ್ಸ್.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಸರು ಪೂರ್ತಿ ಜಗತ್ತಿಗೇ ಆವರಿಸಲಿ ಎಂಬುದೇ ಕನ್ನಡಿಗರ ಕನಸಾಗಿದೆ. ಯಾಕಂದ್ರೆ ತಮ್ಮ ಮುಂದಿನ ಸಿನಿಮಾದಲ್ಲಿ ಅದ್ಧೂರಿಯಾಗಿ ಏನನ್ನೋ ಮಾಡಲು ಹೊರಟಿದ್ದಾರೆ ನಟ ಯಶ್. ಹೀಗಾಗಿ ಅಭಿಮಾನಿಗಳ ಕುತೂಹಲ ಕೂಡ ಡಬಲ್ ಆಗಿದೆ. ಮುಂದಿನ ವರ್ಷಕ್ಕೆಲ್ಲಾ ಯಶ್ ಅವರ 19ನೇ ಸಿನಿಮಾ ಭರ್ಜರಿ ಸೌಂಡ್ ಮಾಡುತ್ತಾ ರಿಲೀಸ್ ಆಗಲು ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ ಹೆಮ್ಮೆಯ ಕನ್ನಡಿಗ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಬಿಡಿ!












Click it and Unblock the Notifications