ಬಿಗ್‌ಬಾಸ್ ಗೆದ್ದ ಗಿಲ್ಲಿ ನಟನ ಬಗ್ಗೆ ಕಾವ್ಯ ವಿಶೇಷ ಇನ್‌ಸ್ಟಾ ಪೋಸ್ಟ್: ಅಶ್ವಿನಿ ಗೌಡಗೆ ಟಕ್ಕರ್ ಕೊಟ್ರಾ? ಇಲ್ಲಿದೆ ಮಾಹಿತಿ
Kavya Shaiva on Gilli Nata: ಜನರ ಭವಿಷ್ಯದಂತೆ ಬಿಗ್‌ಬಾಸ್ ಕನ್ನಡ 12 ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಸಹ ಸ್ಪರ್ಧಿ ಕಾವ್ಯ ಶೈವ ಸಹ ವಿಶೇಷ ರೀತಿಯಲ್ಲಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಗಿಲ್ಲಿಗೆ ಅಭಿನಂದನೆ ತಿಳಿಸಿದ್ದಾರೆ. ಹಾಗಾದ್ರೆ, ಅದರಲ್ಲಿ ಏನೆಲ್ಲಾ ಬರೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಗ್‌ಬಾಸ್ ಮನೆಗೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದ ಕಾವ್ಯ ಹಾಗೂ ಗಿಲ್ಲಿ ನಟ ಸಖತ್ ಸೌಂಡ್ ಮಾಡಿದ್ದರು. ಇವರ ನಡುವೆ ಉತ್ತಮ ಸ್ನೇಹವಿದ್ದು, ಬಿಗ್‌ಬಾಸ್ ಮನೆಯಲ್ಲಿ ಏನೇ ಜಗಳ ಮಾಡಿಕೊಂಡಿಕೊಂಡರೂ ಒಬ್ಬನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ಈ ಜೋಡಿ ನೋಡಿ ಅಭಿಮಾನಿಗಳು ಇವರಿಬ್ಬರು ಮದುವೆಯಾದ್ರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರು.

ಇನ್ನೂ ಬಿಗ್‌ಬಾಸ್ ಮನೆಯಿಂದ ಬಂದ ಬಳಿಕ ಈ ಬಗ್ಗೆ ಪ್ರಶ್ನೆ ಕೇಳಿದಾಗ ಇಬ್ಬರಿಂದ ಬಂದ ಉತ್ತರ ಒಂದೇ ಆಗಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ. ಮದುವೆ ಏನೂ ಇಲ್ಲ. ಆದರೆ, ನಮ್ಮ ಸ್ನೇಹ ಮಾತ್ರ ಹೀಗೆ ಮುಂದುವರೆಯುತ್ತದೆ ಎಂದು ಹೇಳಿದ್ದರು. ಈ ಮೂಲಕ ತಮ್ಮ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಇದರ ಬೆನ್ನಲ್ಲೇ ಇದೀಗ ಕಾವ್ಯ ಶೈವ ಅವರು ಗಿಲ್ಲಿ ನಟನ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಕಾವ್ಯ ಇನ್‌ಸ್ಟಾ ಪೋಸ್ಟ್‌ನಲ್ಲೇನಿದೆ?: ಬಿಗ್‌ಬಾಸ್ ಗೆದ್ದ ಗಿಲ್ಲಿಯನ್ನು ನಟಿ ಕಾವ್ಯ ಶೈವ ಅಭಿನಂದಿಸಿದ್ದಾರೆ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ ಎಂದು ಶುಭ ಹಾರೈಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಅದರಲ್ಲಿ "ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಹೇ ಗಿಲ್ಲಿ ಅಭಿನಂದನೆಗಳು ಕಣೋ. ಝೀರೋದಿಂದ ಹೀರೋ ಆಗಿದ್ಯಾ. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವ ಹಾಗೇ ಆಗ್ಲಿ. ತುಂಬಾ ತುಂಬ ಒಳ್ಳೆಯದಾಗಲಿ," ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಗಿಲ್ಲಿ ಬಡವ ಅಲ್ಲ ಎಂಬ ಅಶ್ವಿನಿ ಮಾತಿಗೆ ಟಕ್ಕರ್ ಕೊಟ್ರಾ ಎನ್ನುವ ಪ್ರಶ್ನೆಗಳು ಸಹ ಎದ್ದಿವೆ.
ಅಶ್ವಿನಿ ಗೌಡ ಹೇಳಿದ್ದೇನು?: ಈ ಪ್ರಶ್ನೆ ಮೂಡುವುದು ಸಹಜವೇ. ಯಾಕಂದ್ರೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ ಅವರು, ಮಾಧ್ಯಮದವರೊಂದಿಗೆ ಗಿಲ್ಲಿ ವಿನ್ನ ಆಗಿರುವ ಬಗ್ಗೆ ಮಾತನಾಡಿ, "ಗಿಲ್ಲಿಯನ್ನು ಬಡವ ಎಂದು ಕರೆಯುವುದು ತಪ್ಪು. ಬಡತನವನ್ನು ಯಾವತ್ತೂ ಸ್ಟ್ರಾಟಜಿ ಕಾರ್ಡ್ ಆಗಿ ಬಳಸಬಾರದು. ಬಹುಶಃ ಗಿಲ್ಲಿಯ ಈ ಗೆಟಪ್ ಮತ್ತು ಅವರ ಆಟ ಜನರಿಗೆ ಇಷ್ಟ ಆಗಿರಬಹುದು" ಎಂದು ಹೇಳಿದ್ದಾರೆ.
ಕಾವ್ಯರನ್ನು ರೇಗಿಸುತ್ತಿದ್ದ ಗಿಲ್ಲಿ: ಬಿಗ್‌ಬಾಸ್ ಫಿನಾಲೆಯ ಟಾಪ್ 6ನಲ್ಲಿ ಸ್ಥಾನ ಪಡೆದಿದ್ದ ಕಾವ್ಯ ಅವರು ಧನುಷ್, ರಘು ನಂತರ ನಾಲ್ಕನೇಯವಾಗಿ ದೊಡ್ಮನೆಯಿಂದ ಹೊರ ಬಂದಿದ್ದರು. ಗಿಲ್ಲಿ ಮತ್ತು ಕಾವ್ಯ ಜೋಡಿ ನೋಡಿ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಅವರು ಸಣ್ಣಪುಟ್ಟ ವಿಚಾರಕ್ಕೆ ಕೆಣಕಿ ಆಗಾಗ ಕಾವ್ಯ ಅವರನ್ನು ಕಾಲೆಳೆಯುತ್ತಿದ್ದರು. ಜೋಡಿ ಟಾಸ್ಕ್‌ನಲ್ಲಿ ಇಬ್ಬರ ಆಟ ಜನರಿಗೆ ತುಂಬಾ ಇಷ್ಟ ಆಗಿತ್ತು.
ಕಾವ್ಯ ಬಿಟ್ಟುಕೊಡದ ಗಿಲ್ಲಿ: ಇನ್ನೂ ಬಿಗ್‌ಬಾಸ್ ಮನೆಯಲ್ಲಿ ಯಾರೂ ಏನೇ ಹೇಳಿದರೂ ಸಹ ಕೊನೆಯವರೆಗೂ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಟ್ಟಿರಲಿಲ್ಲ. ಗಿಲ್ಲಿ ಕ್ಯಾಪ್ಟನ್ ಆಗಿದ್ದ ವೇಳೆ ರಕ್ಷಿತಾ ಶೆಟ್ಟಿ ಅವರು ಮೂರು ಬಾರಿ ನಾಮಿನೇಷನ್ ಮಾಡಿದ್ದರು. ಆದರೆ, ಗಿಲ್ಲಿ ಅವರು ಕಾವ್ಯ ಅವರನ್ನು ಮಾತ್ರ ಬಿಟ್ಟುಕೊಡದೇ ಉಳಿಸಿಕೊಂಡರು. ಅಷ್ಟರ ಮಟ್ಟಿಗೆ ಕೊನೇವರೆಗೂ ಕಾವ್ಯ ಅವರ ಪರ ನಿಂತು ಗಮನ ಸೆಳೆದರು. ಇದೀಗ ಗಿಲ್ಲಿ ಬಿಗ್‌ಬಾಸ್ ವಿನ್ನರ್ ಆಗಿದ್ದಕ್ಕೆ ಕ್ಯಾವ್ಯ ಅವರು ವಿಶೇಷ ರೀತಿಯಲ್ಲಿ ಶುಭಹಾರೈಸಿದ್ದಾರೆ.
ಪ್ರೋತ್ಸಾಹಿದವರಿಗೆ ಧನ್ಯವಾದ ಹೇಳಿದ ಗಿಲ್ಲಿ: ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಗಿಲ್ಲಿ ತನ್ನ ಪರ ನಿಂತವರನ್ನು ನೆನಪಿಸಿಕೊಂಡರು. ಪ್ರಶಸ್ತಿ ಗೆದ್ದ ಬಳಿಕ ವೇದಿಕೆಯಲ್ಲೇ ನಿಂತು ನನಗೆ ಕಾವ್ಯ, ರಕ್ಷಿತಾ, ರಘು ಅವರು ತುಂಬಾ ಪ್ರೋತ್ಸಾಹ ಮಾಡಿದ್ದರು. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದರು.












Click it and Unblock the Notifications