ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಸುದೀಪ್‌, ಅನುಪಮಾ ಗೌಡ ಅತ್ಯುತ್ತಮ ನಟ-ನಟಿ

ಬೆಂಗಳೂರು, ಜನವರಿ 22: ಪ್ರತಿ ವರ್ಷ ಕನ್ನಡ ಚಿತ್ರಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಬ್ರೇಕ್‌ ಹಾಕಲಾಗಿದ್ದು, ಐದು ವರ್ಷದ ಬಳಿಕ 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ.

2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಇಂದು(ಜನವರಿ 22)ರಂದು ಪ್ರಕಟವಾಗಿದೆ. ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕಂ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

Karnataka State Film Awards 2019 Announced Here Is The List

ಒಟ್ಟು 25 ವಿಭಾಗಗಳಿಗೆ 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ. 24 ಚಿತ್ರರಂಗದ ವಿವಿಧ ವಿಭಾಗಳು ಹಾಗೂ ಒಂದು ತೀರ್ಪುಗಾರರ ವಿಶೇಷ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಒಟ್ಟು 180 ಸಿನಿಮಾಗಳು 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು ಎಂದು ತಿಳಿದು ಬಂದಿದೆ.

2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವರ

1. ಮೊದಲನೇ ಅತ್ಯುತ್ತಮ ಚಿತ್ರ-ಮೋಹನದಾಸ
2. ಎರಡನೇ ಅತ್ಯುತ್ತಮ ಚಿತ್ರ-ಲವ್ ಮಾಕ್ಟೇಲ್
3. ಮೂರನೇ ಅತ್ಯುತ್ತಮ ಚಿತ್ರ- ಅರ್ಘ್ಯಂ
4. ವಿಶೇಷ ಸಾಮಾಜಿಕ ಕಳಕಳಿ ಚಿತ್ರ-ಕನ್ನೇರಿ
5. ಅತ್ಯುತ್ತಮ ಜನಪ್ರಿಯ ಮನೋರಂಜನಾ ಚಿತ್ರ-ಇಂಡಿಯಾ V/S ಇಂಗ್ಲೆಂಡ್‌
6. ಅತ್ಯುತ್ತಮ ಮಕ್ಕಳ ಚಿತ್ರ- ಎಲ್ಲಿ ಆಡೋದು ನಾವು ಎಲ್ಲಿ ಆಡೋದು
7. ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ-ಗೋಪಾಲಗಾಂಧಿ
8. ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ- ತ್ರಿಬಲ್ ತಲಾಕ್
9. ಅತ್ಯುತ್ತಮ ನಟ- ಸುದೀಪ್(ಪೈಲ್ವಾನ್)
10. ಅತ್ಯುತ್ತಮ ಪೋಷಕ ನಟಿ- ಅನೂಷಾ ಕೃಷ್ಣ(ಬ್ರಾಹ್ಮಿ)

Karnataka State Film Awards 2019 Announced Here Is The List

11. ಅತ್ಯುತ್ತಮ ಕಥೆ- ಜಯಂತ್ ಕಾಯ್ಕಿಣಿ ಚಿತ್ರ ಇಲ್ಲಿರಲಾರೆ ಅಲ್ಲಿ ಹೋಗಲಾರೆ
12. ಅತ್ಯುತ್ತಮ ಪೋಷಕ ನಟ- ತಬಲಾ ನಾಣಿ-(ಕೆಮೆಸ್ಟ್ರಿ ಆಫ್ ಕರಿಯಪ್ಪ)
13. ಅತ್ಯುತ್ತಮ ನಟಿ- ಅನುಪಮಾ ಗೌಡ (ತ್ರಯಂಬಕಂ)
14. ಅತ್ಯುತ್ತಮ ಚಿತ್ರಕಥೆ- ಡಾರ್ಲಿಂಗ್ ಕೃಷ್ಣ(ಲವ್ ಮಾಕ್ಟೇಲ್) ಸ
15.ಅತ್ಯುತ್ತಮ ಗಾಯಕ- ರಘು ದೀಕ್ಷಿತ್(ಲವ್ ಮಾಕ್ಟೇಲ್)
16. ಅತ್ಯುತ್ತಮ ಗಾಯಕಿ- ಡಾ. ಜಯದೇವಿ ಜಿಂಗಮ ಶೆಟ್ಟಿ(ರಾಗ ಭೈರವಿ)
17. ಅತ್ಯುತ್ತಮ ಸಂಗೀತ ನಿರ್ದೇಶಕ- ವಿ. ಹರಿಕೃಷ್ಣ(ಯಜಮಾನ)
18. ಸಸಅತ್ಯುತ್ತಮ ಛಾಯಾಗ್ರಹಣ: ಜಿ. ಎಸ್ ಭಾಸ್ಕರ್ (ಮೋಹನದಾಸ)
19. ಅತ್ಯುತ್ತಮ ಸಂಭಾಷಣೆ- ಬರಗೂರು ರಾಮಚಂದ್ರಪ್ಪ(ಅಮೃತಮತಿ)
20. ಅತ್ಯುತ್ತಮ ಗೀತ ರಚನೆ - ರಝಾಕ್ ಪುತ್ತೂರು(ಪೆನ್ಸಿಲ್ ಬಾಕ್ಸ್)
21. ಅತ್ಯುತ್ತಮ ಸಂಕಲನ: ಶಿವು(ಝಾನ್ಸಿ ಐಪಿಎಸ್)
22. ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ(ಸುಗಂಧಿ)
23. ಅತ್ಯುತ್ತಮ ಬಾಲನಟ; ಮಾಸ್ಟರ್ ಪ್ರೀತಂ(ಮಿಂಚು ಹುಳ)
24.ಅತ್ಯುತ್ತಮ ಕಲಾ ನಿರ್ದೇಶನ- ಹೊಸ್ಮನೆ ಮೂರ್ತಿ(ಮೋಸನದಾಸ)
25. ಅತ್ಯುತ್ತಮ ಸಂಕಲನ: ಶಿವು(ಝಾನ್ಸಿ ಐಪಿಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+