ಕನ್ನಡಕ್ಕೆ ಬರ್ತಿದ್ದಾರೆ ಕರೀನಾ ಕಪೂರ್: ಅಧೀಕೃತ ಘೋಷಣೆ ಬಾಕಿ?
ಕನ್ನಡಿಗರ ಸಿನಿಮಾಗಳು ಹಳ್ಳಿಯಿಂದ ಹಿಡಿದು, ದಿಲ್ಲಿ ತನಕ ಅಬ್ಬರಿಸುತ್ತಿವೆ. ದಿಲ್ಲಿ ಮಾತ್ರ ಅಲ್ಲ, ಲಂಡನ್‌ನಲ್ಲಿ ಕೂಡ ಕನ್ನಡಿಗರ ಸಿನಿಮಾಗಳು ಕಹಳೆ ಮೊಳಗಿಸಿವೆ. ಹೀಗಿದ್ದಾಗಲೇ ನಟ ಯಶ್ ಅವರ 19ನೇ ಸಿನಿಮಾ ಹಲ್‌ಚಲ್ ಎಬ್ಬಿಸಿತ್ತು. 'ಟಾಕ್ಸಿಕ್' ಟೈಟಲ್ ಕೊಟ್ಟು ಈ ಸಿನಿಮಾಗೆ ರಾಕಿಭಾಯ್ ಯಶ್ ಸಜ್ಜಾಗಿರುವ ಸಮಯಕ್ಕೇ, ಕನ್ನಡಕ್ಕೆ ಕರೀನಾ ಕಪೂರ್ ಬರ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
'ಟಾಕ್ಸಿಕ್' ಫಸ್ಟ್ ಲುಕ್ ನೋಡುತ್ತಿದ್ರೆ ದೊಡ್ಡ ಪ್ಲಾನ್ ಮಾಡುತ್ತಿರುವಂತೆ ಕಾಣುತ್ತಿದ್ದು. ಹೀಗೆ ಈಗಾಗಲೇ ಭಾರತ ಸಿನಿಮಾ ರಂಗ ಶೇಕ್ ಮಾಡಿದ ಯಶ್, ಹಾಲಿವುಡ್ ರಣರಂಗದಲ್ಲಿ ಖದರ್ ತೋರಿಸಲು ಸಜ್ಜಾಗಿದ್ದಾರೆ. ಕನ್ನಡ ನೆಲದ ನಟ ಯಶ್ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿದ್ದು, ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಸಹಿತ ಭಾರತದ ಸಿನಿ ಫ್ಯಾನ್ಸ್ 'ಟಾಕ್ಸಿಕ್' ಫಸ್ಟ್‌ಲುಕ್‌ಗೆ ಫಿದಾ ಆಗಿದ್ದಾರೆ. ಇದೇ ವೇಳೆ ಕರೀನಾ ಕಪೂರ್ ಎಂಟ್ರಿ ಆಗ್ತಿದ್ದಾರೆ ಈ ಸಿನಿಮಾಗೆ ಅನ್ನೋ ಸುದ್ದಿ ಕ್ರೇಜ್ ಕ್ರಿಯೇಟ್ ಮಾಡಿದೆ.

ಕನ್ನಡಕ್ಕೆ ಬರ್ತಿದ್ದಾರಾ ಕರೀನಾ?
ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಈ ನಟಿಗೆ ವಯಸ್ಸು 43 ಆಗಿದ್ದರೂ, ಈಗ ಕೂಡ ಸ್ವೀಟ್ 16 ರೀತಿ ಕಂಗೊಳಿಸುತ್ತಾಳೆ ಕರೀನಾ. ಹೀಗೆ ನಟಿ ಕರೀನಾ ಕಪೂರ್ ಅವರಿಗೆ ಭಾರಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದೆ. ಹಿಂದೆ ಸಲ್ಮಾನ್ ಖಾನ್, ಶಾರುಖ್ ಖಾನ್ ಸಹಿತ ದೊಡ್ಡ ದೊಡ್ಡ ನಟರ ಜೊತೆ ನಟಿಸಿದ್ದ ಕರೀನಾ ಈಗ ಕನ್ನಡಿಗ ಯಶ್ ಜೊತೆಗೆ ಸಾಥ್ ನೀಡಿದ್ದಾರಂತೆ. ಈ ಬಗ್ಗೆ ಕರೀನಾ ಕಪೂರ್ ತಂಡದ ಮಾಹಿತಿ ಕೂಡ ಹಲ್‌ಚಲ್ ಎಬ್ಬಿಸಿದೆ. ಹಾಗಾದರೆ ಏನದು ದೊಡ್ಡ ಸುದ್ದಿ?
ಕಂಗೊಳಿಸುತ್ತಾರಾ ಕರೀನಾ ಕಪೂರ್?
ಕನ್ನಡ ಸಿನಿಮಾಗಳ ಗತ್ತು ಬದಲಾಗಿ ಹೋಗಿದ್ದು, ಎಲ್ಲೆಲ್ಲೂ ಸ್ಯಾಂಡಲ್‌ವುಡ್ ಸಿನಿಮಾಗಳ ಅಬ್ಬರ ಜೋರಾಗಿದೆ. ಅದ್ರಲ್ಲೂ ಕೆಜಿಎಫ್, ಕಾಂತಾರ, ಚಾರ್ಲಿ, ವಿಕ್ರಾಂತ್ ರೋಣದಂಥ ಸಿನಿಮಾಗಳ ಜೊತೆಗೆ ಕಬ್ಜ, ವೇದ, ಕಾಟೇರ ಸೌಂಡ್ ಬಲು ಜೋರಾಗಿದೆ. ಹೀಗೆ ಎಲ್ಲೆಲ್ಲು ಸಂಭ್ರಮ ಮೇಳೈಸುವಾಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದು ಏನಂದ್ರೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಕನ್ನಡಿಗನ ಸಿನ್ಮಾದಲ್ಲಿ ಹೀರೋಯಿನ್ ಆಗಿ ನಟಿಸುತ್ತಾರೆ ಎಂದು.

ಈ ಬಗ್ಗೆ ಸ್ವತಃ ಕರೀನಾ ಕಪೂರ್ ಅವರ ತಂಡದ ಹೇಳಿಕೆ ಉಲ್ಲೇಖಿಸಿ ವರದಿಗಳು ಓಡಾಡಿ ಹಲ್‌ಚಲ್ ಎಬ್ಬಿಸಿವೆ. ದೊಡ್ಡ ಸುದ್ದಿಯೊಂದು ಕಾದಿದೆ ಎನ್ನು ಸೂಚನೆಯನ್ನ ಕರೀನಾರ ಟೀಂ ನೀಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಗೆ ಬಿದ್ದಿಲ್ಲ ಆದ್ರೂ ಈಗ ಎಲ್ಲೆಲ್ಲೂ ಹಬ್ಬಿರುವ ಮಾಹಿತಿ ಬಹುತೇಕ ನಿಜ ಎನ್ನಲಾಗಿದೆ. ಹೀಗಾಗಿ ಕರೀನಾ ಕನ್ನಡಕ್ಕೆ ಎಂಟ್ರಿ ಕೊಟ್ಟು, ಹವಾ ಎಬ್ಬಿಸೋದು ಬಹುತೇಕ ಖಚಿತ.

ಟಾಕ್ಸಿಕ್ ಸೃಷ್ಟಿ ಮಾಡಿದೆ ತಲ್ಲಣ
ದಕ್ಷಿಣ ಭಾರತದ ಸಿನಿಮಾ ಅಂದ್ರೆ ದೊಡ್ಡ ಹವಾ ಇದೆ. ಇಷ್ಟೆಲ್ಲದರ ಮಧ್ಯೆ ಈಗ ಕನ್ನಡ ಸಿನ್ಮಾ ಅಂದ್ರೆ ಮತ್ತೊಂದು ರೇಂಜ್ ಹವಾ ಕ್ರಿಯೇಟ್ ಆಗಿದೆ. ಕನ್ನಡ ನಾಡಲ್ಲಿ ಬೆಳೆದು ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಸಜ್ಜಾದ ಯಶ್ ಅವರಿಗು ಭರ್ಜರಿ ಸಪೋರ್ಟ್ ಸಿಗುತ್ತಿದ್ದು, ಉತ್ತರ ಭಾರತದಲ್ಲಿ ಯಶ್ ಫುಲ್ ಫೇಮಸ್. ಹೀಗಿದ್ದಾಗಲೆ ಯಶ್‌ರ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ನಟನೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಾಯಿ ಪಲ್ಲವಿ ಹೆಸರು ಕೇಳಿಬಂದಿತ್ತು. ಯಶ್ ಮುಂದಿನ ಸಿನಿಮಾ 'ಟಾಕ್ಸಿಕ್' ಅಖಾಡಕ್ಕೆ ಕರೀನಾ ಎಂಟ್ರಿ ಬಹುತೇಕ ಪಕ್ಕಾ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಹೊರಗೆ ಬೀಳಬೇಕಿದೆ.
-
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications