Kantara: ಕಾಂತಾರ ಸಿನಿಮಾದಲ್ಲಿ ರಿಷಬ್‌ ಜೊತೆ ಮಿಂಚಿದ್ದ "ಅಪ್ಪು" ಇನ್ನಿಲ್ಲ

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾ ಅಭಿಮಾನಿಗಳಿಗೆ ನೋವಿನ ವಿಚಾರವೊಂದು ಹೊರಬಿದ್ದಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್‌ ಕಂಬಳದ ದೃಶ್ಯವೊಂದನ್ನು ತೆರೆ ಮೇಲೆ ತಂದಿದ್ದರು. ಇದು ಕೂಡ ಸಿನಿಮಾ ಒಂದು ಹೈಲೈಟ್‌ ಆಗಿತ್ತು. ಈ ದೃಶ್ಯದಲ್ಲಿ ರಿಷಬ್‌ ಜೊತೆ ಜನಪ್ರಿಯ ಕೋಣಗಳ ಜೋಡಿ ಕೂಡ ನಟಿಸಿತ್ತು. ಅವುಗಳೊಂದಿಗೆ ರಿಷಬ್‌ ಕಂಬಳ ಸ್ಪರ್ಧೆಯಲ್ಲಿ ಗೆದ್ದು ಬೀಗುವ ದೃಶ್ಯಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಈ ಜೋಡಿ ಕೋಣಗಳ ಪೈಕಿ ʼಅಪ್ಪುʼ ಎಂಬ ಜನಪ್ರಿಯ ಕೋಣ ಕೊನೆಯುಸಿರೆಳೆದಿದೆ.

ಕಾಂತಾರ ಚಿತ್ರದ ದೃಶ್ಯಗಳಲ್ಲಿ ನಟ ರಿಷಬ್ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಈ ಜನಪ್ರಿಯ ಕೋಣ "ಅಪ್ಪು" ವಯೋಸಹಜವಾಗಿ ಸಾವನ್ನಪ್ಪಿದೆ. ಕಾಂತಾರ ಸಿನಿಮಾ ಬಳಿಕ ಇದು "ಕಾಂತಾರದ ಕೋಣ" ಎಂದೇ ಗುರುತಿಸಿಕೊಳ್ಳುತ್ತಿತ್ತು. ಈ ಕೋಣಕ್ಕೆ ಕರಾವಳಿ ಭಾಗದಲ್ಲಿ ಹಾಗೂ ಕಂಬಳ ಪ್ರೇಮಿಗಳಲ್ಲಿ ಹೆಚ್ಚಿನ ಅಭಿಮಾನಿ ಬಳಗವೇ ಇತ್ತು ಎನ್ನಲಾಗಿದೆ. ನಿಜವಾಗಿ ಹಾಗೂ ತೆರೆ ಮೇಲೂ ಮಿಂಚಿದ್ದ ಈ ಕೋಣ ಇನ್ನು ನೆನಪು ಮಾತ್ರ.

Kantara Movie Fame Rishab Shetty Bullock Appu Passes Away

ಬೈಂದೂರಿನ ಬೊಳಂಬಳ್ಳಿಯ ಕಂಬಳ ಪ್ರೇಮಿಯಾಗಿರು ಪರಮೇಶ್ವರ ಭಟ್ ಎಂಬುವವರು ಈ ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ಪೋಷಿಸಿ ಸಾಕಿದ್ದರು. ಇನ್ನು ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿ ಇದೇ ಕೋಣಗಳನ್ನ ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ಶೂಟಿಂಗ್‌ಗೂ ಮುನ್ನವೇ ಚಿತ್ರತಂಡವು ಇದೇ ಕೋಣಗಳಿಗೆ ತರಬೇತಿ ನೀಡಿತ್ತು ಎನ್ನಲಾಗಿದೆ. ಈ ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳ ಮೂಲಕವೇ ರಿಷಬ್‌ ಶೆಟ್ಟಿಯವರು ಕಂಬಳ ಓಡಿಸುವ ತರಬೇತಿ ಪಡೆದಿದ್ದರು. ಈ ಕೋಣಗಳ ಜೊತೆಗಿನ ಒಡನಾಡದಿಂದಲೇ ರಿಷಬ್‌ ಶೆಟ್ಟಿ ಕಾಂತಾರದಲ್ಲಿ ಕಂಬಳದ ದೃಶ್ಯಗಳನ್ನು ಚಿತ್ರೀಕರಿಸಲು ಅನುಕೂಲವಾಯಿತು ಎಂದು ಹೇಳಲಾಗಿತ್ತು.

ಈ ಮೃತ ಅಪ್ಪು ಕೋಣ ಸಿನಿಮಾದಲ್ಲಿ ಮಾತ್ರವಲ್ಲ, ಕಂಬಳದ ಅಂಗಳದಲ್ಲೂ ಚಾಂಪಿಯನ್‌ ಆಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಕುಂದಾಪುರ ವ್ಯಾಪ್ತಿಯಲ್ಲಿ ನಡೆದ ಕಂಬಳ ಸ್ಪರ್ಧೆಗಳಲ್ಲಿ ಹಲವು ವರ್ಷಗಳ ಕಾಲ ಅಪ್ಪು ಚಾಂಪಿಯನ್‌ ಆಗಿತ್ತು. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಕಂಬಳದಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಅಪ್ಪು ನಿಧನದ ಸುದ್ದಿ ಕೇಳಿ ಕಂಬಳ ಪ್ರಿಯರು ಭಾವುಕರಾಗಿದ್ದಾರೆ, ಸಂತಾಪ ಸೂಚಿಸಿದ್ದಾರೆ. ಅಪ್ಪುವಿನ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳಂತೆ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗಿದೆ. ಸಿನಿಮಾದಲ್ಲಿ ಮಿಂಚಿದ್ದ ಈ ಕೋಣ ಇತಿಹಾಸದ ಪುಟ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+